ಚಿತ್ತಾಪುರ : ತಾಲೂಕಿನ ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವವು 24 ರಂದು ರವಿವಾರ ಶ್ರೀ ಮಠದ ಉತ್ತರಾಧಿಕಾರಿ ಪೂಜ್ಯ ಶ್ರೀ ಸಿದ್ದಲಿಂದ ದೇವರ ಸಾನಿದ್ಯದಲ್ಲಿ ನಡೆಯಲಿದೆ ಎಂದು ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ ತಿಳಿಸಿದ್ದಾರೆ.
ದಿನಾಂಕ 23 ರಂದು ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಕಲಬುರಗಿಯ ಬಸವೇಸ್ವರ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಂಜೆ 7 ಗಂಟೆಗೆ ಸಕಲ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ( ವಚನೋತ್ಸವದ ) ಮೆರವಣಿಗೆ ನಡೆಯಲಿದೆ.
ಇದನ್ನೂ ಓದಿ: ಪಿಎಸ್ಐ ಆಕ್ರಮ: ಮತ್ತೋರ್ವ ಆರೋಪಿ ಬಂಧನ
ನಾಡಿನ ವಿವಿಧ ಸಾಂಸ್ಕøತಿಕ ಕಲಾ ತಂಡಗಳು ಪಲ್ಲಕ್ಕಿಯ ಮೆರವಣಿಗೆಗೆ ರಂಗು ತರಲಿವೆ, ದಿನಾಂಕ 24 ರಂದು ರವಿವಾರ ಬೆಳಿಗ್ಗೆಯಿಂದ ಶ್ರೀ ಸಿದ್ಧಲಿಂಗೇಶ್ವರರ ಕತೃ ಗದ್ದುಗೆಗೆ ಪುಷ್ಪಾಲಂಕರ, ವಿಶೇಷ ಅಭಿಷೇಕ, ಪೂಜೆಗಳು ನಡೆಯಲಿವೆ ಸಂಜೆ ನಂದಿಕೊಲಿನ ಮೆರವಣಿಗೆ, ಪುರವಂತಿಕೆ, ಕಳಸಾರೋಹಣ ಹಾಗೂ ಸರಿಯಾಗಿ 6-30 ಗಂಟೆಗೆ ಮಹಾರಥೋತ್ಸವ ನಡೆಯಲಿದೆ.
ರಥೋತ್ಸವದಲ್ಲಿ ಹಾವೇರಿ ಹುಕ್ಕೇರಿ ಮಠದ ಪೂಜ್ಯ ಸದಾಶೀವ ಮಹಾಸ್ವಾಮಿಗಳು ಹಾಗೂ ಹಲವು ಪೂಜ್ಯರು ಭಾಗಿಯಾಗಲಿದ್ದಾರೆ ಎಂದು ಡಾ. ಗುಂಡಣ್ಣ ಬಾಳಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಹಕಾರ ಇಲಾಖೆಯಲ್ಲಿ ಲಂಚಾವತಾರ: ಬೆಚ್ಚಿಬೀಳುವ ಮಾಹಿತಿ ಹೊರಗೆಡವಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ