ಕಲಬುರಗಿ: ಇಲ್ಲಿನ ಹುಮನಾಬಾದ್ ರಿಂಗ್ ರಸ್ತೆಯ ಬ್ಯಾರೆ ಹಿಲ್ಸ್ ವೃತ್ತದಲ್ಲಿರುವ ಪ್ರತಿಷ್ಠಿತ ಮಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಫಾರುಖ ಅಹ್ಮದ್ ಮಣ್ಣೂರ ಅವರು ಆಯೋಜಿಸಿದ್ದ ರಂಜಾನ್ ಹಬ್ಬದ ಪ್ರಯುಕ್ತ ಇಫ್ತಾರ್ ಕೂಟ ಜರುಗಿತು. ಹಿಂದೂ, ಮುಸ್ಲಿಂರು ಎನ್ನದೆ ಎಲ್ಲ ಜಾತಿ ಜನಾಂಗದ ಪ್ರಮುಖರನ್ನು ಒಂದೇಡೆ ಸೇರಿಸಿ ಕೋಮು ಸೌಹಾರ್ದತೆ ಪ್ರತೀಕವಾಗಿ ಇಫ್ತಾರ್‌ಕೂಟ ಏರ್ಪಡಿಸಲಾಗಿತ್ತು. ಶಾಂತಿ, ಸಹಬಾಳ್ವೆ, ಸಾಮರಸ್ಯದ ಸಂದೇಶ ಸಾರಲಾಯಿತು.
ಇದನ್ನೂ ಓದಿ: ಮುಷ್ಠಹಳ್ಳಿ:ಡಾ:ಬಿ.ಆರ್ ಅಂಬೇಡ್ಕರ್ ೧೩೧ನೇ ಜಯಂತಿ
ಕೆಎಂಡಿಸಿ ರಾಜ್ಯ ನಿರ್ದೇಶಕ ಸದ್ದಾಂ ಹುಸೇನ್ ವಾಜಿರ್ಗಾವ್, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ನ್ಯಾಯವಾದಿ ವಹಾಜ್ ಬಾಬಾ, ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಾಸೀರ ಹುಸೇನ್ ಉಸ್ತಾದ್, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಸಹಾಯಕ ಪೊಲೀಸ್ ಆಯುಕ್ತ ಜೆ.ಎಚ್.ಇನಾಮದಾರ್, ಎಎಪಿ ನಗರ ಅಧ್ಯಕ್ಷ ಸಜ್ಜಾದ ಅಲಿ ಇನಾಂದಾರ, ಅರುಣಕುಮಾರ ಪಾಟೀಲ, ವಿಜಯ ರಾಠೊಡ, ನ್ಯಾಯವಾದಿ ಮಜರ ಹುಸೇನ, ಸಂತೋಷ ಬಿಲಗುಂದಿ, ರಾಜು ಭೀಮಳ್ಳಿ, ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ, ಕೃಷ್ಣಾ ರೆಡ್ಡಿ, ಸಂಜೀವ ಯಾಕಾಪೂರ, ಅಲಿಂ ಇನಾಮದಾರ, ಅದನಾನ ಖಾನ್, ಬಿ. ರೇಣುಕಾಚಾರ್ಯ, ಸಚಿನ ಫರಹತಾಬಾದ, ಸಾಧಿಖ ಅಲಿ ದೇಶಮುಖ ಹಾಗೂ ರಾಜಕೀಯ ಮುಖಂಡರು, ಮುಸ್ಲಿಂ ಬಾಂಧವರು, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.