ಸಮಾನತೆಯ ಪಾಠ ಕಲಿಸಿದ ಅಣ್ಣ ಬಸವಣ್ಣ ಮಹಿಳೆಯರ ಪಾಲಿನ ದೇವರು: ಮಾಕಲ್

0
44

ಶಹಾಬಾದ: ವರ್ಣ ವ್ಯವಸ್ಥೆಯ ನೆಪದಲ್ಲಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದ ಮಹಿಳೆಯರಿಗೆ ಸಾಮಾಜಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯ ಕಲ್ಪಿಸಿ, ಸಮಾನತೆಯ ಪಾಠ ಕಲಿಸಿದ ಅಣ್ಣ ಬಸವಣ್ಣ ಮಹಿಳೆಯರ ಪಾಲಿನ ದೇವರು ಎಂದು ಕಲಬುರಗಿ ಪಿಡಿಎ ಇಂಜಿನಿಯರಿಂಗ ಕಾಲೇಜಿನ ಉಪನ್ಯಾಸಕ ಸಂಜಯ್ ಮಾಕಲ್ ಹೇಳಿದರು.

ಅವರು ಶುಕ್ರವಾರ ಹಳೆಶಹಾಬಾದನ ಬಸವಾದಿ ಶರಣರ ಒಕ್ಕೂಎ ಸಮಿತಿ ಹಾಗೂ ಬಸವಪರ ಸಂಘಟನೆಗಳ ವತಿಯಿಂದ ಬಸವ ಜಯಂತಿ ಹಾಗೂ ಬಸವಾದಿ ಶರಣರ ಜಯಂತೋತ್ಸವ ನಿಮಿತ್ತವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಯುಗದ ಉತ್ಸಾಹ ಬಸವಣ್ಣ ವಿಷಯದ ಕುರಿತು ಮಾತನಾಡಿದರು.

Contact Your\'s Advertisement; 9902492681

ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಅಕ್ರಮ: ದಾಖಲೆಗಳಿದ್ದರೆ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಬಹುದು-ಕುಮಾರಸ್ವಾಮಿ

ವರ್ಣ ವ್ಯವಸ್ಥೆಯಲ್ಲಿ ಶೂದ್ರರು ಅತ್ಯಂತ ಕೆಳಮಟ್ಟದಲ್ಲಿದ್ದರು. ೧೨ನೇ ಶತಮಾನಕ್ಕೂ ಮೊದಲು ಮಹಿಳೆಯರು ಶೂದ್ರರಿಗಿಂತಲೂ ಅತ್ಯಂತ ಕೊನೆಯ ಸ್ಥಾನದಲ್ಲಿದ್ದರು. ಹೀಗಿರುವಾಗ ಶೋಷಿತರು ಮತ್ತು ಮಹಿಳೆಯರನ್ನು ಸಮಾಜದ ಮುನ್ನೆಲೆಗೆ ತಂದು, ಅವರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವಲ್ಲಿ ಅಣ್ಣ ಬಸವಣ್ಣ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

೧೨ನೇ ಶತಮಾನದಲ್ಲಿ ಮನಸ್ಸಿನಾಳದಿಂದ ಮಹಿಳೆಯರು ಮತ್ತು ಶೋಷಿತರನ್ನು ಮುಕ್ತಗೊಳಿಸುವ ಯತ್ನವನ್ನು ಬಸವಣ್ಣ ಮಾಡಿದ್ದರು. ಆದರೆ, ಇಂದು ಕೇವಲ ಬಾಯಿ ಮಾತಿನಲ್ಲಿ ಸ್ತ್ರೀ ಸಮಾನತೆ ಹಾಗೂ ಶೋಷಿತ ಸಮಾಜಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವ ಕುರಿತು ಭ್ರಮೆ ಹುಟ್ಟಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶರಣ ಪರಂಪರೆಯ ಬಸವಣ್ಣನವರ ನೇತೃತ್ವದಲ್ಲಿ ಶರಣರು ತಮ್ಮ ಜೀವನದ, ಬದುಕಿನ ಮೌಲ್ಯಗಳನ್ನು ಗುರುತಿಸಿಕೊಂಡರು.ಕೇವಲ ಮೌಲ್ಯಗಳನ್ನು ಗುರುತಿಸಿಕೊಂಡು ಅವುಗಳನ್ನು ಪಠಿಸಲಿಕ್ಕೆ, ಹೇಳುವುದಕ್ಕೆ ಸೀಮಿತವಾಗಿರಿಸದೆ ಅವುಗಳನ್ನು ಕಾಯ, ವಾಚಾ, ಮನಸಾ ಬದುಕಿನಲ್ಲಿ ಅಳವಡಿಸಿಕೊಂಡವರು ಬಸವಣ್ಣನವರು.ದಮನಿತರ ಬದುಕು ಹಸನಾಗಿಸಲು ಅವರುಗಳಿಗೆ ವಿದ್ಯೆಯೆಂಬ ಜ್ಯೋತಿ ಬೆಳಗಿಸಿ ಶೋಷಿತರು, ಸ್ತ್ರೀ ಯರಿಗೆ ಸಮಾನತೆಯ ಪಾಠ ಮಾಡಿದರು.

ಇದನ್ನೂ ಓದಿ: ಬೆಂಗಳೂರಿನ ‘ಕೊಳದ ಮಠದ ಸ್ವಾಮಿ’ ಶಾಂತವೀರ ಸ್ವಾಮೀಜಿ ಅಗಲಿಕೆ

ದೇವರಲ್ಲಿ ಭಕ್ತಿ ಇರಬೇಕು ಆದರೆ ದೇವರ ಹೆಸರಿನಲ್ಲಿ ಮೂಡನಂಬಿಕೆಗಳಿಗೆ ಸ್ಥಾನವಿರಲಿಲ್ಲ. ಸ್ವರ್ಗ – ನರಕಗಳು ಬೇರೆಡೆ ಇಲ್ಲ, ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಪ್ರತಿಪಾದಿಸಿ, ಸಮಾಜದ ನವ ಕಲ್ಪನೆಗೊಂದು ಹೊಸ ಭಾ? ಬರೆದರು.ಕಾಯಕ, ದಾಸೋಹ ತತ್ವಗಳನ್ನು ಮುಂದಿಟ್ಟು ಹುಟ್ಟಿನಿಂದ ಅಥವಾ ಅವರು ಮಾಡುವ ಕಾಯಕದಿಂದಾಗಲೀ ಯಾರೂ ಶ್ರೇ?ರಲ್ಲ, ಯಾರೂ ಕನಿ?ರೂ ಅಲ್ಲ. ಸತ್ಯ ಮತ್ತು ಕಾಯಕವೇ ಎಲ್ಲಕ್ಕಿಂತ ಶ್ರೇ? ಎಂದು ಜಗಕ್ಕೆ ಸಾರಿದರು.ಜಗತ್ತಿನ ಎಲ್ಲಾ ಸಮುದಾಯದವರಿಗೂ ಸಹ ಸಮಾನ ಸ್ಥಾನ ಮಾನ ನೀಡಿ ಜಗತ್ತಿಗೆ ಮೊದಲ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಕಲ್ಪನೆಯನ್ನು ಬಸವಣ್ಣ ೮೦೦ ವ?ಗಳ ಹಿಂದೆಯೇ ನಿರ್ಮಿಸಿದ್ದು ಈಗ ಇತಿಹಾಸ ಎಂದು ಹೇಳಿದರು.

ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ, ಮುಖಂಡರಾದ ಶ್ರೀಶೈಲಪ್ಪ ಬೆಳಮಗಿ ಮಾತನಾಡಿದರು. ಶಿವುಗೌಡ ಪಾಟೀಲ್, ಮಲ್ಲಿಕಾರ್ಜುನ ಚಂದನಕೇರಿ ವೇದಿಕೆಯ ಮೇಲಿದ್ದರು. ಭೀಮರಾವ್ ಸೂಗೂರ ಅಧ್ಯಕ್ಷತೆ ವಹಿಸಿದ್ದರು. ಶರಣಗೌಡ ಪಾಟೀಲ್ ಪ್ರಾಸ್ತಾವಿಕ ನುಡಿದರು, ಸಂತೋ? ಪಾಟೀಲ್ ಸ್ವಾಗತಿಸಿದರು, ಗಿರಿಮಲ್ಲಪ್ಪಾ ವಳಸಂಗ ನಿರೂಪಿಸಿ, ವಂದಿಸಿದರು.

ಇದನ್ನೂ ಓದಿ: ಅಂಬೇಡ್ಕರ ಅವರ ವಿಚಾರಧಾರೆ ಜನರಿಗೆ ಇನ್ನೂ ತಲುಪಿಲ್ಲ: ಶಾಸಕ ಪ್ರಿಯಾಂಕ್ ಖರ್ಗೆ ವಿಷಾದ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here