ಡಾ.ಅಂಬೇಡ್ಕರ ಅಪ್ಪಟ ದೇಶಪ್ರೇಮಿ, ಅಹಿಂಸಾವಾದಿಯಾಗಿದ್ದರು: ಪೊ. ಪೋತೆ

0
23

ಆಳಂದ : ನಾನು ಮೊದಲು ಭಾರತೀಯ ಎಂದು ಹೇಳಿದ ಡಾ ಬಾಬಾಸಾಹೇಬ ಅಂಬೇಡ್ಕರವರು ಅಪ್ಪಟ ದೇಶಪ್ರೇಮಿ ಹಾಗು ಅಹಿಂಸಾವಾದಿಯಾಗಿದ್ದರು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪೊ. ಎಚ್ ಟಿ ಪೋತೆ ಹೇಳಿದರು.

ತಾಲೂಕಿನ ಕಡಗಂಚಿ ಗ್ರಾಮದ ಭೀಮ ನಗರದಲ್ಲಿ ರಾಮಜೀ ಯುವಕ ಸಂಘ ಹಾಗೂ ಡಾ. ಅಂಬೇಡ್ಕರ ಜಯಂತ್ಯುತ್ಸವ ಸಮಿತಿಗಳ ಸಹಯೋಗದಲ್ಲಿ ಆಯೋಜಿಸಿz ಬುದ್ಧ ಬಸವ ಹಾಗೂ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರವರ ೧೩೧ನೇ ಜಯಂತ್ಯುತ್ಸವ ಸಮಾರಂ,s ನಿವೃತ್ತ ನೌಕರರ ಸತ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

Contact Your\'s Advertisement; 9902492681

ಇದನ್ನೂ ಓದಿ: ವಜೀರಗಾಂವ ಗ್ರಾಮದಲ್ಲಿ ನೂತನ ಕನಕದಾಸರ ವೃತ ಉದ್ಘಾಟನೆ

ಎಲ್ಲರಿಗೂ ಸಮಾನತೆ ಅವಕಾಶ ಕೊಡುವ ಮೂಲಕ ಸ್ವಾತಂತ್ರ್ಯ, ಭಾತೃತ್ವ ಮತ್ತು ಹಕ್ಕುಗಳು ಕೊಟ್ಟಿದ್ದಾರೆ. ಎಲ್ಲಾ ಜಾತಿ ಧರ್ಮಗಳ ಜನರಿಗೂ ಸಾಮಾಜಿಕ ನ್ಯಾಯ ಒದಗಿಸಿ ಪರಿವರ್ತನಾ ಸಮಾಜ ಕಟ್ಟಲು ಬಯಸಿದವರು. ತಮ್ಮ ಬದುಕಿನುದ್ದಕ್ಕೂ ನಿರಂತರ ಸಂಘರ್ಷಗಳು ನಡೆಸಿದರೂ ಎಲ್ಲಿಯೂ ಹಿಂಸೆಗೆ ಪ್ರಚೋಧನೆ ನೀಡಿಲ್ಲ. ಮತ್ತು ದೇಶದ ಹಿತಕ್ಕೆ ಧಕ್ಕೆ ಬರದಂತೆ ಅಹಿಂಸಾತ್ಮಕ ಹೋರಾಟಗಳು ಕೈಗೊಂಡ ನಿಜವಾದ ಅಹಿಂಸಾವಾದಿಗಳಾಗಿದ್ದರು ಎಂದರು.

ಸಮಾರಂಭ ಉದ್ಘಾಟಿಸಿದ ಮಾಜಿ ಉಪಸಭಾಪತಿ ಬಿ ಆರ್ ಪಾಟೀಲ ಅವರು, ಬುದ್ಧ ಬಸವ ಡಾ ಅಂಬೇಡ್ಕರವರು ಶೋಷಿತ ಸಮುದಾಯದ ಜನರಿಗೆ ಸಾಮಾಜಿಕ ಜಾಗೃತಿ ಮೂಡಿಸಿ ಹೊಸ ಬದುಕನ್ನು ಕಟ್ಟಿ ಕೊಟ್ಟರು. ಡಾ ಅಂಬೇಡ್ಕರವರು ಸಂವಿಧಾನ ರಚಿಸಿ, ಸಮ ಬಾಳು ಸಮ ಪಾಲು ತತ್ವಗಳನ್ನು ಪ್ರತಿಪಾದಿಸಿದರು. ಅವರ ಆದರ್ಶಗಳು ಮುಂದಿನ ಯುವ ಪೀಳಿಗೆಗೆ ತಿಳಿಸಿ ಕೊಡುವ ಅವಶ್ಯಕತೆ ಹೆಚ್ಚಾಗಿದೆ ಎಂದರು. ಸಾಹಿತಿ ಧರ್ಮಣ್ಣ ಎಚ್ ಧನ್ನಿ, ನಿವೃತ್ತ ಅಧಿಕಾರಿ ಅಂದಪ್ಪ ಡೋಣಿ, ಡಾ ಕೈಲಾಸ ಡೋಣಿ ಮಾತನಾಡಿದರು.
ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಮೋನಮ್ಮ ಸುತಾರ, ಗುರುಶರಣ ಪಾಟೀಲ, ಜಿಪಂ ಮಾಜಿ ಸದಸ್ಯ ಸಂತೋಷ ಪಾಟೀಲ, ಶಾಂತಪ್ಪ ಹೆಬಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಅಧಿಕಾರಿ ಶಾಂತಪ್ಪ ಕೆ ಸೂರನ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದನ್ನೂ ಓದಿ: ಬಸವ ಜಯಂತಿ ಪ್ರಯುಕ್ತ ಕಾರು ಬೈಕ್ ರ‍್ಯಾಲಿ

ಗ್ರಾಪಂ ಅಧ್ಯಕ್ಷ ನಾಗೇಂದ್ರಪ್ಪ ಪಾಳಾ, ಸದಸ್ಯರಾದ ರೇಖಾ ಮೂಕ, ಆರತಿ ಗಡಬಳ್ಳಿ, ಡಾ. ಶಿವಪ್ಪ ಭೂಸನೂರ, ಡಾ. ಸುನೀಲಕುಮಾರ ಕಾಂಬಳೆ, ವಿಠ್ಠಲ ಹೋಳ್ಕರ, ಶರಣು ನರೋಣಿ, ಸತೀಶ ಪನಶೆಟ್ಟಿ, ಉತ್ತಮ ಎಸ್ ಗಡಬಳ್ಳಿ, ಪಂಡಿತ ದೊಡ್ಡಮನಿ, ಬಸವರಾಜ ದುಧನ, ಪ್ರೇಮ ಜೋಗನ, ಶಾಂತಪ್ಪ ಡೋಣಿ, ಶಿವಕುಮಾರ ಎಸ್ ಚೇಂಗಟಿ, ಪುನೀತ ಮಾಡ್ಯಾಳ, ಸೈನಿಕರಾದ ಕಾಂತಪ್ಪ ಕಾಮನಕರ್, ಶಾಂತಪ್ಪ ಮಾಂಗ ಉಪಸ್ಥಿತರಿದ್ದರು.

ಗುಂಡೇರಾಯ ಡೋಣಿ ಸ್ವಾಗತಿಸಿದರು. ರಮಾ ನಿರೂಪಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ನೌಕರರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ ಗಣ್ಯರಿಗೆ ಸತ್ಕರಿಸಲಾಯಿತು. ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಇದನ್ನೂ ಓದಿ: ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಹಣಮಂತ ಜಿ. ಯಳಸಂಗಿ ಆಯ್ಕೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here