ಕಲಬುರಗಿ: ಸರ್ವ ಸಮುದಾಯದ ಭಕ್ತ ಶ್ರೇಷ್ಠ ಹಾಗೂ ಸಂತ ಶ್ರೇಷ್ಠ ಕನಕದಾಸರ ಸಾಮಾಜಿಕ ಕಳಕಳಿ ಇಂದಿಗೂ ಪ್ರಸ್ತುತವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಅವರ ತತ್ವ, ಆದರ್ಶಗಳನ್ನು ಪಾಲಿಸಬೇಕು ಎಂದು ಕೆಎಂಡಿಸಿ ನಿರ್ದೇಶಕ ಸದ್ದಾಮ್ ಹುಸೇನ ಎಮ್ ವಜೀರಗಾಂವ ಹೇಳಿದರು.
ಇದನ್ನೂ ಓದಿ: ಡಿಎಮ್.ಎಸ್.ಎಸ್. ಕಚೇರಿಯಲ್ಲಿ ಪ್ರೊ.ಬಿ.ಕೃಷ್ಣಪ್ಪ ರವರ ೨೪ನೇ ಪುಣ್ಯಸ್ಮರಣೆ
ಸಮೀಪದ ವಜೀರಗಾಂವ ಗ್ರಾಮದಲ್ಲಿ ನೂತನ ಕನಕದಾಸರ ವೃತ ಉದ್ಘಾಟನೆ ಮಾಡಿ ಮಾತನಾಡಿದ ಅವರುಕನಕದಾಸರು ಸಮಾಜ ಸುಧಾರಕರಾಗಿದ್ದು, ಅವರ ಜೀವನದ ಪ್ರತಿಘಟ್ಟವೂ ಒಂದೊಂದು ತತ್ವಗಳನ್ನು ಆದರ್ಶಿಸುವ ಅಧ್ಯಾಯವಾಗಿದೆ. ಇಂತಹ ವ್ಯಕ್ತಿ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗದೇ ಎಲ್ಲಾ ಸಮುದಾಯದವರಿಗೂ ಇವರು ಹಾಕಿಕೊಟ್ಟ ಮಾರ್ಗ ಬುನಾದಿಯಾಗಬೇಕು. ಸಮಾನತೆಯ ತಳಹದಿಯಲ್ಲಿನ ಇವರ ಮಾರ್ಗದರ್ಶನ ಅತ್ಯಂತ ಪ್ರಮುಖವಾಗಿದೆ ನಮ್ಮ ಗ್ರಾಮದಲ್ಲಿ ಕನಕದಾಸ ವೃತ ಉದ್ಘಾಟನೆ ಮಾಡುವುದರಿಂದ ನನಗೆ ತುಂಬ ಖುಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಭೀಮ್ ರಾವ್ ಪಾಟೀಲ್, ಮಲ್ಲಪ್ಪ ಪೂಜಾರಿ, ರಮೇಶ್ ಪೂಜಾರಿ, ವೈಜನಾಥ್ ,ರವಿ ಪೂಜಾರಿ, ವಿಜಯಕುಮಾರ್, ಮಹೇಶ್ ಕುಮಾರ್, ಬಸವರಾಜ್, ಶಿವರಾಜ್ ,ಸಂತೋಷ್ ಕುಮಾರ್ , ವಿಜ್ಞೇಶ್ ,ಸಗರ್ ,ರಿಯಾಜ್ ಪಟೇಲ್ ಭಾಗ್ಯವಂತ, ಲಿಂಗರಾಜ್, ಸತೀಶ್ ಸೊಹೇಲ್ ಇತರರು ಇದ್ದರು.
ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ರದ್ದು ಬೇಡ; ಹೆಚ್.ಡಿ.ಕುಮಾರಸ್ವಾಮಿ ಒತ್ತಾಯ