ಬೀದರ್: ಜಿಲ್ಲೆಯ ಕಲಾವಿದರಿಗೆ ದೊರೆಯಬೇಕಾದ ಸರ್ಕಾರದ ಸೌಲಭ್ಯಗಳನ್ನು ನಿಯಮಗಳಿಗೆ ಅನುಗುಣವಾಗಿ ಪ್ರಾಮಾಣಿಕವಾಗಿ ಕೊಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೂತನ ಸಹಾಯಕ ನಿರ್ದೇಶಕ ಸಿದ್ರಾಮ್ ಶಿಂಧೆ ಅವರು ಇಲ್ಲಿ ಭರವಸೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ರಾಜಶೇಖರ್ ವಟಗೆ ಅವರಿಂದ ಅಧಿಕಾರ ಸ್ವೀಕರಿಸಿ, ಸನ್ಮಾನಿಸಿಕೊಂಡು ಮಾತನಾಡಿದ ಅವರು, ಜಿಲ್ಲೆಯ ಕಲಾವಿದರು ಸರ್ಕಾರದ ಸೌಲಭ್ಯಗಳನ್ನು ಪಡೆದು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕ್ಯಾಡೆಮಿಯ ಸದಸ್ಯ ವಿಜಯಕುಮಾರ್ ಸೋನಾರೆ, ರಂಗ ತರಂಗ ಸಾಮಾಜಿಕ ಮತ್ತು ಸಾಂಸ್ಸೃತಿಕ ಟ್ರಸ್ಟ ಅಧ್ಯಕ್ಷ ಎಂ.ಪಿ. ಮುದಾಳೆ, ಹಿರಿಯ ಕಲಾವಿದ ಶಂಭುಲಿಂಗ್ ವಾಲ್ದೊಡ್ಡಿ, ಕಲಾವಿದ ದಿಲೀಪ್ ಕಾಡವಾದ್, ಅಂಬೇಡ್ಕರ್ ಯುವ ಸೇನೆ ಭಾಲ್ಕಿ ತಾಲ್ಲೂಕು ಅಧ್ಯಕ್ಷ ಶಿವಕುಮಾರ್ ಮೋರೆ, ಸೇನೆ ಪ್ರಮುಖರಾದ ವಿಜಯಕುಮಾರ್ ಮೋರೆ, ಶಿವಾಜಿ ಬಿರಾದಾರ್, ಆಕಾಶ್ ಮೋರೆ, ಇಲಾಖೆಯ ಸಿಬ್ಬಂದಿಗಳು ಹಾಗೂ ಜಿಲ್ಲೆಯ ವಿವಿಧ ಗ್ರಾಮಗಳ ಮಹಿಳಾ ಕಲಾವಿದರು ಸೇರಿ ನ್ರರಾರು ಕಲಾವಿದರು ಉಪಸ್ಥಿತರಿದ್ದರು.