ಮಕ್ಕಳ ಕಲಿಕಾ ನಷ್ಟವನ್ನು ತುಂಬಲು ಇಲಾಖೆ ಸನ್ನದವಾಗಿದೆ: ದೇಗುಲಮಡಿ

0
18

ಆಳಂದ: ಕೋವಿಡ್-೧೯ ಪರಿಸ್ಥಿತಿಯಲ್ಲಿ ಎರಡು ವರ್ಷಗಳಿಂದಾದ ಮಕ್ಕಳ ಕಲಿಕಾ ನಷ್ಟವನ್ನು ಸರಿದೋಗಿಸಲು ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ನಷ್ಟವಾದ ಶಿಕ್ಷಣವನ್ನು ತುಂಬಲು ಶಿಕ್ಷಣ ಇಲಾಖೆ ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಮರುಪ್ರಯತ್ನಿಸುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗುಲಮಡಿ ಅವರು ಇಂದಿಲ್ಲಿ ಹೇಳಿದರು.

ಪಟ್ಟಣದ ಆಲ್‌ಫಾರುಕ್ ಉರ್ದು ಪ್ರೌಢಶಾಲೆಯಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಮತ್ತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕಮಲಾಪೂರ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಮನ್ವಯಾಧಿಕಾರಿಗಳ ಕಾರ್ಯಾಲಯ, ಅಜೀಮ ಪ್ರೇಮಜಿ ಫೌಂಡೇಷನ್ ಆಶ್ರಯದಲ್ಲಿ ಹಮ್ಮಿಕೊಂಡ ಕಲಿಕಾ ಚೇತರಿಕಾ ಅಡಿಯಲ್ಲಿ ನಲಿಕಲಿ ತರಬೇತಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಇದನ್ನೂ ಓದಿ: ನೆಲಮಂಗಲದಲ್ಲಿ ನಾಳೆ ಜನತಾ ಜಲಧಾರೆ ಸಮಾವೇಶ: 4-5 ಲಕ್ಷ ಜನರು ಭಾಗಿ ನಿರೀಕ್ಷೆ

ಸಾರ್ವಜನಿಕ ಶಿಕ್ಷಣ ಇಲಾಖೆಯ ೧ರಿಂದ ೩ನೇ ತರಗತಿಯ ಬೋಧಕ ಶಿಕ್ಷಕರನ್ನು ಎರಡು ದಿನಗಳವರೆಗೆ ಆಯೋಜಿಸಿದ್ದ ಕಲಿಕಾ ಚೇತರಿಕೆ ಅಡಿಯಲ್ಲಿ ನಡೆದ ನಲಿಕಲಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಪ್ರತಿಯೊಬ್ಬ ಶಿಕ್ಷಕರು ಕೈಗೊಂಡು ಶಾಲೆಯಲ್ಲಿ ಮಕ್ಕಳಿಗೆ ಬೋಧನೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಹೊಸ ಬೋಧನೆ ತರಬೇತಿ ಕೌಶಲ್ಯ ಮತ್ತು ಮಕ್ಕಳಲ್ಲಿ ಕಲಿಕೆಯ ಚೇತರಿಕೆಯ ಪ್ರಕ್ರಿಯೆ ಇದಾಗಿದೆ. ಪ್ರಾಥಮಿಕ ಹಂತದಲ್ಲಿ ಪಾಠ ಬೋಧನೆಗೆ ಪರಿಣಾಮಕಾರಿಯಾಗಿದೆ. ಎರಡು ವರ್ಷಗಳಿಂದ ಕೋವಿಡ್-೧೯ ಹರಡಿದ್ದರಿಂದ ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಕಲಿಕಾ ನಷ್ಟವನ್ನು ತುಂಬಿ ಅವರನ್ನು ಸಾಮರ್ಥ್ಯ ಆಧಾರಿತ ಕಲಿಕಾ ಚಟುವಟಕೆಗಳನ್ನು ಮಕ್ಕಳಲ್ಲಿ ಬೆಳೆಸಲು ಕಲಿಕೆ ಚೇತರಿಕೆ ತರಬೇತಿ ಹಮ್ಮಿಕೊಂಡಿದ್ದು ಇದರ ಸದ್ಬಳಕೆ ಮಾಡಿಕೊಡಿಲು ಶಿಕ್ಷಕರು ಮುಂದಾಗಬೇಕು ಎಂದರು ಹೇಳಿದರು.

ಇದನ್ನೂ ಓದಿ: ಎರಡು ದಿನ ರಾಜ್ಯಮಟ್ಟದ ಕರಾಟೆ ಚಾಂಪಿಯನಷಿಪ್

ತರಬೇತಿ ನಿರತ ಶಿಕ್ಷಕರೊಂದಿಗೆ ಸಂವಾದ ನಡೆಸಿದ ಶಿಕ್ಷಣಾಧಿಕಾರಿಗಳು ನಿಮ್ಮ ಪ್ರಯತ್ನ ಮಕ್ಕಳ ಶಿಕ್ಷಣದ ಗುಣಮಟ್ಟತೆ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಸಮನ್ವಯಾಧಿಕಾರಿ ಬಸವರಾಜ ದೊಡ್ಡಮನಿ ಶಿಕ್ಷಕರಾದವರಿಗೆ ಸಮಾಜದಲ್ಲಿ ದೊಡ್ಡ ಗೌರವವಿದೆ, ಮಕ್ಕಳ ಶಿಕ್ಷಣಕ್ಕೆ ಸರ್ಕಾರ ನೀಡುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಕಾರ್ಯಗತ ಮಾಡುವ ಜವಾಬ್ದಾರಿಯನ್ನು ನಿರ್ವಹಿಸಲು ಮುಂದಾಗಬೇಕು ಎಂದರು.

ಬಿಆರ್‌ಸಿ ಕಲ್ಯಾಣಪ್ಪ ಬಿಕ್ಕಮಳೆ, ಸಿಆರ್‌ಪಿ ಸೈಫಾನ್ ಡಾಂಗೆ, ಇಸಿಒ ಪ್ರಕಾಶ ಕೊಟ್ರೆ, ಸಂಪನ್ಮೂಲವ್ಯಕ್ತಿ ಬಸವರಾಜ ಬೆಳಾಂ, ಶಿಕ್ಷಕಿ ಸೈಲಜಾ ಪೋಮಾಜಿ ಸೇರಿದಂತೆ ತರಬೇತಿಯಲ್ಲಿ ೧೯೮ ಶಿಕ್ಷಕರು ಭಾಗವಹಿಸಿದ್ದರು.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here