ಕಲಬುರಗಿ: ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಅಜಯಕುಮಾರ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಮತ್ತು ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ವತಿಯಿಂದ ಎರಡು ದಿನಗಳ ಕಾಲ ರಾಜ್ಯಮಟ್ಟದ ಚಾಂಪಿಯನಷಿಪ್ ಕಾರ್ಯಕ್ರಮದಲ್ಲಿ ವಿಜೇತರಾದ ಕರಾಟೆ ಪಟ್ಟುಗಳಿಗೆ ಟ್ರೋಫಿ,ಮೇಡಲ್ಸ್ ಮತ್ತು ಪ್ರಮಾಣಪತ್ರವನ್ನು ವಿತರಿಸಲಾಯಿತು.
ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ
ಈ ಸಂದರ್ಭದಲ್ಲಿ ಕರ್ನಾಟಕ ಯುವ ಶಕ್ತಿ ಸಂಘಟನೆ ರಾಜ್ಯ ಅಧ್ಯಕ್ಷ ಅವ್ವಣಗೌಡ ಎನ್ ಪಾಟೀಲ್ ಮಾತನಾಡಿ ಯುವಕರಿಗೆ ದೈಹಿಕವಾಗಿ ಸದೃಡವಾಗಲು ಮತ್ತು ಮನೋಬಲ ಹೆಚ್ಚಿಸಲು ಕರಾಟೆ ತುಂಬಾ ಸಹಕಾರಿ ಆಗಲಿದ್ದು ಇಂತಹ ಕ್ರೀಡಾ ಪಟುಗಳಿಗೆ ಸರಕಾರದ ಸೌಲಭ್ಯ ದೊರೆಯಬೇಕು ಹಾಗು ನೈತಿಕವಾಗಿ ಸಂಭಂಧಿಸಿದ ಅಧಿಕಾರಿಗಳು ಕಾರ್ಯಕ್ರಮಗಳ ಜೋತೆಯಲ್ಲಿದ್ದು ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕೆಂದರು. ಯುನೈಟೆಡ್ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ.ಬಶೀರ ಸರ್ ಮಾತನಾಡಿ ಇಗಿನ ಕಾಲದಲ್ಲಿ ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಈ ಕರಾಟೆ ಕಲೆ ತುಂಬಾನೆ ಅವಶ್ಯಕತೆ ಇದೆ ಎಂದರು.
ಇದನ್ನೂ ಓದಿ: 15ಕ್ಕೆ ಕೆರೆ ಚಂದಮ್ಮನಿಗೆ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ಪ್ರದಾನ
ಈ ಸಂದರ್ಭದಲ್ಲಿ ಇಂಡಿಯನ್ ಕರಾಟೆ ಗ್ರ್ಯಾಂಡ್ ಮಾಸ್ಟರ್ ಬಿ.ಎಮ್ ನರಸಿಂಹನ್, ಡಿಸ್ಟಿಕ್ ಚೀಫ ಕೋಚ್ ರಾಜವರ್ಧನ್ ಜಿ ಚೌಹಾಣ, ಡಾ. ದಾವೂದ್, ಮತ್ತು ಅನೇಕ ಸ್ಪರ್ಧಾರ್ಥಿಗಳು ಅವರ ಪೋಷಕರು,ಇದರಲ್ಲಿ ಅನೇಕ ಜಿಲ್ಲೆಗಳ ಕರಾಟೆ ಪಟುಗಳು ಭಾಗವಹಿಸಿದ್ದರು.