ದೇವತ್ಕಲ್ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ವಿರುದ್ಧ ಕ್ರಮಕ್ಕೆ ರಕ್ಷಣಾ ಸೇನೆ ಆಗ್ರಹ

0
27

ಸುರಪುರ: ತಾಲೂಕಿನ ದೇವತ್ಕಲ್ ಗ್ರಾಮ ಪಂಚಾಯತಿಯ ಕಂಪ್ಯೂಟರ್ ಆಪರೇಟರ್ ಲಂಚಾವತಾರ ಮಿತಿ ಮೀರಿದ್ದು ಕೂಡಲೇ ಇವನ ಮೇಲೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ಸೇನೆ ಸಂಘಟನೆಯ ಮುಖಂಡರು ತಾಲೂಕು ಪಂಚಾಯತಿ ಇಒ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಈ ಕುರಿತು ಸಂಘಟನೆಯ ತಾಲೂಕು ಕಾರ್ಯಾಧ್ಯಕ್ಷ ಸೋಮಣ್ಣ ದೊರೆ ಮಾತನಾಡಿ,ದೇವತ್ಕಲ್ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಪ್ರಕಾಶ ದೇವಾಪುರ ಎನ್ನುವವನು ಗ್ರಾಮ ಪಂಚಾಯತಿ ಅಡಿಯಲ್ಲಿನ ಆಶ್ರಯ ಯೋಜನೆ ಮನೆಗಳ ಹಂಚಿಕೆಯ ಫಲಾನುಭವಿಗಳ ಹೆಸರಿನ ಜಿ.ಪಿ.ಎಸ್ ಮಾಡಲು ಉದ್ದೇಶಪೂರ್ವಕವಾಗಿ ಫಲಾನುಭವಿಗಳ ಹೆಸರನ್ನು ತಪ್ಪಾಗಿ ನಮೂದಿಸಿ ನಂತರ ಫಲಾನುಭವಿಗಳಿಗೆ ಮೇಲಿನಿಂದಲೆ ರಿಜೆಕ್ಟಾಗಿದೆ ಎಂದು ನೆಪ ಹೇಳಿ ಅದನ್ನು ಸರಿ ಪಡಿಸಲು ೩ ರಿಂದ ೫ ಸಾವಿರ ರೂಪಾಯಿ ಖರ್ಚಾಗಲಿದೆ ಎಂದು ಹೇಳಿ ಫಲಾನುಭವಿಗಳಿಂದ ಸುಲಿಗೆ ಮಾಡುತ್ತಿದ್ದಾನೆ.

Contact Your\'s Advertisement; 9902492681

ಇದನ್ನೂ ಓದಿ:ಮಕ್ಕಳ ಕಲಿಕಾ ನಷ್ಟವನ್ನು ತುಂಬಲು ಇಲಾಖೆ ಸನ್ನದವಾಗಿದೆ: ದೇಗುಲಮಡಿ

ಈಗಾಗಲೇ ೧೯ ಜನರಿಗೆ ಈ ರೀತಿ ಮಾಡಿದ್ದಾನೆ,೬ ಗ್ರಾಮಗಳಲ್ಲಿ ಇಂತಹ ಪ್ರಕರಣಗಳು ಎಷ್ಟು ನಡೆದಿವೆ ಎನ್ನುವುದು ತನಿಖೆ ಮಾಡಿಸಬೇಕು.ಮತ್ತು ಈ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗು ಫಲಾನುಭವಿಗಳಿಂದ ಪಡೆದ ಹಣವನ್ನು ಮರಳಿಸಬೇಕು.

ಒಂದು ವೇಳೆ ನಮ್ಮ ಮನವಿಗೆ ಸ್ಪಂಧಿಸದಿದ್ದಲ್ಲಿ ಸಂಘಟನೆಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರವಿಚಂದ್ರರೆಡ್ಡಿಯವರಿಗೆ ಮನವಿ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಮಲ್ಲು ಕವಡಿಮಟ್ಟಿ ಇತರರಿದ್ದರು.

ಇದನ್ನೂ ಓದಿ: ನೆಲಮಂಗಲದಲ್ಲಿ ನಾಳೆ ಜನತಾ ಜಲಧಾರೆ ಸಮಾವೇಶ: 4-5 ಲಕ್ಷ ಜನರು ಭಾಗಿ ನಿರೀಕ್ಷೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here