ವಚನ ಆಷಾಢ ಪ್ರವಚನ ಸಮಾರೋಪ

0
101

ಕಲಬುರಗಿ: ಬಸವಣ್ಣ ಲೋಕಸೂರ್ಯ, ಬಸವಣ್ಣ ಇರುವಲ್ಲಿ ಕತ್ತಲೆ ಇರುವುದಿಲ್ಲ. ಬಸವಣ್ಣ ಇರುವಲ್ಲಿ ಜಾತಿ ಸೂತಕ, ಮತ-ಮೌಢ್ಯ, ಬಡವ-ಬಲ್ಲಿದ, ಮೇಲು ಕೀಳು ಸ್ತ್ರೀ-ಪುರುಷ ಎಂಬ ಲಿಂಗಭೇದ ಇರುವುದಿಲ್ಲ ಎಂದು ಬಸವ ಸಮಿತಿ ಕೇಂದ್ರಾಧ್ಯಕ್ಷ ಅರವಿಂದ ಜತ್ತಿ ನುಡಿದರು.

ಕಲಬುರಗಿ ಬಸವ ಸಮಿತಿ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸಹಯೋಗದಲ್ಲಿ ಜಯನಗರದ ಅನುಭವ ಮಂಟಪದಲ್ಲಿ ಇಂದು ರಾತ್ರಿ ನಡೆದ ವಚನ ಆಷಾಢ: ಶರಣರ ಜೀವನ ದರ್ಶನ ಆಧ್ಯಾತ್ಮಿಕ ಪ್ರವಚನ ಸಮಾರೋಪ ಹಾಗೂ ಲಿಂ. ರುದ್ರಪ್ಪ ಬೆನಕನಳ್ಳಿ ರಟಕಲ್, ಲಿಂ. ಸುಭಾಶ್ಚಂದ್ರ ರುದ್ರಪ್ಪ ಬೆನಕನಹಳ್ಳಿ, ರಟಕಲ್ ಸ್ಮರಣಾರ್ಥ ಅರಿವಿನ ಮನೆ 604 ನೆಯ ದತ್ತಿ ಸಮಾರಂಭದ ಅಧ್ತಕ್ಷತೆ ವಹಿಸಿ ಮಾತನಾಡಿದ ಅವರು, ಪರಿವರ್ತನೆ ಅನಿವಾರ್ಯ. ಪ್ರವಚನಗಳಿಂದ ಪರಿವರ್ತನೆ ಸಾಧ್ಯ ಎಂದು ಹೇಳಿದರು.

Contact Your\'s Advertisement; 9902492681

ಕೊನೆಯ ದಿನವೂ ಪ್ರವಚನ ಹೇಳಿ, ಶರಣ ಸಂಸ್ಕಾರ ಬದುಕಿಗೆ ಅಗತ್ಯ ಎಂದು ಪ್ರವಚನಕಾರ ಡಾ. ಈಶ್ವರ ಮಂಟೂರ ಪ್ರತಿಪಾದಿಸಿದರು. ಪತ್ರಕರ್ತ-ಸಾಹಿತಿ ಶಿವರಂಜನ್ ಸತ್ಯಂಪೇಟೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಡಾ.ಬು.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ದಂಡೆ ಸ್ವಾಗತಿಸಿ ಸಬವ ಸಮಿತಿ ಕಾರ್ಯಕ್ರಮಗಳ ವಿವರ ನೀಡಿದರು.

ಬಸವ ಸಮಿತಿ ಜಿಲ್ಲಾಧ್ಯಕ್ಷೆ ಡಾ. ವಿಲಾಸವತಿ ಖೂಬಾ, ಡಾ. ಜಯಶ್ರೀ ದಂಡೆ, ರುದ್ರಭೂಷಣ, ರುದ್ರಾದೇವಿ ತಾಯಿ ವೇದಿಕೆಯಲ್ಲಿದ್ದರು. ಎಚ್.ಕೆ. ಉದ್ದಂಡಯ್ಯ ನಿರೂಪಿಸಿದರು. ಅಶ್ವಿನಿ ಕೇಸೂರ ವಂದಿಸಿದರು. ಇದೇವೇಳೆಯಲ್ಲಿ ವಚನ ಕಮ್ಮಟ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ ರಟಕಲ್ ರೇವಣಸಿದ್ಧೇಶ್ವರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರೌಢಶಾಲೆಯ ಶಿಕ್ಷಕ, ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here