ಚಿಂಚೋಳಿ/ಕಾಳಗಿ: ವಿದ್ಯಾರ್ಥಿಗಳ ಬಸ್ ಹಾಗೂ ಸಾರಿಗೆ ಸಮಸ್ಯೆ ಬಗೆಹರಿಸಲು ಕಾಳಗಿ ಬಸ್ಟ್ಯಾಂಡ್ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಶರಣಬಸಪ್ಪಾ ಮಮಶೇಟ್ಟಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತ್ತು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಡೊಣ್ಣುರು. ಹಲಚೆರ. ನಾವದಗಿ ಚಿಂತಕುಂಟಾ. ವಜ್ರಗಾಂವ. ಹೊಸಳ್ಳಿ. ತೆಗಲತಿಪ್ಪಿ. ಗಡಿಕೆಶ್ವಾರ. ದೂರ ದಿಂದ ದಿನಾಲು ನಡೆಯುವ ಮೂಲಕ ವಿಧ್ಯಾರ್ಥಿಗಳು ಹರಸಾಹಸ ಪಟ್ಟರೂ ದಿನನಿತ್ಯ ಶಾಲಾ ಕಾಲೇಜು. ದಿನಾಲು 2 ಕ್ಲಾಸ್ ತಪ್ಪು ತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸಾಯಂಕಾಲ. 5 ಘಂಟೆಗೆ ಕಾಳಗಿ. ಶಾಲಾ ಕಾಲೇಜು ಬಿಟ್ಟರೆ ಮರಳಿ ಮನೆಗೆ ಹೋಗಲು ಒಂದು ಬಸ್ ಇಲ್ಲ ಹೀಗಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕಾಳಗಿ ಡಿಪೊ ಮೂಲಕ ಮಧ್ಯಾಹ್ನ 2:30 ಕ್ಕೆ ಕೊಡ್ಲಿ ಕ್ರಾಸ್ ಸೂಗೂರು, ಸುಂಠಾಣ, ಹುಲುಸಗುಡ, ಕಂಚನಾಳ, ರಟಕಲ್, ಮಾರ್ಗವಾಗಿ, ಕಲಬುರಗಿ, ನೆಹರು ಗಂಜ ಒಂದು ಬಸ್ ರೂಟ್ ಇದ್ದರು ಬಸ್ ಓಡಿಸಿ ವಿಧ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.