ದೇಶದ ಸದೃಢತೆಯಲ್ಲಿ ಶಿಕ್ಷಕರ ಪಾತ್ರ ಮಹತ್ವ: ಬಸವರಾಜ ದೇಶಮುಖ

0
17

ಕಲಬುರಗಿ: ದೇಶದ ಸದೃಢತೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕರು ಇನ್ನೂ ಹೆಚ್ಚು ಹೆಚ್ಚು ವಿಚಾರ ಸಂಕಿರಣಗಳಲ್ಲಿ ಪಾಲ್ಗೊಳ್ಳುವ ಮೂಲಕ ಜ್ಞಾನಸಂಪತ್ತು ಗಳಿಸಿಕೊಳ್ಳಬೇಕು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಬಸವರಾಜ ದೇಶಮುಖ ಹೇಳಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಶರಣಬಸವ ವಿಶ್ವವಿದ್ಯಾಲಯದ (ಅಲುಮಿನಿ) ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಬ್ರೆಕ್‌ಥ್ರೊ ಸೈನ್ಸ್ ಸೊಸೈಟಿ ಸಹಯೋಗದಲ್ಲಿ ’ಆಧುನಿಕ ಸಂಶೋಧನೆ ಮತ್ತು ಬೊಧನಾ ಕಲಿಕೆಯ ಪುರಾವೆ ವಿಧಾನಗಳು’ ಎಂಬ ವಿಷಯದ ಮೇಲೆ ಶನಿವಾರ ಆಯೋಜಿಸಿದ್ದ ಒಂದು ದಿನದ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ದಿನಕ್ರಮೇಣ ಜ್ಞಾನಸಂಪತ್ತು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಕರ ಬದುಕು ಸಾಗಬೇಕು ಎಂದರು.

Contact Your\'s Advertisement; 9902492681

ಬ್ರೇಕ್‌ಥ್ರೋ ಸೈನ್ಸ್ ಸೊಸೈಟಿಯ ಅಧ್ಯಕ್ಷರಾದ ಆನಂದರಾಜ ಮಾತನಾಡಿ, ಶಿಕ್ಷಣ ಎಂಬುದು ಕೇವಲ ಕಲಿಕೆಯ ಪ್ರಕ್ರಿಯೆಯಾಗದೆ, ಅದೊಂದು ಮೌಲ್ಯಗಳಿಸಿಕೊಳ್ಳುವಂತಹ ಹಾಗೂ ಸಮಾಜಕ್ಕೆ ಉತ್ತಮ ಮೌಲ್ಯ ಸಮರ್ಪಿಸುವಂತಹ ಪಾರದರ್ಶಕ ಪ್ರಕ್ರಿಯೆಯಾಗಬೇಕು ಎಂದರು.

ಉತ್ತಮ ಕೌಶಲ್ಯಗಳನ್ನು ಅಳವಡಿಸಿಕೊಂಡಾಗ ಜೀವನದಲ್ಲಿ ಸಧೃಢತೆ ಸಾಧಿಸಿಕೊಳ್ಳಲು ಹಾಗೂ ಭವಿಷ್ಯತ್ತಿನ ಪಿಳಿಗೆಗೆ ಒಳ್ಳೆಯ ಜ್ಞಾನ ವರ್ಗಾಯಿಸಲು ಸಾಧ್ಯ ಎಂದರು.

ಅಮೇರಿಕದ ಹರ್ಲಿ ವೈದ್ಯಕೀಯ ಕೇಂದ್ರ, (ಠಿಚಿಣhoಟogಥಿ) ರೋಗಶಾಸ್ತ್ರ ವಿಭಾಗದ ಉಪಾಧ್ಯಕ್ಷರಾದ ಡಾ. ಖ್ವಾಜಿ ಎಸ್. ಅಝೇರ ವಿಷಯ ಮಂಡಕರಾಗಿ ಆಗಮಿಸಿ ಮಾತನಾಡಿ, ಯುವಜನತೆ ದೇಶದ ಭವಿಷ್ಯ. ಅವರ ಕಲಿಕೆಯ ಪಠ್ಯಕ್ರಮದಲ್ಲಿ ಸಂಶೋಧನಾತ್ಮಕ, ವೈಜ್ಞಾನಿಕ ಅಂಶಗಳು ಒಳಗೊಳ್ಳಬೇಕು ಆಗ ಮಾತ್ರ ಕಲಿಕೆಯ ಪ್ರಕ್ರಿಯೆ ಪರಿಪೂರ್ಣಗೊಳ್ಳುತ್ತದೆ ಎಂದರು. ಸಂಶೋಧನೆ ಎಂಬುದು ಪ್ರಾದೇಶಿಕ ಮಟ್ಟದ, ಸ್ಥಳೀಯ ಮಟ್ಟದ ಅಂಶಗಳನ್ನು ಒಳಗೊಂಡಿರಬೇಕು ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ ವಿ ಡಿ ಮೈತ್ರಿ ಮಾತನಾಡಿ, ವೈಜ್ಞಾನಿಕ ಹಾಗೂ ಸಂಶೋಧನಾತ್ಮಕ ಅಂಶಗಳು ಕಲಿಕೆ ಮತ್ತು ಬೋಧನೆ ಪ್ರಕ್ರಿಯೆಗೆ ಸಹಕಾರಿಯಾಗಿರುತ್ತದೆ. ಕಲಿಕೆ ಚಟುವಟಿಕೆಯಲ್ಲಿ ಅಭಿವೃದ್ಧಿ ಕಾಣುತ್ತೇವೆ ಎಂದು ಹೇಳಿದರು.

ಡಾ ಶ್ರೀದೇವಿ ಗುರಾಗೊಳ ನಿರೂಪಿಸಿದರು. ಡಾ. ನಾಗಬಸವಣ್ಣ ಗುರಾಗೊಳ ಸ್ವಾಗತಿಸಿದರು. ವಿಧ್ಯಾರ್ಥಿನಿ ಉಷಾರಾಣಿ ಪ್ರಾರ್ಥಿಸಿದರು. ಪ್ರೊ. ಪ್ರವೀಣ ಹಿಪ್ಪರ್ಗಿ ವಂದಿಸಿದರು. ಪ್ರೊ. ಪಾರ್ವತಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here