ಶ್ರೀ ಬಸವವಿಜಯ ಗ್ರಂಥ ಲೋಕಾರ್ಪಣೆ

0
19

ಭಾಲ್ಕಿ: ಹಿರೇಮಠ ಸಂಸ್ಥಾನದಲ್ಲಿ ಡಾ.ಅಮರನಾಥ ಸೋಲಪುರೆ ಬರೆದಿರುವ ಶ್ರೀ ಬಸವ ವಿಜಯ ಗ್ರಂಥವನ್ನು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಲೋಕಾರ್ಪಣೆ ಮಾಡಿದರು. ಡಾ.ಅಮರನಾಥ ಸೋಲಪೂರೆ ಅವರು ಲಿಂಗಾನುಭಾವಿಗಳು. ಬಸವಾದಿ ಶರಣರ ಇಷ್ಟಲಿಂಗ ಯೋಗವನ್ನು ಜನಮನದಲ್ಲಿ ಮುಟ್ಟಿಸುವ ಕಾರ್ಯ ಮಾಡುತ್ತಿದ್ದಾರೆ.

ಶರಣರ ವಚನಗಳನ್ನೇ ಆಧಾರವಾಗಿಟ್ಟುಕೊಂಡು ಇಷ್ಟಲಿಂಗದ ಯೋಗದ ಅನೇಕ ಕಾರ್ಯಕ್ರಮಗಳನ್ನು ಕರ್ನಾಟಕ ಅಲ್ಲದೆ ಮಹಾರಾಷ್ಟ್ರದ ಅನೇಕ ಜಿಲ್ಲೆಗಳಲ್ಲಿ ಮಾಡುತ್ತಿದ್ದಾರೆ. ಅವರು ಬಹುಭಾಷೆ ಬಲ್ಲವರಾಗಿದ್ದಾರೆ. ವಿಶೇಷವಾಗಿ ಇಂಗ್ಲೀಷ ಭಾಷೆಯಲ್ಲಿ ಅವರ ಹಿಡಿತವಿದೆ. ಇಲ್ಲಿಯವರೆಗೆ ಇಂಗ್ಲೀಷ, ಕನ್ನಡ ಮತ್ತು ಮರಾಠಿಯಲ್ಲಿ ಅನೇಕ ಕೃತಿಗಳನ್ನು ಬರೆದಿದ್ದಾರೆ.

Contact Your\'s Advertisement; 9902492681

ಇದೀಗ ಶ್ರೀ ಬಸವವಿಜಯ ಎಂಬ ವಿನೂತನ ಕೃತಿಯನ್ನು ಅವರ ಲಿಂಗಹಸ್ತದಿಂದ ಮೂಡಿಬಂದಿದೆ. ಈ ಗ್ರಂಥದಲ್ಲಿ ೮ ಅಧ್ಯಾಯಗಳು ಹಾಗೂ ೩೪ ಕಾಂಡಗಳು ಇವೆ. ವಚನಗಳ ಆಧಾರವಾಗಿಟ್ಟುಕೊಂಡೆ ವಿಶ್ವಗುರು ಬಸವಣ್ಣನವರ ಜೀವನ ಚರಿತ್ರೆಯ ಜೊತೆಗೆ ಲಿಂಗಾಯತ ಧರ್ಮ ತತ್ವಗಳ ಮೇಲೆ ಬೆಳೆಕು ಚಲ್ಲಿದ್ದಾರೆ. ಇದನ್ನು ನೋಡಿ ಸಂತೋಷವಾಗಿದೆ ಎಂದು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಚಾಂಬಾಳದ ಪೂಜ್ಯ ಶ್ರೀ ರುದ್ರಮುನಿ ಶಿವಾಚಾರ್ಯರು ಹಾಗೂ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಲೇಖಕರಾದ ಡಾ.ಅಮರನಾಥ ಸೋಲಪೂರೆ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here