ಕಲಬುರಗಿ : ಟ್ರ್ಯಾಕ್ಟರ್ ಟ್ರ್ಯಾಲಿ ಕಳ್ಳರಿಬ್ಬರ ಬಂಧನ

0
715

ಶಹಾಬಾದ: ತಾಲೂಕಿನ ನಾನಾ ಕಡೆ ಟ್ರ್ಯಾಕ್ಟರ್ ಟ್ರ್ಯಾಲಿಗಳ ಕಳ್ಳತನದ ಆರೋಪದ ಮೇಲೆ ಇಬ್ಬರನ್ನು ಆರೋಪಿಗಳನ್ನು ಬಂಧಿಸಲಾಗಿದೆ.

ಭಂಕೂರ ಗ್ರಾಮದ ಸಿದ್ದಾರ್ಥ ಮುಕುಂದ (30) ಹಾಗೂ ದೇವನತೆಗನೂರಿನ ಅನೀಲ ಶೀವಯೋಗಿ ರಾಠೋಡ (30) ಬಂಧಿತ ಆರೋಪಿಗಳು.

Contact Your\'s Advertisement; 9902492681

ಟ್ರ್ಯಾಕ್ಟರ್ ಎಂಜಿನ್‍ನೊಂದಿಗೆ ಬರುತ್ತಿದ್ದ ಆರೋಪಿಗಳು ರಾತ್ರಿ ವೇಳೆ ಗ್ರಾಮದ ಮನೆಯ ಮುಂದೆ ನಿಂತಿರುವ ನಿರ್ಜನ ಪ್ರದೇಶದ ಹೊಲ, ಗದ್ದೆಗಳಲ್ಲಿ ನಿಲ್ಲಿಸಿದ್ದ ಟ್ರ್ಯಾಲಿಗಳನ್ನು ಜೋಡಿಸಿಕೊಂಡು ಪರಾರಿಯಾಗುತ್ತಿದ್ದರು.

ಈವರೆಗೆ ಇವರು ಒಂದು ಟ್ರ್ಯಾಕ್ಟರ್ ಇಂಜನ್ ಹಾಗೂ 3 ಟ್ರ್ಯಾಲಿಗಳನ್ನು ಕಳ್ಳತನ ಮಾಡಿದ್ದು, ಇವರಿಂದ ಟ್ರ್ಯಾಕ್ಟರ್ ಇಂಜನ್ ಹಾಗೂ 3 ಟ್ರ್ಯಾಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇತ್ತಿಚ್ಚಿಗೆ ಮುತ್ತಗಾ ಹಾಗೂ ಭಂಕೂರ ಗ್ರಾಮದಲ್ಲಿ ಟ್ರ್ಯಾಲಿ ಕಳ್ಳತನ ಮಾಡಿದ್ದರು. ಕಳ್ಳತನ ಮಾಡುತ್ತಿದ್ದ ಟ್ರ್ಯಾಲಿಗಳನ್ನು ಬಡ ರೈತರಿಗೆ ಕಡಿಮೆ ದರದಲ್ಲಿ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂದರು.

ಟ್ರ್ಯಾಲಿಗಳ ಕಳ್ಳತನ ಪ್ರಕರಣ ಹೆಚ್ಚಾಗಿದ್ದರಿಂದ ಅಪರಾಧ ವಿಭಾಗದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಡಿವಾಯ್‍ಎಸ್‍ಪಿ ಉಮೇಶ ಚಿಕ್ಕಮಠ ಅವರ ಮಾರ್ಗದರ್ಶನದಲ್ಲಿ ಕಳ್ಳತನ ಪ್ರಕರಣ ಬೇಧಿಸಿದ ಪಿಐ ಸಂತೋಷ ಹಳ್ಳೂರ್,ಪಿಎಸ್‍ಐ ಅಶೋಕ ಪಾಟೀಲ,ಸುವರ್ಣಾ ಮಲಶೆಟ್ಟಿ, ಸಿಬ್ಬಂದಿಗಳಾದ ಹುಸೇನ ಪಾಷಾ, ಭೀಮಣ್ಣ, ಶ್ರೀಕಾಂತ, ನಿಂಗಣ್ಣಗೌಡ ಪಾಟೀಲ,ಮಾಳಪ್ಪ ಪೂಜಾರಿ, ಕಲಬುರಗಿ ಸಿಡಿಆರ್ ಘಟಕದ ಬಲರಾಮ ಇತರರಿದ್ದರು.

ದಾಖಲೆ ಇಲ್ಲದ ವಾಹನ ಖರೀದಿಸಬೇಡಿ:
ಸೂಕ್ತ ದಾಖಲೆ ಇಲ್ಲದ ಯಾವುದೇ ವಾಹನಗಳನ್ನು ಖರೀದಿಸಬಾರದು. ವಾಹನ ಖರೀದಿಸುವ ಸಮಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಸಾರ್ವಜನಿಕರು ಅನಾವಶ್ಯಕವಾಗಿ ತೊಂದರೆಗೆ ಸಿಲುಕಬೇಕಾಗುತ್ತದೆ. ಟ್ರ್ಯಾಕ್ಟರ್ ಎಂಜಿನ್‍ನಂತೆಯೆ ಟ್ರ್ಯಾಲಿಗಳನ್ನೂ ಆರ್‍ಟಿಒ ಕಚೇರಿಯಲ್ಲಿ ನೋಂದಣಿ ಮಾಡಿಸಿ ಸಂಖ್ಯೆ ಪಡೆಯಬೇಕು. ನೋಂದಣಿ ಸಂಖ್ಯೆ ಇಲ್ಲದ ಟ್ರ್ಯಾಲಿಗಳ ಕಳ್ಳತನವಾದರೆ ಪತ್ತೆ ಮಾಡುವುದು ಕಷ್ಟಕರವಾಗುತ್ತದೆ- ಸಂತೋಷ ಹಳ್ಳೂರ್ ಪಿಐ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here