ಎಸ್ಸೆಸ್ಸೆಲ್ಸಿ ಪರೀಕ್ಷೆ ತಾಲೂಕು ಟಾಪರ್‌ಗಳಿಗೆ ಶಿಕ್ಷಣಾಧಿಕಾರಿಗಳಿಂದ ಸನ್ಮಾನ

0
78

ಆಳಂದ: ಕಳೆದ ಎಸ್ಸೆಎಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಟಾಪರ ಆಗಿ ಹೊರಹೊಮ್ಮಿದ ವಿದ್ಯಾರ್ಥಿಗಳಿಗೆ ಪಟ್ಟಣದಲ್ಲಿ ಶಿಕ್ಷಣ ಇಲಾಖೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗುಲಮಡಿ ಅವರು ಸನ್ಮಾನಿಸಿದರು.

ಇದೇ ವೇಳೆ ಮಾತನಾಡಿದ ಶಿಕ್ಷಣಾಧಿಕಾರಿಗಳು ಈ ಪರೀಕ್ಷೆಯಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದು ತಾಲೂಕಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿ ಪಾಸಾಗಿದ್ದ ಇಬ್ಬರು ವಿದ್ಯಾರ್ಥಿನಿಯರು ಇಲಾಖೆಯ ಗೌರವ ಹೆಚ್ಚಿಸಿದ್ದಾರೆ. ಸರ್ಕಾರಿ ಗ್ರಾಮೀಣ ಶಾಲೆಯ ಮಕ್ಕಳ ಸಹ ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವುದು ತೋರಿಸಿಕೊಟ್ಟಂತಾಗಿದೆ. ಕಳೆದ ಸಾಲಿಗಿಂತ ಈ ಬಾರಿ ಫಲಿತಾಂಶದಲ್ಲಿ ಏರಿಕೆ ಕಂಡಿದೆ. ಮಕ್ಕಳಿಗೆ ಶಿಕ್ಷಣ ಗುಣಮಟ್ಟದ ಶಿಕ್ಷಣ ನೀಡಿ ಅವರ ಭವಿಷ್ಯ ನಿರ್ಮಾಣಕ್ಕೆ ಶಾಲೆಗಳ ಶಿಕ್ಷಕರು ಮತ್ತು ಪಾಲಕರು ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

Contact Your\'s Advertisement; 9902492681

ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಮುದ್ದಡಗಾ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಶರಣಮ್ಮಾ ದತ್ತಾತ್ರೆಯ, ತೃತೀಯ ಸ್ಥಾನ ಪಡೆದ ತಡಕಲ್ ಎಂಎಆರ್‌ಜಿ ಶಾಲೆಯ ಗೀತಾ ಎಸ್. ಜಮಾದಾರ, ಸರಸಂಬಾ ಶಾಲೆಯ ವಿದ್ಯಾರ್ಥಿ ದರ್ಶನ ವಿವೇಕಾನಂದ ಅವರನ್ನು ಹಾಗೂ ಆದರ್ಶ ಶಾಲೆಯ ವಿದ್ಯಾರ್ಥಿನಿ ಸಾಕ್ಷಿ ಪರ ಅವರ ತಂದೆ ಶಿವಶರಣಪ್ಪ ಅಲ್ಮದ್ ಅವರನ್ನು ಸನ್ಮಾನಿಸಲಾಯಿತು.

ಸಮನ್ವಯಾಧಿಕಾರಿ ಬಸವರಾಜ ದೊಡ್ಡಮನಿ, ಪರೀಕ್ಷಾ ನೋಡಲ್ ಅಧಿಕಾರಿ ಪ್ರಕಾಶ ಕೊಟ್ರೆ, ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಶಿವರಾಜ ಖಂಡಾಳೆ, ಸರಸಂಬಾದ ಮುಖ್ಯ ಶಿಕ್ಷಕ ಪ್ರಕಾಶ ಸಾಸಕಿನ, ಮುದ್ದಡಗಾದ ಆನಂದ ಕುಲಕರ್ಣಿ, ತಡಕಲ್ ಶಾಲೆಯ ರಾಜಕುಮಾರ ಚಿಟಕೋಟಿ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here