ದೇಶದಲ್ಲಿ ಹುಟ್ಟದಿದ್ದರೆ ನಮಗೆಲ್ಲರಿಗೂ ಮತದಾನದ ಹಕ್ಕು ಇರುತ್ತಿರಲಿಲ್ಲ: ಹಳ್ಳಿ

0
54

ಶಹಾಬಾದ: ಡಾ.ಬಿ.ಆರ್.ಅಂಬೇಡ್ಕರ ಅವರು ಈ ದೇಶದಲ್ಲಿ ಹುಟ್ಟದಿದ್ದರೆ ನಮಗೆಲ್ಲರಿಗೂ ಮತದಾನದ ಹಕ್ಕು ಇರುತ್ತಿರಲಿಲ್ಲ. ಅವರಿಂದಾಗಿಯೇ ಸಮಾನತೆಯ ಹಕ್ಕು ಹಾಗೂ ಮತದಾನದ ಹಕ್ಕು ಸಿಕ್ಕಿದ್ದು ಎಂದು ಮನವರಿಕೆ ಮಾಡಿಕೊಳ್ಳಬೇಕಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.

ಅವರು ರವಿವಾರ ನಗರದ ಹಳೆಶಹಾಬಾದನ ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಲಾದ ಬುದ್ಧ, ಬಸವ, ಅಂಬೇಡ್ಕರ್ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಸಮಾನತೆ ಎನ್ನುವುದು ಅಂಬೇಡ್ಕರ್ ಆಶಯವಾಗಿತ್ತು. ಅದಕ್ಕಾಗಿಯೇ ಅವರು ಮತದಾನದಲ್ಲಿ ಸಮಾನತೆ ನೀಡಿದ್ದಾರೆ. ಕೋಟ್ಯಧಿಪತಿಯು ೧ ಓಟು ಹಾಕಬೇಕು. ಕೆಳಮಟ್ಟದ ಶೋಷಿತನು ೧ ಓಟನ್ನು ಚಲಾವಣೆ ಮಾಡಬಹುದಾದಂತ ಹಕ್ಕು ಒದಗಿಸಿದ್ದಾರೆ.ತಲೆತಲಾಂತರಗಳಿಂದ ತುಳಿತಕ್ಕೆ ಒಳಗಾಗಿದ್ದ ದಲಿತ ಸಮುದಾಯ ಸ್ವಾಭಿಮಾನದ ಬದುಕನ್ನು ನಡೆಸುವಂತಾಗಬೇಕೆಂದು ಹೋರಾಟ ನಡೆಸಿದವರು ಅಂಬೇಡ್ಕರ್ .ಆದರೆ ಈಗ ನಾವು ಅವರನ್ನು ಮರೆಯುತ್ತಿದ್ದೆವೆ ಎಂಬುದಕ್ಕೆ ಅವರ ತತ್ವಗಳ ವಿರುದ್ಧವಾಗಿ ನಡೆಯುತ್ತಿರುವುದೇ ಸಾಕ್ಷಿ. ಅಂಬೇಡ್ಕರ್ ಆಶಯ ಮರೆತರೆ ಸಮಾಜಕ್ಕೆ ಮುಂದೆ ದೊಡ್ಡ ಗಂಡಾಂತರ ಕಾದಿದೆ ಎಂದು ಹೇಳಿದರು.

ಡಾ. ವಿಜಯಕುಮಾರ್ ಸಾಲಿಮನಿ ಮಾತನಾಡಿ, ಸಾಮಾಜಿಕ ವ್ಯವಸ್ಥೆ ಬದಲಾಗಬೇಕಾದರೆ ಮೊದಲು ಬಡವರು, ದೀನ-ದಲಿತರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕಿದೆ. ನಮ್ಮ ಮಕ್ಕಳನ್ನು ಒಳ್ಳೆಯ ಶಿಕ್ಷಣ ನೀಡಬೇಕಾಗಿದೆ. ಈ ಹಿಂದೆ ನಮ್ಮ ದೇಶದಲ್ಲಿ ದಲಿತರ ಪರಿಸ್ಥಿತಿ ತುಂಬಾ ಶೋಚನೀಯವಾಗಿತ್ತು. ಅಲ್ಲದೇ ದೇವರು, ಧರ್ಮದ ಹೆಸರಿನಲ್ಲಿ ಅನೇಕ ಮೂಢನಂಬಿಕೆ, ಕಂದಾಚಾರಗಳು ನಡೆಯುತ್ತಿತ್ತು. ಈಗಲೂ ನಡೆಯುತ್ತಿವೆ. ಆಗ ಪ್ರತಿಯೊಬ್ಬರಿಗೂ ಮುಕ್ತವಾಗಿ ಬದುಕುವ ಹಕ್ಕು ಇರಲಿಲ್ಲ. ಈಗ ಭಾರತದಲ್ಲಿ ಬದುಕಲು ಎಲ್ಲರಿಗೂ ಸಮಾನವಾದ ಹಕ್ಕು ಕೊಟ್ಟಿದ್ದು ಸಂವಿಧಾನ.ಅದನ್ನು ನೀಡಿದವರು ಅಂಬೇಡ್ಕರ್ ಎಂದು ಯಾರು ಮರೆಯಬಾರದು ಎಂದು ಹೇಳಿದರು.

ಎಸ್‌ಸಿ/ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಜಿತೇಂದ್ರ ತಳವಾರ ಮಾತನಾಡಿ, ಮಕ್ಕಳು ಶಿಕ್ಷಣ ಕಲಿತು ಸಮಾಜದಲ್ಲಿ ಮುಂದೆ ಬರುವ ಅಗತ್ಯತೆ ಇದೆ.ಪ್ರತಿಯೊಬ್ಬರಿಗೂ ಆತ್ಮಸ್ಥೈರ್ಯದಿಂದ ಬದುಕುವ ಹಕ್ಕು ಸಿಕ್ಕಿದೆ ಎನ್ನುವುದಾದರೆ ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರರವರು ನೀಡಿರುವ ಸಂವಿಧಾನವೇ ಕಾರಣ. ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಲು ಡಾ.ಬಿ.ಆರ್.ಅಂಬೇಡ್ಕರ್ ಸಾಕ? ಹೋರಾಟ ನಡೆಸಿ ಹಿಂಸೆ, ಅವಮಾನಗಳನ್ನು ಅನುಭವಿಸಿದ್ದಾರೆ.ಆದ್ದರಿಂದ ಸಂವಿಧಾನವನ್ನು ರಕ್ಷಿಸುವ ಕೆಲಸವಾಗಬೇಕಿದೆ. ಪ್ರಜೆಗಳಿಗೆ ಸಂವಿಧಾನವೇ ನಿಜವಾದ ಗ್ರಂಥ ಎಂದುದು ಮನಗಾಣಬೇಕಿದೆ ಎಂದು ಹೇಳಿದರು.

ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಮಾತನಾಡಿ, ಮಹಿಳೆಯರಿಗೆ ವಿಶೇ? ಮೀಸಲಾತಿ, ಹೆರಿಗೆಗೆ ಆರು ತಿಂಗಳು ರಜೆ,ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕುಗಳನ್ನು ಕೊಟ್ಟವರು ಅಂಬೇಡ್ಕರ್. ಇಂದು ಭರಪೂರ ಹಕ್ಕುಗಳಿವೆ.ಆಯೋಗವಿದೆ, ದೌರ್ಜನ್ಯಕ್ಕೆ ರಕ್ಷಣೆ ಇದೆ, ಆಸ್ತಿಯಲ್ಲಿ ಪಾಲೂ ಇದೆ. ಆಶ್ಚರ್ಯವೆಂದರೆ ಇದನ್ನೆಲ್ಲ ಭಾರತೀಯ ಮಹಿಳೆಯರಿಗೆ ನೀಡಿದ್ದು ಅದು ಬಾಬಾಸಾಹೇಬ ಅಂಬೇಡ್ಕರರಲ್ಲದೆ ಬೇರಾರು ಅಲ್ಲ ಎಂದರು.

ಅಥಿತಿಗಳಾಗಿ ನಗರ ಸಭೆಯ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ, ಇನಾಯತ್ ಖಾನ್ ಜಮಾದಾರ್,ಶಿವಕುಮಾರ ನಾಟಿಕಾರ, ಬನ್ನೇಪ್ಪಾ ಪೋತನಕರ್,ಮಹಾದೇವ ನಾಲವಾರಕರ್,ಬಸವರಾಜ ಮಯೂರ, ಮರೆಪ್ಪ ಮೆಂಗನ್,ಹಣಮಂತ ಜಾಯಿ, ಸದಾಶಿವ ಪೋತನಕರ್ ವೇದಿಕೆ ಮೇಲಿದ್ದರು.

ಹಂಪಣ್ಣ ಪೋತನಕರ್ ಅಧ್ಯಕ್ಷತೆ ವಹಿಸಿದ್ದರು. ಸುರೇಶ್ ಮೆಂಗನ್ ಪ್ರಾಸ್ತಾವಿಕ ನುಡಿದರು. ಸ್ನೇಹಲ್ ಜಾಯಿ ಸ್ವಾಗತಿಸಿದರು, ವಿಶ್ವನಾಥ ದೊಡ್ಡಮನಿ ನಿರೂಪಿಸಿದರು, ನಾಗರತ್ನ ಪೋತನಕರ್ ವಂದಿಸಿದರು. ಮಲ್ಲಿನಾಥ ಸಿಂಗೆ, ಹರೀಶ ಕರಣಿಕ, ಪ್ರೇಮ ಪೋತನಕರ್, ಸುನೀಲ ಮೆಂಗನ್, ಶರಣು ಜಾಯಿ, ನೀಲಮ್ಮ ಜಾಯಿ, ಪ್ರವೀಣ ರಾಜನ್, ಮಲ್ಲಿಕಾರ್ಜುನ ಸಂಕನೂರ,ಶಿವಶರಣ ಜಾಯಿ, ಅನಿಲ ಮೆಂಗನ್, ರಾಘವೇಂದ್ರ ಜಾಯಿ, ಅರುಣ ಜಾಯಿ,ಸಂಘ? ಜಾಯಿ,ಗಣೇಶ ಜಾಯಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here