ಕಲಬುರಗಿ: ಹಟಗಾರ ಸಮಾಜದ ಸಂಘದ ಕಚೇರಿಯಲ್ಲಿ ನಡೆದ ಭಾನುವಾರ ನೇಕಾರ ಸಂಘಟನೆ ನಿಮಿತ್ಯ ಸೇರಿದ ಸಭೆಯಲ್ಲಿ, ಹಟಗಾರ ಸಮಾಜದ ರಾಜ್ಯ ಕಾರ್ಯದರ್ಶಿ ಜೇನವೆರಿ ವಿನೋದ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ಪದ್ಮಸಾಲಿ ಸಮಾಜದ ಮುಖಂಡರಾದ ಶ್ರೀ ಪ್ರದೀಪ ಸಂಗಾ ಮಾತನಾಡುತ್ತಾ ರಾಜ್ಯ ನೇಕಾರ ಒಕ್ಕೂಟದ ವಿಭಾಗೀಯ ಪ್ರತಿನಿಧಿಗಳು ಬಂದಾಗ ಸೂಕ್ತ ಗೌರವ ನೀಡುವದರ ಮೂಲಕ ನಮ್ಮ ಬೇಡಿಕೆಗಳನ್ನು ಲಿಖಿತವಾಗಿ ನೀಡಿ ಪರಿಹಾರ ಪಡೆದುಕೊಳ್ಳುವ ನಿಟ್ಟಿನಲ್ಲಿ ಕೊರಲು ಸಲಹೆ ನೀಡಿದರು ಇನ್ನೊರವ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕುರಹಿನಶೆಟ್ಟಿ ಸಮಾಜದ ಕಾರ್ಯದರ್ಶಿ ಶ್ರೀ ಚಂದ್ರಶೇಖರ ಮ್ಯಾಲಗಿ ಸಭೆ ಉದ್ದೇಶಿಸಿ ಮಾತನಾಡಿ, ಮೊದಲು ಒಕ್ಕೂಟದಲ್ಲಿ ಸದ್ಯಸರಾಗಲು ಬೈಲಾ ಮಾರ್ಗಸೂಚಿ ಅನ್ವಯ ತಿಳಿದುಕೊಂಡು ಸೂಕ್ತ ವ್ಯಕ್ತಿ ಯನ್ನು ಜಿಲ್ಲೆಯಲ್ಲಿ ಆಯ್ಕೆ ಮಾಡಬೇಕು ನಾವು ಸಂಘಟನೆಯಲ್ಲಿ 10 ವರ್ಷಗಳ ಕಾಲ ಹಿಂದೆ ಉಳಿದಿದ್ದಿವೆ ಎಂದು ವಿμÁದ ವ್ಯಕ್ತಪಡಿಸಿದರು.
ಶಿವಲಿಂಗಪ್ಪ ಅಷ್ಟಗಿ ಸ್ವಾಗತಿಸಿದರು, ಚನ್ನಮಲ್ಲಪ್ಪ ನಿಂಬೆನಿ ಅಧ್ಯಕ್ಷತೆ ವಹಿಸಿದ್ದರು. ಸೂರ್ಯಕಾಂತ ಸೊನ್ನದ ವಂದಿಸಿದರು
ಸಭೆಯಲ್ಲಿ ಸ್ವಕುಳಸಾಲಿ ಸಮಾಜದ ರಾಜ ಗೋಪಾಲ ಭಂಡಾರಿ, ಚೌಡೇಶ್ವರಿ ಸಹಕಾರಿಯ ಶಾಂತಕುಮಾರ ಗೌರ, ಹಿರಿಯರಾದ
ರಾವ ಬಹಾದ್ದೂರ್ ರೂಗಿ ಇತರರು ಉಪಸ್ಥಿತರಿದ್ದರು.