21 ಕೋಟಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ

0
91

ಕಲಬುರಗಿ: ತಾಲೂಕಿನ ಕಲ್ಲಬೇನೂರ್, ಬೋಳೆವಾಡ ಗ್ರಾಮಗಳಲ್ಲಿ 21 ಕೋಟಿಯ ಬ್ರಿಡ್ಜ್ ಕಂ ಬ್ಯಾರೇಜ್, ಹಾಗೂ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಸೋಮವಾರ ನೆವೇರಿಸಿದರು.

ಉಭಯ ಗ್ರಾಮಗಳಲ್ಲಿ ಗುದ್ದಲಿ ಪೂಜೆ ಗೈದು ಶಾಸಕರು ಮಾತನಾಡಿ ಈ ಗ್ರಾಮಗಳಿಗೆ ಸರಿಯಾದ ರಸ್ತೆಗಳಿರಲಿಲ್ಲ ಹಾಗೂ ಸೇತುವೆಗಳು ಇರಲಿಲ್ಲ. ರೈತರಿಗೆ ಬ್ರಿಡ್ಜ್ ಕಂ ಬ್ಯಾರೇಜ್ ಇರಲಿಲ್ಲ, ಗ್ರಾಮಗಳಲ್ಲಿ ಸಿಸಿ ರಸ್ತೆ ಇರಲಿಲ್ಲ ಇವೆಲ್ಲವುಗಳನ್ನು ನಾನು ಶಾಸಕನಾದ ನಂತರ ರೈತರಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗಲಿ ಎಂದು ಎಲ್ಲ ಕಾಮಗಾರಿಗಳು ತಮಗೆ ಹೇಳಿದ ಹಾಗೆ ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಿದ್ದೇನೆ. ರೈತರೇ ದೇಶದ ಬೆನ್ನೆಲುಬು ರೈತ ಆರ್ಥಿಕವಾಗಿ ಸದೃಢನಾದರೆ ಭಾರತ ದೇಶ ಸದೃಢ ಇದ್ದಹಾಗೆ. ಕ್ಷೇತ್ರದ ಜನ ಸಂತೋಷವಿದ್ದರೆ ನಾನು ಸಂತೋಷವಿದ್ದಹಾಗೆ ಏಂದು ಹೇಳಿದರು.

Contact Your\'s Advertisement; 9902492681

ಬೋಳೇವಾಡ ಗ್ರಾಮದಲ್ಲಿ 17 ಕೋಟಿ 20 ಲಕ್ಷದ ಕಾಮಗಾರಿ ಸಿಸಿ ರಸ್ತೆ, ಬ್ರಿಡ್ಜ್ ಕಂ ಬ್ಯಾರೇಜ್, ಸೇತುವೆ ನಿರ್ಮಾಣ, ಒಳಚರಂಡಿ ಕಾಮಗಾರಿಗಳಿಗೆ ಎಂದು ಚಾಲನೆ ನೀಡಿದರು ಹಾಗೂ ಕಲ್ಲಬೆನೂರ್ ಗ್ರಾಮದಲ್ಲಿ ಸಿಸಿ ರಸ್ತೆ, ಡಾಂಬರ್ ರಸ್ತೆ ಹಾಗೂ ಹೈಮಾಸ್ಟ್ ದೀಪ, ಒಳಚರಂಡಿ, ಸರಕಾರಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ಉಪಕರಣಗಳು ಹೀಗೆ ಒಟ್ಟು 3 ಕೋಟಿ 14 ಲಕ್ಷದ ಕೆಲಸ ಕಾಮಗಾರಿಗಳು ಪೂರ್ಣಗೊಂಡಿದ್ದು ಇನ್ನುಳಿದ ಕಲ್ಲಬೇನುuಟಿಜeಜಿiಟಿeಜರ್ ದಿಂದ ಹೆಬ್ಬಾಳವರಿಗೆ ಡಾಂಬರಿಕರಣ, ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಗುತ್ತಿಗೆದಾರರಿಗೆ ಬೇಗನೆ ಪೂರ್ಣ ಗೊಳಿಸಲು ಸೂಚನೆ ನೀಡಿದರು.

ಸಂಗಮೇಶ ವಾಲಿ, ಅರವಿಂದ ಚೌಹಾಣ್ ವಿನೋದ್ ಪಾಟೀಲ್ ಮಂಡಲ ಉಪಾಧ್ಯಕ್ಷ, ಸರಡಗಿ ಪ್ರಭು ಕಾಳನೂರ, ವಿಶ್ವನಾಥ್ ಪಾಟೀಲ ವೆಂಕಟ್ ಬೆನೂರ, ಲಿಂಗರಾಜು ಬೋಳೆವಾಡ, ಅರುಣ ಎಸ್ ಮುರಗೊಂಡ್ ಸಿಪಿಐ, ಕಲಬುರಗಿ,ರಾಜು ಬೊಳೆವಾಡ ಅಂಬು ಪೂಜಾರಿ, ಜಿತೇಂದ್ರ ಬೊಗಶೆಟ್ಟಿ,ರಾಜು ಕಮ್ಮಟನ್, ಶರಣಗೌಡ ಪಾಳಾ, ಮಹೇಶ, ಶಿವಯೋಗಿ, ಸೂರ್ಯಕಾಂತ ಪಾಟೀಲ್, ಶಿವಮೂರ್ತಿ, ಈರಣ್ಣ ಹಡಪದ,ಷಣ್ಮುಖ ರೆಡ್ಡಿ, ಜಗದೇವ ಗುತ್ತೇದಾರ,ಕೆ ಸಿ ಪಾಟೀಲ್, ಮಂಜುನಾಥ್ ಸಂಗಾವಿ, ಮಾಣಿಕ ಜಾಧವ್, ನರೇಂದ್ರ ಎ ಇಇ. ರಾಜು ಹೋನಗುಂಟಿ, ಶಾಸಕರ ಆಪ್ತ ಕಾರ್ಯದರ್ಶಿ ದತ್ತು ಹಾಗೂ ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here