ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ವಿರುದ್ಧ ಕಲಬುರಗಿಯಲ್ಲಿ ಪ್ರತಿಭಟನೆ ನಾಳೆ

0
25

ಕಲಬುರಗಿ: ಶಾಲಾ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ನೆಪದಲ್ಲಿ ಇತಿಹಾಸ ಪುರುಷರಾದ ಬಸವಣ್ಣ, ಪೆರಿಯಾರ್, ನಾರಾಯಣಗುರು ಮುಂತಾದವರ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದ್ದು, ಸರ್ಕಾರದ ಈ ನಡೆಯನ್ನು ವಿರೋಧಿಸಿ ಜೂನ್ 4ರಂದು ಬೆಳಗ್ಗೆ 11 ಗಂಟೆಗೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ ಮತ್ತು ಆರ್.ಜಿ. ಶೆಟಗಾರ ತಿಳಿಸಿದರು.

9ನೇ ತರಗತಿಯ ಸಮಾಜ ವಿಜ್ಞಾನ ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಬಸವಣ್ಣನವರು ಉಪನಯನ ಮಾಡಿಕೊಂಡು ಕೂಡಲಸಂಗಮಕ್ಕೆ ತೆರಳಿದರು, ಗುರುಗಳಿಂದ ದೀಕ್ಷೆ ಪಡೆದರು ಮತ್ತು ವೀರಶೈವ ಮತ ಅಭಿವೃದ್ಧಿಪಡಿಸಿದರು ಎಂಬಿತ್ಯಾದಿ ಅಕ್ಷೇಪಾರ್ಹ ಸಂಗತಿಗಳಿದ್ದು, ಕೂಡಲೇ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ವೈದಿಕ ಧರ್ಮ ಪುನರ್ ಸ್ಥಾಪಿಸಲು ಹೊರಟಿರುವ ಸರ್ಕಾರ ಬಸವ ವಿರೋಧಿ ಹಾಗೂ ಲಿಂಗಾಯತ ವಿರೋಧಿಯಾಗಿದೆ. ಲಿಂಗಾಯತ ಸ್ವಾಮಿಗಳು ಮತ್ತು ಲಿಂಗಾಯತ ರಾಜಕಾರಣಿಗಳು ಇದನ್ನು ಖಂಡಿಸಬೇಕು.‌ ಆಗಿರುವ ತಪ್ಪು ಹಾಗೂ ಲೋಪ ಸರಿಪಡಿಸದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ರವೀಂದ್ರ ಶಾಬಾದಿ ತಿಳಿಸಿದರು.

ಸಂಗಮೇಶ, ಬಸಣ್ಣ ಗುಣಾರಿ, ಶಿವಕುಮಾರ ಬಿದರಿ, ರವಿ ಸಜ್ಜನ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here