ಕಲಬುರಗಿ: ಡಾ.ಬಿಆರ್ ಅಂಬೇಡ್ಕರ್, ಬಸವಣ್ಣ, ಕುವೆಂಪು ಅವರನ್ನು ಜನವಿರೋಧಿ ಬಿಜೆಪಿ ಸರಕಾರವನ್ನು ಅವಮಾನಿಸಿದ ವಜಾಗೊಳಿಸುವಂತೆ ಆಗ್ರಹಿಸಿ ಬಹುಜನ ಸಮಾಜ ಪಕ್ಷ ಜಿಲ್ಲಾಘಟಕದಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಕಲಬುರಗಿ ಪಾಲಿಕೆ ನೂತನ ಆಯುಕ್ತರಾಗಿ ಭುವನೇಶ ದೇವಿದಾಸ ಪಾಟೀಲ ಅಧಿಕಾರ ಸ್ವೀಕಾರ
ಪಠ್ಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಕೆಲವು ಪ್ರಮುಖ ವಾಕ್ಯಗಳನ್ನು ಹಾಗೂ ಅಂಬೇಡ್ಕರ್ ಮತ್ತು ಬುದ್ಧನ ಕುರಿತಾಗಿ ಇರುವ ಪದ್ಯಗಳನ್ನು ಕೈ ಬಿಡಲಾಗಿದೆ. ಪೆರಿಯಾರ್ ಸಾವಿತ್ರಿಬಾಯಿ ಫುಲೆ ಮೊದಲಾದ ಮಹನೀಯರ ಪಾಠ ಕೈಬಿಟ್ಟು ಅವಮಾನ ಎಸಗಲಾಗಿದೆ ಎಂದು ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಜನಸಮರ್ಥ ಆನ್‌ಲೈನ್ ಪೋರ್ಟಲ್ ವ್ಯವಸ್ಥೆ-ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ: ಸಂಸದ ಜಾಧವ
ಈ ಸಂದರ್ಭದಲ್ಲಿ ಎಲ್ ಆರ್ ಭೋಸಲೆ , ಶರಣಬಸಪ್ಪ ಸೂಗೂರ, ಸೂರ್ಯಕಾಂತ ನಿಂಬಾಳಕರ್, ಕೆ ಪ್ರಕಾಶ, ಮೈಲಾರಿ ಶೆಳ್ಳಗಿ, ಶಿವಕುಮಾರ ನಂದಿ, ಎಂಡಿ ಶಂಶೀರ ಸೇರಿದಂತೆ ಹಲವರಿದ್ದರು.
ಇದನ್ನೂ ಓದಿ: ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಣೆ