ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಕಾರ್ಯಾಗಾರಕ್ಕೆ ಲೇಖನಗಳ ಆಹ್ವಾನ

2
128

ಬೀದರ : ಕರ್ನಾಟಕ ಸರಕಾರ ಕಲ್ಯಾಣ ಕರ್ನಾಟಕ ಪ್ರದೇಶದ ಬಿಟ್ಟು ಹೋದ ಇತಿಹಾಸಕ್ಕೆ ಸಂಬಂಧಿಸಿ, ಇತಿಹಾಸ ರಚನೆಗೆ ಪ್ರಾದೇಶಿಕ ಆಯುಕ್ತರು, ಕಲಬುರಗಿ ಇವರ ಅಧ್ಯಕ್ಷತೆಯಲ್ಲಿ ರಚಿಸಿರುವ ಹೈದ್ರಾಬಾದ ಕರ್ನಾಟಕ ಇತಿಹಾಸ ರಚನಾ ಸಮಿತಿ ಬಿಟ್ಟು ಹೋದ ಇತಿಹಾಸದ ಸಂಗ್ರಹ ಕಾರ್ಯಕ್ಕೆ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು, ಹಮ್ಮಿಕೊಳ್ಳುವ ಮೂಲಕ ಅದರಂತೆ ಆಯಾ ಐತಿಹಾಸಿಕ ತಾಣಗಳಿಗೆ ಮತ್ತು ಹಿರಿಯ ಪರಿಣಿತರಿಗೆ ಭೇಟಿ ನೀಡಿ ಬಿಟ್ಟು ಹೋದ ಇತಿಹಾಸ ಸಂಗ್ರಹದ ಕಾರ್ಯ ಕಳೆದ ಮೂರು ವರ್ಷ ಮೊದಲೇ ಆರಂಭಿಸಿತು.

ಆದರೆ, ಕೋವಿಡ್-೧೯ ಮತ್ತು ಅನೇಕ ಕಾರಣಾಂತರಗಳಿಂದ ಸದರಿ ಕಾರ್ಯ ಸ್ಥಗಿತವಾಗಿತ್ತು. ಸಮಿತಿಯ ನಿರ್ಧಾರದಂತೆ ಕಾಲಮಿತಿಯಲ್ಲಿ ಪಠ್ಯದಲ್ಲಿ ಬಿಟ್ಟುಹೋದ ೧೭೨೪ ರಿಂದ ೧೯೫೬ರ ವರೆಗಿನ ಬಿಟ್ಟು ಹೋದ ಎಲ್ಲಾ ಕ್ಷೇತ್ರದ ಇತಿಹಾಸ ಸಂಗ್ರಹಿಸಿ ಕೃತಿಗಳನ್ನು ರಚಿಸಿ ಸರಕಾರಕ್ಕೆ ಕಲ್ಯಾಣ ಕರ್ನಾಟಕ ವಜ್ರ ಮಹೋತ್ಸವದ ಅಂತ್ಯದೊಳಗೆ ಸಲ್ಲಿಸಲು ಸಮಿತಿ ನಿರ್ಧರಿಸಿದೆ. ಅದರಂತೆ ಒಂದು ವಷದ ಅವಧಿಯೊಳಗೆ ಬಿಟ್ಟುಹೋದ ಇತಿಹಾಸ ರಚನೆ ಮಾಡಿ ಕಾಲಮಿತಿಯ ಯೋಜನೆಯಂತೆ ಸಮಾರೋಪಾದಿಯಲ್ಲಿ ಪೂರ್ಣಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ.

Contact Your\'s Advertisement; 9902492681

ಇದನ್ನೂ ಓದಿ: ರಸಗೊಬ್ಬರ ಕೊರತೆ ನೀಗಿಸಲು ಅಫ್ಜಲಪುರಕರ್ ಆಗ್ರಹ

ಸಮಿತಿ ಈ ಹಿಂದೆ ಕೈಗೊಂಡ ನಿರ್ಧಾರದಂತೆ ಮತ್ತು ಪ್ರಾದೇಶಿಕ ಆಯುಕ್ತರು ಹಾಗೂ ಅಧ್ಯಕ್ಷರು ಹೈದ್ರಾಬಾದ ಕರ್ನಾಟಕ ಇತಿಹಾಸ ರಚನಾ ಸಮಿತಿಯ ನಿರ್ದೇಶನದಂತೆ, ಬೀದರನ ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸಮಿತಿ ವತಿಯಿಂದ ವಿಭಾಗಮಟ್ಟದ ಕಲ್ಯಾಣ ಕರ್ನಾತಕ ಇತಿಹಾಸ, ಸಾಂಸ್ಕೃತಿಕ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಾಗಾರ ಹಮ್ಮಿಕೊಳ್ಳಲು ಪೂರ್ವಭಾವಿ ಸಭೆಯನ್ನು ಇತ್ತೀಚಿಗೆ ಗೋವಿಂದರೆಡ್ಡಿ ಜಿಲ್ಲಾಧಿಕಾರಿಗಳು, ಬೀದರ ಇವರ ಅಧ್ಯಕ್ಷತೆಯಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಇತಿಹಾಸ ರಚನಾ ಸಮಿತಿಯ ಸಭೆ ಜರುಗಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ದಯಾನಂದ ಅಗಸರ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಲಕ್ಷ್ಮಣ ದಸ್ತಿಯವರು ಹಾಗೂ ಸಮಿತಿಯ ತಜ್ಞ ಸದಸ್ಯರುಗಳಾದ ಡಾ. ಮಹಾಬಲೇಶ್ವರಪ್ಪ, ಡಾ.ರಾಜೇಂದ್ರ ಪ್ರಸಾದ, ಡಾ. ಮಾಜಿದ್‌ದಾಗಿ, ಡಾ.ವಾಹಬ ಅಂದಲಿಬ್, ವಿಶೇಷ ಆಹ್ವಾನಿತರಾಗಿ ಸ್ಥಳಿಯ ಪರಿಣಿತರು, ಬುದ್ಧಿಜೀವಿಗಳು ಹಾಜರಿದ್ದರು.

ಇದನ್ನೂ ಓದಿ: ಕೆನಡಿಯನ್ ವುಡ್ ವತಿಯಿಂದ ಇಂಡಿಯಾ ವುಡ್ 2022 ನಲ್ಲಿ ಟ್ರೆಂಡಿ ಪೀಠೋಪಕರಣ ಅಪ್ಲಿಕೇಶನ್‍ಗಳ ಪ್ರದರ್ಶನ

ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಬರುವ ೨೦೨೨ ಜುಲೈ ತಿಂಗಳಲ್ಲಿ ಎರಡು ದಿವಸಗಳ ಕಾರ್ಯಾಗಾರವನ್ನು ಬೀದರಿನ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಈ ಕಾರ್ಯಾಗಾರಕ್ಕೆ ಸಂಬಂಧಿಸಿ ೧೭೨೪ ರಿಂದ ೧೯೪೮ರ ವರೆಗಿನ ಆಡಳಿತ ವ್ಯವಸ್ಥೆ, ಶೈಕ್ಷಣಿಕ, ಸಾಹಿತ್ಯಿಕ, ಧಾರ್ಮಿಕ ಮುಂತಾಗಿ ಸ್ಥಿತಿಗತಿಯ ಇತಿಹಾಸಗಳ ಕುರಿತು, ಅದರಂತೆ ಸ್ವಾತಂತ್ರ ಚಳುವಳಿ, ವಿಮೋಚನಾ ಚಳುವಳಿ, ಪೋಲಿಸ್ ಕಾರ್ಯಾಚರಣೆ ೧೯೪೮ ರಿಂದ ೧೯೫೬ರ ವರೆಗಿನ ಸ್ವತಂತ್ರ ಭಾರತದಲ್ಲಿ ಹೈದ್ರಾಬಾದ ರಾಜ್ಯದ ಆಡಳಿತ ವ್ಯವಸ್ಥೆ, ಏಕೀಕರಣ ಚಳುವಳಿ, ಅಖಂಡ ಕರ್ನಾಟಕ ರಚನೆಯ ನಂತರ ಕಲ್ಯಾಣ ಕರ್ನಾಟಕದ ಪ್ರಮುಖ ಘಟನಾವಳಿಗಳಾದ ವಿಶೇಷ ಅಭಿವೃದ್ಧಿ ಮಂಡಳಿ ರಚನೆ, ನಂಜುಂಡಪ್ಪ ವರದಿ ಅನುಷ್ಠಾನ, ೩೭೧ನೇ(ಜೆ) ಕಲಂ ಅನುಷ್ಠಾನ, ಈ ವಿಷಯಗಳ ಬಗ್ಗೆ ಆಸಕ್ತರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ.

ಆಯಾ ವಿಷಯಕ್ಕೆ ಸಂಬಂಧಿಸಿದ ಲೇಖನಗಳು ೧೦ ಪುಟಕ್ಕೆ ಮೀರದಂತೆ ಇರಬೇಕು. ಆಯಾ ವಿಷಯಧಾರಿತ ಲೇಖನಗಳನ್ನು ಅಂತಿಮ ಸ್ವರೂಪ ನೀಡುವುದು ಸಮಿತಿಯ ತಜ್ಞರ ಸಮಿತಿಗೆ ಜವಾಬ್ದಾರಿ ವಹಿಸಲಾಗಿದೆ. ಲೇಖನಗಳು ಸ್ವೀಕೃತವಾದರೆ ಅಂತಹ ಲೇಖಕರನ್ನು, ಪರಿಣಿತರನ್ನು, ಇತಿಹಾಸ ಚಿಂತಕರನ್ನು, ತಜ್ಞರನ್ನು ಕಾರ್ಯಾಗಾರದಲ್ಲಿ ಭಾಗವಹಿಸಲು ಆಹ್ವಾನಿಸಲಾಗುವುದು.

ಇದನ್ನೂ ಓದಿ: ಜೂ.12ಕ್ಕೆ ಯುಪಿಎಸ್ಸಿ ಟಾಪರ್ ಡಾ.ವಿನಯ ಗಾದಗೆ ಸನ್ಮಾನ

ಪ್ರಯುಕ್ತ ಈ ಮಹತ್ವದ ಕಾರ್ಯಾಗರಕ್ಕೆ ಸಂಬಂಧಿಸಿ ಆಯಾ ವಿಷಯಕ್ಕೆ ಸಂಬಂಧಿಸಿದ ಲೇಖನಗಳನ್ನು ಜೂನ್ ತಿಂಗಳ ೨೫ನೇ ತಾರೀಖಿನ ಒಳಗಾಗಿ ಇ-ಮೇಲ್ ಸಂಖ್ಯೆ : laxmandasti371j @gmail.com/drmajiddaghi@gmail.com ಇಲ್ಲವೇ ವಾಟ್ಸಪ ಸಂಖ್ಯೆ 9342659766 ಗೆ ನಿಗದಿತ ದಿನಾಂಕದೊಳಗಾಗಿ ಕಳುಹಿಸಲು ಕೋರಲಾಗಿದೆ. ವಿನೂತನ ಮಾದರಿಯಲ್ಲಿ ಜರುಗುವ ಕಲ್ಯಾಣ ಕರ್ನಾಟಕ ಇತಿಹಾಸ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಈ ಮಹತ್ವದ ಕಾರ್ಯಾಗಾರಕ್ಕೆ ಸಂಬಂಧಿಸಿದ ಲೇಖನಗಳನ್ನು ಕಳುಹಿಸಲು ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಯ ಆಸಕ್ತರು ಲೇಖನಗಳನ್ನು ಕಳುಹಿಸಲು ಮುಕ್ತವಾಗಿ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಬಸವರಾಜ ಹೊರಟ್ಟಿಯವರೇ ಮತ್ತೆ ಮತ್ತೇ ಪಶ್ಚಿಮ ಶಿಕ್ಷಕರ ಕ್ಷೇತ್ರದ ಗೆಲ್ಲುವ ಅಭ್ಯರ್ಥಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here