- ವೀರಶೈವ ಲಿಂಗಾಯತ ಸ್ವಾಭಿಮಾನಿಗಳ ಬಳಗದಿಂದ ಗೌರವ ಸನ್ಮಾನ
ಕಲಬುರಗಿ: ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಡಾ.ವಿನಯ ಕುಮಾರ್ ಸಂಗಶೆಟ್ಟಿ ಗಾದಗೆ ಅವರನ್ನು ಸನ್ಮಾನಿಸಲು ಇದೇ ಜೂನ್ 12ರಂದು ನಗರದ ಪತ್ರಿಕಾ ಭವನದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗುತ್ತಿದೆ ಎಂದು ವೀರಶೈವ ಲಿಂಗಾಯತ ಸ್ವಾಭಿಮಾನಿಗಳ ಬಳಗದ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ ತಿಳಿಸಿದರು.
ಇದನ್ನೂ ಓದಿ: ರಸಗೊಬ್ಬರ ಕೊರತೆ ನೀಗಿಸಲು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಆಗ್ರಹ
ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಯುಪಿಎಸ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ನೀಡಿ ತೇರ್ಗಡೆಗೊಂಡಿರುವ ಡಾ.ವಿನಯ ಅವರನ್ನು ವೀರಶೈವ ಲಿಂಗಾಯತ ಸ್ವಾಭಿಮಾನಿಗಳ ಬಳಗದ ವತಿಯಿಂದ ಜೂನ್ 12ರಂದು ಬೆಳಗ್ಗೆ 11.30ಕ್ಕೆ ಸನ್ಮಾನಿಸಲಾಗುವುದು ಎಂದರು.
ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಹವಾ ಮಲ್ಲಿನಾಥ ಮಹಾರಾಜ್ ನಿರಗುಡಿ ಅವರು ಸಮಾರಂಭದ ಸಾನ್ನಿಧ್ಯ ವಹಿಸಲಿದ್ದು, ಚಿತ್ತಾಪುರ ಕಂಬಳೇಶ್ಚರ ಮಠದ ಸೋಮಶೇಖರ ಶಿವಾಚಾರ್ಯರು ನೇತೃತ್ವ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಯಶವಂತ ಗುರುಕರ್ ಉದ್ಘಾಟಿಸಲಿದ್ದು, ಮಾಜಿ ಉಪಸಭಾಪತಿ ಬಿ.ಆರ್.ಪಾಟೀಲ್ ಮುಖ್ಯ ಅತಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ
ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್ ಮಹಾಗಾಂವ್ ಮತ್ತು ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶರಣು ಮೋದಿ ಹಾಗೂ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಭಾಗೀರಥಿ ಗುನ್ನಾಪುರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ನರಿಬೋಳ ಮಾಹಿತಿ ನೀಡಿದರು.ಮಹೇಶ ಪಾಟೀಲ ಗಂದಿಗುಡಿ ಮಹಾಸಬೆ ಕಾರ್ಯಕಾರಿಣಿ ಸದಶ್ಯೇರು ಬಾಗೀರತಿ ಗುನ್ನಾಪುರ ಡಾರಾಜಶೇಖರ ಬಂಡೆ ಉಪಸ್ಥಿತರಿದ್ದರು.