ರೈತರ ಗಮನಕ್ಕೆ: ಪಿ.ಎಮ್. ಕಿಸಾನ್ ಯೋಜನೆ ಇ-ಕೆವೈಸಿಗೆ 31 ರವರೆಗೆ ಗಡುವು

1
21

ಕಲಬುರಗಿ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪಿ.ಎಮ್. ಕಿಸಾನ್ ಯೋಜನೆಯಡಿ ಪರಿಹಾರ ಪಡೆಯಲು ರೈತರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಲು 2022ರ ಜುಲೈ 31 ರವರೆಗೆ ಗಡುವು ನಿಗದಿಪಡಿಸಲಾಗಿದೆ. ಈ ಸೂಚನೆ ಪಾಲಿಸದಿದ್ದಲ್ಲಿ ಆರ್ಥಿಕ ನೆರವು ಸ್ಥಗಿತಗೂಳ್ಳಲಿದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ನೈಜ ಫಲಾನುಭವಿಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಹೊಸ ಆದೇಶ ಹೊರಡಿಸಿದೆ. ಇ-ಕೆವೈಸಿ ಮಾಡಿಕೊಂಡಲ್ಲಿ ಅರ್ಹ ರೈತರ ಖಚಿತ ಮಾಹಿತಿ ಲಭ್ಯವಾಗಲಿದೆ. ಇದಕ್ಕಾಗಿ ಆಧಾರ್ ಕಾರ್ಡ್ ಸಂಖ್ಯೆ ಲಿಂಕ್ ಮಾಡಬೇಕಿದೆ. ಒಂದೇ ಕುಟುಂಬದ ಹಲವರ ಹೆಸರಿನಲ್ಲಿ ಆರ್.ಟಿ.ಸಿ ಇದ್ದ ಕಾರಣ ಎರಡು ಅಥವಾ ಮೂರು ಜನರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದರು. ಆದರೆ ಈ ಬಾರಿ ಆಧಾರ ಲಿಂಕ್ ಮಾಡುವುದರಿಂದ ಕುಟುಂಬದ ಮಾಹಿತಿ ಲಭ್ಯವಾಗುವುದರಿಂದ ಎಷ್ಟೇ ಜನರ ಹೆಸರಿನಲ್ಲಿ ಆರ್.ಟಿ.ಸಿ. ಗಳಿದ್ದರೂ ಒಬ್ಬರಿಗೆ ಅμÉ್ಟ ನೆರವು ಸಿಗಲಿದೆ. ಆದಾಯ ತೆರಿಗೆ (Iಓಅಔಒಇ ಖಿಂಘಿ) ಕಟ್ಟುವವರ ಮಾಹಿತಿಯೂ ಸಹ ಲಭ್ಯವಾಗಲಿದೆ.

Contact Your\'s Advertisement; 9902492681

ಇದನ್ನೂ ಓದಿ: ಪಡಿತರ ಚೀಟಿದಾರರು ಜೂನ್ ೩೦ರೊಳಗಾಗಿ ಇ-ಕೆವೈಸಿ ಮಾಡಿಕೊಳ್ಳಲು ಸೂಚನೆ

ರೈತರು ನಾಗರಿಕ ಸೇವಾ ಕೇಂದ್ರ (ಸಿ.ಎನ್.ಸಿ.) ದಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಇ-ಕೆವೈಸಿಯನ್ನು 2022ರ ಜುಲೈ 31 ರೊಳಗಾಗಿ ಮಾಡಿಸಬೇಕು. ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೊಸದಾಗಿ ಕಾರ್ಯನಿರ್ವಹಿಸುತ್ತಿರುವ “ಗ್ರಾಮ ಒನ್” ಸೇವಾ ಕೇಂದ್ರಗಳಲ್ಲಿಯೂ ಇ-ಕೆವೈಸಿ  ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು, ಈ ಕುರಿತು ಯಾವುದೇ ಗೊಂದಲವಿದ್ದರೂ ತಮ್ಮ ಹತ್ತಿರದ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬೇಕು. 2022ರ ಜುಲೈ 31 ರೊಳಗಾಗಿ ಇ-ಕೆವೈಸಿ ಮಾಡಿಸದಿದ್ದಲ್ಲಿ ಫಲಾನುಭವಿಗಳಿಗೆ ಮುಂದಿನ ಚಾತುರ ಮಾಸಿಕ ಆರ್ಥಿಕ ನೆರವು ಸಿಗುವುದಿಲ್ಲ.

ಇದನ್ನೂ ಓದಿ: ಎಸಿಬಿ ಅಧಿಕಾರಿಗಳಿಂದ ಅಹವಾಲು ಸ್ವೀಕಾರ

ಈಗಾಗಲೇ ಇ-ಕೆವೈಸಿ ಮಾಡಿಸಿದ್ದಲ್ಲಿ ಕೇಂದ್ರ ಸರ್ಕಾರದಿಂದ ಹಂತ ಹಂತವಾಗಿ  ರೈತರ ಖಾತೆಗೆ ಹಣ ಜಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here