ಕಲಬುರಗಿ: ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಯ ಅಧಿಕಾರಿಗಳು 2022ರ ಜೂನ್ ಮಾಹೆಯಲ್ಲಿ ಕೆಳಕಂಡ ತಾಲೂಕುಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಆಹವಾಲು ಸ್ವೀಕರಿಸಲಿದ್ದು, ಆಯಾ ತಾಲೂಕಿನ ಸಾರ್ವಜನಿಕರು ಇದರ ಸದುಪಯೋಗಪಡೆಯಬೇಕೆಂದು ಕಲಬುರಗಿ ಪೊಲೀಸ್ ಠಾಣೆಯ ಭ್ರಷ್ಟಾಚಾರ ನಿಗ್ರಹ ದಳದ ಆರಕ್ಷಕ ಉಪಾಧೀಕ್ಷಕ ಸಂತೋಷ ಬಿ. ಬನ್ನಟ್ಟಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಕಾರ್ಯಾಗಾರಕ್ಕೆ ಲೇಖನಗಳ ಆಹ್ವಾನ
ಪೊಲೀಸ್ ಇನ್ಸ್‍ಪೆಕ್ಟರ್ ಬಾಬಾಸಾಹೇಬ್ ಪಾಟೀಲ್ ಅವರು (ಮೊಬೈಲ್ ಸಂಖ್ಯೆ 9480806309, 8151901256) ಇದೇ ಜೂನ್ 14 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಜೇವರ್ಗಿ ತಾಲೂಕು ಪ್ರವಾಸಿ ಮಂದಿರ, ಜೂನ್ 16 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಕಮಲಾಪುರ ಗ್ರಾಮ ಪಂಚಾಯತ್ ಕಾರ್ಯಾಲಯ, ಜೂನ್ 18 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಕಾಳಗಿ ತಾಲೂಕು ಪ್ರವಾಸಿ ಮಂದಿರ, ಜೂನ್ 22 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಆಳಂದ ಪ್ರವಾಸಿ ಮಂದಿರ ಹಾಗೂ ಜೂನ್ 24 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಚಿತ್ತಾಪುರ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: ರಸಗೊಬ್ಬರ ಕೊರತೆ ನೀಗಿಸಲು ಅಫ್ಜಲಪುರಕರ್ ಆಗ್ರಹ
ಪೊಲೀಸ್ ಇನ್ಸ್‍ಪೆಕ್ಟರ್‍ರಾದ ಪ್ರದೀಪ್ ಎಲ್. ಕೊಳ್ಳಾ ಅವರು (ಮೊಬೈಲ್ ಸಂಖ್ಯೆ 9480806310, 7760663497) ಜೂನ್ 15 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಅಫಜಲಪುರ ತಾಲೂಕು ಪ್ರವಾಸಿ ಮಂದಿರ, ಜೂನ್ 17 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಶಹಾಬಾದ ತಾಲೂಕ ಪ್ರವಾಸಿ ಮಂದಿರ, ಜೂನ್ 21 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಯಡ್ರಾಮಿ ತಾಲೂಕ ಪ್ರವಾಸಿ ಮಂದಿರ, ಜೂನ್ 23 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಚಿಂಚೋಳಿ ತಾಲೂಕ ಪ್ರವಾಸಿ ಮಂದಿರ ಹಾಗೂ ಜೂನ್ 27 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಸೇಡಂ ತಾಲೂಕು ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: ಕೆನಡಿಯನ್ ವುಡ್ ವತಿಯಿಂದ ಇಂಡಿಯಾ ವುಡ್ 2022 ನಲ್ಲಿ ಟ್ರೆಂಡಿ ಪೀಠೋಪಕರಣ ಅಪ್ಲಿಕೇಶನ್‍ಗಳ ಪ್ರದರ್ಶನ