ಕಲಬುರಗಿ: ಆಮ ಆದ್ಮಿ ಪಕ್ಷದ ಗ್ರಾಮ ಸಂಪರ್ಕ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಜೂನ್ ೧೨ ರಂದು ಸಾಯಂಕಾಲ ೪.ಕ್ಕೆ ಕಲಬುರಗಿ ಜಿಲ್ಲೆಯ ಆಮ ಆದ್ಮಿ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಕುಸನೂರ ರಸ್ತೆಯಲ್ಲಿರುವ ಎಸ್.ಎಸ್.ವಿ ಟಿವಿ ಸಭಾಂಗಣದಲ್ಲಿ ನಡೆಯಲ್ಲಿದೆ ಈ ಸಮಾವೇಶದಲ್ಲಿ ಆಮ್ ಆದ್ಮಿ ಪಕ್ಷದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು, ನೂರಾರು ಸಂಖ್ಯೆಯಲ್ಲಿ ಭಾಗವಹಿಸಲು ಆಮ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಜಯ ಶರ್ಮಾ ರವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್, ಜನತಾದಳ, ಆಡಳಿತ ಪಕ್ಷವಾದ ಬಿಜೆಪಿ ರಾಜಕಿಯ ವ್ಯವಸ್ಥೆ ಹೀನಾಯ ಪರಸ್ಥಿಗೆ ತಳ್ಳಿದೆ ಕರ್ನಾಟಕದ ಜನತೆ ಈ ಮೂರು ಪಕ್ಷಗಳಿಂದ ಬೇಸತ್ತಿದ್ದಾರೆ. ಇಂಥಹ ಪರಸ್ಥಿತಿಯಲ್ಲಿ ಜನರು ಆಮ್ ಆದ್ಮಿ ಪಕ್ಷದ ಕಡೆಗೆ ನೋಡುತ್ತಿದ್ದಾರೆ.
ಆಮ್ ಆದ್ಮಿ ಪಕ್ಷ ಒಂದು ಓಟ ಆಮ ಆದ್ಮಿ ಪಕ್ಷಕ್ಕೆ ಕೊಟ್ಟು ಕರ್ನಾಟಕದಲ್ಲಿ ದಿಲ್ಲಿ ಮತ್ತು ಪಂಜಾಬ ಮಾದರಿಯಲ್ಲಿ ಕರ್ನಾಟಕದ ಜನತೆಗೆ ಹತ್ತು ಹಲವಾರು ಯೋಜನೆಗಳು ಕೊಡುತ್ತವೆ
ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ೨೦೦-೩೦೦ ಯೂನಿಟ ವಿದ್ಯುತ್ (ಕರೆಂಟ್) ಉಚಿತ ಎಲ್ಲಾ ನಾಗರೀಕರಿಗೆ ಉಚಿತ ಆರೋಗ್ಯ ಸೌಲಭ್ಯ ಯಾವುದೆ ಕಾಯಿಲೆ, ಆಪರೇಷನ. ಹೃದಯ ಶಸ್ತ್ರ ಚಿಕಿತ್ಸೆ ೨೦ ಲಕ್ಷ ರೂಪಾಯಿ ಅಥವಾ ಮೆಲ್ಪಟ್ಟ ಅಸ್ಪತ್ರೆ ಬಿಲ್ ಸರಕಾರವೆ ಭರಿಸುತ್ತದೆ. ದಿಲ್ಲಿ ಮಾದರಿಯಲ್ಲಿ ಮೊಹಲ್ಲಾ ಕ್ಲಿನಿಕಗಳು ಸ್ತಾಪಿಸಲಾಗುವದು.
ಕರ್ನಾಟಕದ ಎಲ್ಲಾ ಮಕ್ಕಳಿಗೆ ವಿಶ್ವ ದರ್ಜೆಯ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಉಚಿತ ಶಿಕ್ಷಣ, ಕ್ರಿಡೆ, ಈಜುಕೋಳ, ಜಿಮ್, ಇತ್ತಾದಿ ಸೌಲಭ್ಯ ಒದಗಿಸಲಾಗಿವದು. ಪ್ರತಿಯೊಬ್ಬ ಮಹಿಳೆಗೆ ಪ್ರತಿ ತಿಂಗಳು ೧೦೦೦ ರೂಪಾಯಿ ಮಾಶಾಸನ, ಅಟೋ ಚಾಲಕರಿಗೆ ಫ್ರೀ ಗ್ಯಾಸ ಸಿಲೆಂಡರ್ ಕೊಡುವದು ಇತ್ಯಾದಿ ಸೌಲಭ್ಯೆಗಳ ಬಗ್ಗೆ ಜನರಿಗೆ ತಿಳಿಸಿ ಜಾಗೃತಿ ಮೂಡಿಸಲು ಕಾರ್ಯಗಾರ ರೂಪದಲ್ಲಿ ಈ ಸಮಾವೇಶ ಇದೆ. ಎಂದು ಶರ್ಮಾ ಅವರು ತಿಳಸಿದ್ದಾರೆ.