ಕಲಬುರಗಿ: ೨೦೨೧-೨೨ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮಾನ್ಯ ಮುಖ್ಯಮಂತ್ರಿಗಳ ವಿವೇಚನಾ ನಿಧಿ ಕೋಟಾದ ಸಾಮಾನ್ಯ ಯೋಜನೆ ಅಡಿಯಲ್ಲಿ ಕಲಬುರಗಿ ಉತ್ತರ ಮತ ಕ್ಷೇತ್ರದ ವಾರ್ಡ ನಂ ೨೩ ಹಳೆ ಭೂವಿ ಗಲ್ಲಿಯಲ್ಲಿ ೧೫ ಲಕ್ಷದ ಸಿ ಸಿ ರಸ್ತೆ ಕಾಮಗಾರಿಯ ಅಡಿಗಲ್ಲು ಸಮಾರಂಭಕ್ಕೆ ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ದಿಗಂಬರ ಮಾಗಣಗೆರಿ, ಬಿಜೆಪಿ ನಗರ ಜಿಲ್ಲಾ ಪ್ರದಾನ ಕಾರ್ಯದರ್ಶಿ ಉಮೇಶ ಪಾಟೀಲ, ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ಅಶೊಕ ಮಾನಕರ, ಮುಖಂಡರಾದ ಜಗದೀಶ ಗಾಕರೆ, ಶರಣು ದೆಗಾಂವ, ಶಿವರಣಪ್ಪ ಹೊಡಾಲ, ಶರಣು ನಂದಿಕೂರ, ವಿರುಪಾಕ್ಷಿ ಮುದ್ದಾ, ಕಾಳಪ್ಪ ಪೆದ್ದಿ, ವೀರೇಶ್ ಮಡಪತಿ, ಮಂಜು ಸಾಳುಂಕೆ, ಶಾಂತಪ್ಪ ಪಾಟೀಲ್, ಶಿವಸ್ವಾಮಿ ರತನ್ ಮಾಮ, ದೀಪಕ್ ಪವರ್, ಗಜೇಶ್ವರ್ ದೀಪಕ್, ಬಲದೇವ, ಜಗದೀಶ್ ಇದ್ದರು.