ಶಹಾಬಾದ: ನಗರಸಭೆಯ ಕಚೇರಿಯನ್ನು ನಗರ ಕಾಂಗ್ರೆಸ್ ಪಕ್ಷದ ಮುಖಂಡರು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಮುಖಂಡರ ಹುಟ್ಟು ಹಬ್ಬವನ್ನು ಆಚರಿಸುವ ಪಾರ್ಟಿ ಹಾಲ್ ಮಾಡಿಕೊಂಡಿದ್ದಾರೆ ಎಂದು ನಗರಸಭೆಯ ಸದಸ್ಯ ರವಿ ರಾಠೋಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸುಮಾರು ತಿಂಗಳಿಂನಿಂದ ನಗರಸಭೆಯ ಅಧ್ಯಕ್ಷರ ಕಚೇರಿಯಲ್ಲಿ ಈ ರಿತೀಯ ಆಚರಣೆಗಳು ರಾಜಾರೋಷವಾಗಿ ಮಾಡಲಾಗುತ್ತಿದೆ.ಈ ಬಗ್ಗೆ ಪೌರಾಯುಕ್ತರು ತಲೆಕೆಡಿಸಿಕೊಂಡಿಲ್ಲ. ಸರಕಾರಿ ಕಚೇರಿಯಲ್ಲಿ ಈ ರೀತಿಯ ಆಚರಣೆಗಳು ನಡೆಯಬಾರದು ಆದರೂ ಬಹಿರಂಗವಾಗಿ ಆಚರಣೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ.ಇದಕ್ಕೆ ಸಾಕ್ಷಿ ಎಂಬಂತೆ ರವಿವಾರ ನಗರಸಭೆಯ ಅಧ್ಯಕ್ಷರ ಕೋಣೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ವಿಜಯಕುಮಾರ ಮುಟ್ಟತ್ತಿ ಅವರ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವುದೇ ಸಾಕ್ಷಿ ಎಂದರು.
ಇದನ್ನೂ ಓದಿ: ಚಂದು ಪಾಟೀಲ 15 ಲಕ್ಷ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ
ರವಿವಾರ ಕಚೇರಿಗೆ ರಜೆ ಇದ್ದರೂ ಬಾಗಿಲು ಹೇಗೆ ತೆರೆದರು. ಆಚರಣೆ ಮಾಡಲು ಯಾರ ಅನುಮತಿ ಪಡೆದರು.ಈ ಬಗ್ಗೆ ಜವಾಬ್ದಾರಿ ಸ್ಥಾನದಲ್ಲಿರುವ ಪೌರಾಯುಕ್ತರು ಹಾಗೂ ಅಧ್ಯಕ್ಷರು ಸ್ಪಷ್ಟನೆ ನೀಡಬೇಕಿದೆ. ಇನ್ನೊಂದು ವಿಪರ್ಯಾಸವೆಂದರೆ ನಗರಸಭೆಯ ಅಧ್ಯಕ್ಷರ ಪತಿ ಮತ್ತು ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ , ಕಾಂಗ್ರೆಸ್ ಅಧ್ಯಕ್ಷರಾದ ಡಾ.ರಶೀದ್ ಮರ್ಚಂಟ್ ಹಾಗೂ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ ಹಾಗೂ ಇತರರು ಪಾಲ್ಗೊಂಡಿರುವುದು ನೋಡಿದರೇ ಇವರಿಗೆ ಸರಕಾರಿ ಕಚೇರಿಯಲ್ಲಿ ಆಚರಿಸಬಾರದೆಂಬ ಸಾಮನ್ಯ ಜ್ಷಾನವಿಲ್ಲವೇ ಎಂಬ ಅನುಮಾನ ಕಾಡುತ್ತಿದೆ.
ಒಬ್ಬ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಾ.ರಶೀದ್, ಉಪಾಧ್ಯಕ್ಷರಾದ ವಿಜಯಕುಮಾರ ಮುಟ್ಟತ್ತಿ ಸಾಕಷ್ಟು ಅನುಭವ ಹೊಂದಿದ್ದರೂ ನಗರಸಭೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಗಿರೀಶ ಕಂಬಾನೂರ ಅವರು ಈ ರೀತಿ ಮಾಡಿದ್ದು ನೋಡಿದರೇ, ಅವರ ಪತ್ನಿ ಅಂಜಲಿ ಕಂಬಾನೂರ ನಗರಸಭೆಯ ಅಧ್ಯಕ್ಷರಾಗಿದ್ದು ಅವರ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಹಿರಂಗವಾಗಿ ಗೊತ್ತಾಗುತ್ತದೆ.ಸರಕಾರಿ ಕಚೇರಿಯನ್ನು ಕಾಂಗ್ರೆಸ್ ಪಕ್ಷದ ಕಚೇರಿಯನ್ನಾಗಿ ಮಾಡಿಕೊಂಡು ಇಂತಹ ಚಟುವಟಿಕೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.ಕೂಡಲೇ ಪೌರಾಯುಕ್ತರು ಇದಕ್ಕೆ ಉತ್ತರ ನೀಡಬೇಕು.ಅಲ್ಲದೇ ಇದನ್ನು ಸಂಪರ್ಣ ತಡೆಗಟ್ಟಬೇಕೆಂದು ರವಿ ರಾಠೋಡ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಸ್ತೆ ಅಪಘಾತಕ್ಕಿಡಾಗಿದ ಮಹಿಳೆಗೆ ಚಿಕಿತ್ಸೆ ಕೊಡಿಸಿದ ಸಂಸದ ಜಾಧವ