ಮೊಘಲರಿಗೆ ಸಿಂಹಸ್ವಪ್ನವಾಗಿ ಕಾಡಿದ್ದು ಮಹಾರಾಣಾ ಪ್ರತಾಪ್

0
59

ಶಹಾಬಾದ: ಮೊಘಲರಿಗೆ ಸಿಂಹಸ್ವಪ್ನವಾಗಿ ಕಾಡಿದ ಮಹಾರಾಣಾ ಪ್ರತಾಪ್ ರಜಪೂತರ ಹೆಮ್ಮೆಯ ದೊರೆ ಎಂದು
ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.

ಅವರು ರವಿವಾರ ನಗರದ ಸ್ಟಾರ್ ಫಂಕ್ಷನ ಹಾಲ್‌ನಲ್ಲಿ ರಜಪೂತ ಸಮಾಜದ ವತಿಯಿಂದ ಆಯೋಜಿಸಲಾದ ಮಹಾರಾಣಾ ಪ್ರತಾಪ್‌ಸಿಂಗ್ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಸ್ವದೇಶ,ಸ್ವಧರ್ಮ, ಸಂಸ್ಕೃತಿ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯವನ್ನು ರಕ್ಷಣೆ ಮಾಡಲು ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡಿದ ಮಹಾರಾಣಾ ಪ್ರತಾಪಸಿಂಗ್ ಅವರು ಎಂದೆಂದಿಗೂ ಇತಿಹಾಸದ ಪುಟಗಳಲ್ಲಿ ಅಜರಾಮರ. ಮೊಘಲರ ಸಾವಿರಾರು ಸೈನಿಕರು ಸುತ್ತುವರೆದಿರುವ ಭದ್ರಕೋಟೆಯೊಳಗೆ ನುಗ್ಗಿ ನೇರವಾಗಿ ಸೇನಾಪತಿಯ ಮೇಲೆಯೇ ಹಲ್ಲೆ ಮಾಡುವ ರಾಣಾ ಪ್ರತಾಪಸಿಂಗ್ ಶೌರ್ಯವು ಇಂದಿಗೂ ಎಲ್ಲರನ್ನೂ ರೋಮಾಂಚನಗೊಳಿಸುತ್ತದೆ.ಧರ್ಮಕ್ಕಾಗಿ ಪ್ರಾಣ ಪಣಕ್ಕಿಡಲು ಹಿಂದೆ ಮುಂದೆ ನೋಡದ ರಾಣಾ ಪ್ರತಾಪಸಿಂಗ ಧೈರ್ಯ ಹಾಗೂ ಶೂರತನಕ್ಕೆ ಉದಾಹರಣೆ.ಇಂದಿನ ಯುವಕರು ರಾಣಾ ಪ್ರತಾಪರ ಚರಿತ್ರೆಯನ್ನು ಓದಿಕೊಳ್ಳಬೇಕಾಗಿದೆ ಎಂದರು.

ಉದ್ಯಮಿ ರಾಜೇಶ ವರ್ಮಾ ಮಾತನಾಡಿ,ಮೊಘಲರಿಗೆ ಸಿಂಹಸ್ವಪ್ನವಾಗಿ ಕಾಡಿದ ಮಹಾರಾಣಾ ಪ್ರತಾಪ್ ಎಂಥ ಸ್ಥಿತಿ ಬಂದರೂ ರಜಪೂತರು ತಲೆಬಾಗುವುದಿಲ್ಲ ಕೊನೆ ಉಸಿರು ಇರುವವರೆಗೂ ತಾಯಿನಾಡು ಮಾತೃಭೂಮಿ ತಮ್ಮ ಧರ್ಮವನ್ನು ರಕ್ಷಿಸುತ್ತಾರೆ ಎಂದು ಮೊಗಲರಿಗೆ ಗುಡುಗಿದ್ದರು. ಭಾರತೀಯ ಇತಿಹಾಸದ ಅಪ್ರತಿಮ ವೀರ ಮಹಾರಾಣಾ ಪ್ರತಾಪ್ ಸಿಂಹ ಚಿಟಕಿ ಹೊಡೆಯುವ ಹೊಡೆಯುವ?ರಲ್ಲಿ ನೆಚ್ಚಿನ ಕುದುರೆ ಮೇಲೆ ಕುಳಿತು ಶತ್ರುಸೈನ್ಯದ ಚಂಡಾಡಿದ್ದರು. ಮಹಾರಾಣಾ ಪ್ರತಾಪ್ ನನಗೆ ಶಿರಬಾಗಿದರೆ ಹಿಂದುಸ್ತಾನ ಉಸ್ತುವಾರಿ ನೀಡುತ್ತೇನೆ. ನನ್ನ ಆಡಳಿತದ ಕೆಳಗೆ ರಾಜ್ಯಭಾರ ಮಾಡಲಿ ಎಂದು ಮೊಗಲರು ಹೇಳಿದ್ದರು. ನಾನು ಎಂದಿಗೂ ತಲೆಬಾಗುವುದಿಲ್ಲ ಕೊನೆಯುಸಿರುವವರೆಗೂ ತಾಯಿ ನಾಡಿಗಾಗಿ ಹೋರಾಡುತ್ತೆನೆ. ವೀರನಾಗಿ ಸಾಯುತ್ತೆನೆ ಹೊರತು, ಗುಲಾಮರಾಗಿ ಬದುಕುವುದಿಲ್ಲ ಎಂದು ಖಡಕ್ ರವಾನೆ ಕಳಿಸಿದವರು ಮಹಾರಾಣಾ ಪ್ರತಾಪ್ ಎಂದು ಹೇಳಿದರು.

ನಿಜಾಮ ಬಜಾರನ ಮಂಗಲಸಿಂಗ ಬೆಂಕಿತಾತನವರು ಧ್ವಜಾರೋಹಣ ಮಾಡಿದರು. ರಜಪೂತ ಸಮಾಜದ ಪ್ರಧಾನ ಅಧ್ಯಕ್ಷ ವಿಜಯಸಿಂಗ ಠಾಕೂರ, ಅಧ್ಯಕ್ಷರಾದ ತುಳಜಾರಾಮ ಮಿಶ್ರಾ, ಉಪಾಧ್ಯಕ್ಷರಾದ ರತನಸಿಂಗ ತಿವಾರಿ, ಕಾರ್ಯದರ್ಶಿ ಅಮಿತಸಿಂಗ, ಖಜಾಂಚಿ ಸಚಿನಸಿಂಗ, ಅರವಿಂದಸಿಂಗ, ಅನಿಲ ಮಿಶ್ರಾ, ವಿಜಯಸಿಂಗ ಚಂದೇಲಿ, ನಂದಕಿಶೋರಸಿಂಗ, ರಘುವೀರಸಿಂಗ ಠಾಕೂರ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here