ಕಲಬುರಗಿ: ಬಸವಕಲ್ಯಾಣ:ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಖೇರ್ಡಾ (ಬಿ)ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ನಕಲಿ ದಾಖಲೆ ಸೃಷ್ಟಿಸಿ ಜಾಗ ಕಬಳಿಸಲು ಹುನ್ನಾರ ನಡೆಸಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಒ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ರಾಜ್ಯ ಭ್ರಷ್ಟಾಚಾರ ನಿರ್ಮೂಲನಾ ದಳ ರಾಜ್ಯಾಧ್ಯಕ್ಷ ಡಾ.ಎಸ್.ಭದ್ರಶೆಟ್ಟಿ ನೇತೃತ್ವದಲ್ಲಿ ಇಂದು ಬಸವಕಲ್ಯಾಣ ಉಪ ತಹಸಿಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಶ್ರೀಮತಿ ಶರಣಮ್ಮಾ ಗಂಡ ಗೋಪಾಲರಾವ್ ಬಿರಾದರ ಇವರಿಗೆ ಸಂಬಂಧಿಸಿದ ಸ.ನಂ.186ರ ಭೂಮಿ ರೂ 481750 ಮೌಲ್ಯಕ್ಕೆ ಖರಿಸಿದ್ದು, ಇಲ್ಲಿ 100×60 ವಿಸ್ತಿರಣದ ಜಾಗವೇ ಇರುವುದಿಲ್ಲ.ಇದು ಸಮುದಾಯ ಭವನಕ್ಕೆ ಎಂದು ಪಿಡಿಒ ಹೆಸರಿನಲ್ಲಿ ಬರೆದು ಕೊಟ್ಟಿರುವುದು ಅಕ್ರಮವಾಗಿದೆ.ಬದಲಾವಣೆ ರೆಜಿಸ್ಟರ್ ನಮೂನೆ 13(ನಿಯಮ 38 (5) ದಿನಾಂಕ 18-10-2012 ಅರ್ಜಿ ಸಲ್ಲಿಸಿದ ದಿನಾಂಕ ಇದ್ದು ನೊಟೀಸ್ ಹೊರಡಿಸಿದ ದಿನಾಂಕ 10-10-2012 ಎಂದು ನಮೂದಿಸಲಾಗಿದೆ.ದಾನ ಪತ್ರ ದಿ.8-11-12 ಇದ್ದು ಇದಕ್ಕಿಂತ ಮೊದಲೇ ಅರ್ಜಿ ಸಲ್ಲಿಸಲಾಗಿತ್ತೆ ಇದು ಸುಳ್ಳು ಆಗಿದೆ.ಕಟ್ಟಡ ರಚನೆ ಹಾಗೂ ನಕ್ಷೆ ಅಳತೆ ಕೂಡ ಮೊಸದಿಂದ ಕೂಡಿದೆ.ಹಿಗೆ ತಿಪ್ಪೆ ಗುಂಡಿ ಜಾಗ ಅತಿಕ್ರಮಿಸಿ ಮೂಲ ಜಾಗದ ಮಾಲಿಕರಾದ ಓಂಕಾರ ತಂದೆ ಶಿವರಾಯ ನಾಮಣಿ , ಶಿವಲಿಂಗಪ್ಪ ತಂದೆ ಭದ್ರಶೆಟ್ಟಿ ಅವರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.ಕೂಡಲೆ ಅತಿಕ್ರಮಣ ಜಾಗವನ್ನು ತೆರವುಗೊಳಿಸಿ ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿಪಡಿಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ, ಹಿರಿಯ ಮುಖಂಡ ಡಾ.ಬಸವರಾಜ ಸ್ವಾಮಿ, ಪ್ರಶಾಂತ ತಂಬೂರಿ ಮತ್ತು ಸಂಗಮೇಶ ವಾಲಿ ಇದ್ದರು.