ಹಳೆ ಪಠ್ಯವನ್ನೇ ಮುಂದುವರಿಸಿರಿ: ಹಣಮಂತರಾವ ಭೂಸನೂರ್ ಆಗ್ರಹ

0
16

ಕಲಬುರಗಿ:ರಾಜ್ಯ ಸರ್ಕಾರ ಪಠ್ಯ ಪರಿಷ್ಕರಣೆ ಕೈಬಿಡಬೇಕು, ಹಳೆಯ ಪಟ್ಯವನ್ನೇ ಶಾಲೆಗಳಲ್ಲಿ ಬೋಧಿಸಬೇಕು ಎಂದು ಕೆಪಿಸಿಸಿ ಸದಸ್ಯ ಹಣಮಂತರಾವ ಭೂಸನೂರ್ ಆಗ್ರಹಿಸಿದ್ದಾರೆ. ಕಲಬುರಗಿಯಲ್ಲಿ ನಡೆದ ಕರ್ನಾಟಕ ಅಸ್ಮಿತೆ ಉಳಿಸಿ ಆಂದೋಲನದ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಹರಿಹಾಯ್ದರು.

ಬುದ್ಧ, ಬಸವ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ ಸೇರಿದಂತೆ ಅನೇಕ ದಾರ್ಶನಿಕರ ವಿಚಾರಗಳಲ್ಲಿ ಸತ್ಯ ತಿರುಚಲಾಗಿದೆ, ಹಲವರ ವಿಚಾರಗಳನ್ನೇ ಕೈಬಿಡಲಾಗಿದೆ. ಸುರಪುರ ನಾಯಕರ ಚರಿತ್ರೆಗೂ ಕತ್ತರಿ ಹಾಕಲಾಗಿದೆ. ಇಂತಹ ಪಠ್ಯ ನಮ್ಮ ಮಕ್ಕಳು ಓದಬೇಕೆ? ಎಂದು ಭೂಸನೂರ್ ಖಾರವಾಗಿ ಪ್ರಶ್ನಿಸಿದ್ದಾರೆ.

Contact Your\'s Advertisement; 9902492681

ಮಕ್ಕಳ ಮನಸ್ಸು ಹೂವಿನಂತೆ ಇರುತ್ತದೆ. ಅವರ ಮನದಲ್ಲಿ ಚಿಂತನೆಗಳನ್ನು ಬಿತ್ತಬೇಕೆ ವಿನಹಃ ಇಂತಹ ಜಾತಿ- ಕೋಮಿನ ವಿಷವಲ್ಲ, ಸರ್ಕಾರ ಪರಿಷ್ಕøತ ¥ಠ್ಯ ಹಿಂದಕ್ಕೆ ಪಡೆಯಬೇಕು, ಹಳೆಯ ಪಟ್ಯವನ್ನೇ ಈಗ ಮುಂದುವರಿಸಬೇಕು, ಆ ಮೂಲಕ ಸಮಾಜದ ಸಾಮ್ಯ ಕಾಪಾಡಬೇಕು ಎಂದು ಹಣಮಂತರಾವ ಭೂಸನೂರ್ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here