ವಾಹನ ಡಿಕ್ಕಿ ಅಪರಿಚಿತ ವ್ಯಕ್ತಿ ಸಾವು

0
604

ಶಹಾಬಾದ: ತಾಲೂಕಿನ ದೇವನ ತೆಗನೂರ್ ಗ್ರಾಮದ ಸೇತುವೆ ಬಳಿ ವಾಹನವೊಂದು ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದ ಪರಿಣಾಮ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ-150ಕ್ಕೆ ಹೊಂದಿಕೊಂಡಿರುವ ದೇವನ ತೆಗನೂರ್ ಗ್ರಾಮದ ಸೇತುವೆ ಬಳಿ ವ್ಯಕ್ತಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಗಂಭೀರ ಗಾಯಗೊಂಡು ಬಿದ್ದಿದ್ದಾನೆ. ಸುದ್ದಿ ತಿಳಿದ ಪೊಲೀಸರು ತಕ್ಷಣವೇ ಘಟನಾ ಸ್ಥಳಕ್ಕೆ ಹೋಗಿ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ. ಆದರೆ ವ್ಯಕ್ತಿ ಯಾರೆಂದು ತಿಳಿದು ಬಂದಿಲ್ಲ. ಆದ್ದರಿಂದ ಯಾರಾದರೂ ಈ ವ್ಯಕ್ತಿಯನ್ನು ಗುರುತಿಸಿದರೇ ಕೂಡಲೇ ಶಹಾಬಾದ ನಗರ ಪೊಲೀಸ್ ಠಾಣೆಗೆ ಸಂಪರ್ಕಿಸಲು ತಿಳಿಸಿದ್ದಾರೆ. ಸಂಪರ್ಕಿಸನಬೇಕಾದ ಮೊಬೈಲ್ ಸಂಖ್ಯೆ-9480803570

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here