ಮತಕ್ಷೇತ್ರದಲ್ಲಿ ೧೫೦೦ ಕೋಟಿ ರೂ ಅನುದಾನದಲ್ಲಿ ಅಭಿವೃದ್ಧಿ ಕೆಲಸಗಳು ಮಾಡಿದ್ದೆನೆ-ಮತ್ತಿಮಡು

0
127

ಸಾರ್ವಜನಿಕರ ಅನುಕೂಲಕ್ಕಾಗಿ ನಗರದಲ್ಲಿ ಬಸ್ ನಿಲ್ದಾಣ ಮಾಡಲು ಈಗಾಗಲೇ ಎಲ್ಲಾ ಕ್ರಮಕೈಗೊಳ್ಳಲಾಗಿದೆ.ಅಲ್ಲದೇ ಎರಡು ಕಾರ್ಖಾನೆಗಳನ್ನು ಪ್ರಾರಂಭ ಮಾಡಲು ಸಚಿವರಾವ ಮುರುಗೇಶ ನಿರಾಣಿಯವರ ಜತೆ ಸಮಾಲೋಚನೆ ಮಾಡಿದ್ದೆನೆ.ಅವರು ಎರಡು ಕಾರ್ಖಾನೆಯ ಮಾಲೀಕರು ಕರೆದರೂ ಸಭೆಗೆ ಹಾಜರಾಗುತ್ತಿಲ್ಲ.ಆದ್ದರಿಂದ ವಿಳಂಬವಾಗುತ್ತಿದೆ.ಆದರೂ ಕಾರ್ಖಾನೆ ಪುರಾಂಭಕ್ಕೆ ಪ್ರಯತ್ನ ಪಡುತ್ತೆನೆ- ಬಸವರಾಜ ಮತ್ತಿಮಡು ಶಾಸಕ.

ಶಹಾಬಾದ: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಸುಮಾರು ೧೫೦೦ ಕೋಟಿ ರೂ. ಅನುದಾನವನ್ನು ತಂದು ಪ್ರತಿಹಳ್ಳಿಗಳಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೆನೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

Contact Your\'s Advertisement; 9902492681

ಅವರು ರವಿವಾರ ನಗರದಲ್ಲಿ ಆಯೋಜಿಸಲಾದ ವಿವಿಧ ಕಾಮಗಾರಿಗಳ ಅಡಿಗಲ್ಲು ಹಾಗೂ ಉದ್ಘಾಟನೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಈಗಾಗಲೇ ನಗರದಲ್ಲಿ ಸಾಕಷ್ಟು ಕೆಲಸಗಳಾಗಿವೆ. ಆದರೂ ಇನ್ನೂ ಕೆಲಸಗಳಾಗಬೇಕೆಂದು ಜನರ ಆಸೆ ಇದೆ. ಅವರ ಬೇಡಿಕೆ ಮೇರೆಗೆ ಇನ್ನೂ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತದೆ. ಅಲ್ಲದೇ ನಗರಸಭೆಯ ಎಸ್‌ಎಫ್‌ಸಿ ಅನುದಾನದಲ್ಲಿ ಸುಮಾರು ೧.೬೨ ಕೋಟಿ ರೂ.ಯಲ್ಲಿ ಕೆಇಬಿಯಿಂದ ನಗರದ ರೇಲ್ವೆ ನಿಲ್ದಾಣದವರೆಗೆ ಫುಟ್‌ಪಾತ್ ಹಾಗೂ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಲಾಗಿದ್ದು, ಅದರಂತೆ ೧೪ನೇ ಹಣಕಾಸು ಯೋಜನೆಯಡಿ ಸುಮಾರು ೪೬ ಲಕ್ಷ ರೂ. ಅನುದಾನದಲ್ಲಿ ನಗರದ ಲಕ್ಷ್ಮಿ ಗಂಜ್‌ನಲ್ಲಿ ನಿರ್ಮಾಣಗೊಂಡ ಉದ್ಯಾನವನ ಉದ್ಘಾಟನೆ ಮಾಡಲಾಗುತ್ತಿದೆ.

ನಗರೋತ್ಥಾನ ಯೋಜನೆಯಡಿ ೩೦ ಕೋಟಿ ರೂ. ಅನುದಾನ ಬಂದಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ.ಇನ್ನೊಂದು ವಾರದಲ್ಲಿ ಕಾಮಗಾರಿ ಪ್ರಾರಂಭ ಮಾಡುವ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ.ಕಮಲಾಪೂರದಲ್ಲಿ ೧೬ ಕೆರೆಗಳ ಅಭಿವೃದ್ಧಿಗಾಗಿ ೧೬.೮೦ ಕೋಟಿ ರೂ. ಅನುದಾನ ಒದಗಿಸಲಾಗಿದೆ. ಅಲ್ಲದೇ ತಾಲೂಕಾ ರಚನೆಯಾದ ನಂತರ ಮುಖ್ಯಮಂತ್ರಿಗಳಿಗೆ ಕಚೇರಿಗಳ ಪ್ರಾರಂಭಕ್ಕೆ ಮನವಿ ಮಾಡಿದ್ದೆನೆ .ಆದಷ್ಟು ಶೀಘ್ರ ಕಚೇರಿಗಳು ಪ್ರಾರಂಭವಾಗಲಿವೆ. ಇನ್ನೂ ಸಾಕಷ್ಟು ಅನುದಾನ ತರುವುದರ ಮೂಲಕ ಹಲವಾರು ಅಭಿವೃದ್ಧಿ ಕೆಲಸಗಳು ಮಾಡಲಾಗುತ್ತದೆ ಎಂದರು.

ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ,ವಾಡಿ-ಶಹಾಬಾದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಮಾತನಾಡಿದರು. ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಮುಖಂಡ ಫಜಲ್ ಪಟೇಲ್, ನಗರಸಭೆಯ ಸದಸ್ಯರಾದ ಪರ್ವಾತಿ ಪವಾರ, ಸಾಬೇರಾಬೇಗಂ,ಜಗದೇವ ಸುಬೇದಾರ, ಪೌರಾಯುಕ್ತ ಬಸವರಾಜ ಹೆಬ್ಬಾಳ, ಎಇಇ ಶರಣು ಪೂಜಾರಿ, ಎಇಇ ಮುಜಾಮಿಲ್ ಅಲಂ ವೇದಿಕೆಯ ಮೇಲಿದ್ದರು.

ರಘುನಾಥ ನರಸಾಳೆ ನಿರೂಪಿಸಿದರು, ಶರಣಗೌಡ ಪಾಟೀಲ ಸ್ವಾಗತಿಸಿದರು, ಶಿವರಾಜಕುಮಾರ ವಂದಿಸಿದರು. ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯ ರವಿ ರಾಠೋಡ, ಶಿವಕುಮಾರ ಇಂಗಿನಶೆಟ್ಟಿ, ನಿಂಗಣ್ಣ ಹುಳಗೋಳಕರ್,ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ,ಭೀಮಯ್ಯ ಗುತ್ತೆದಾರ,ರಾಜೇಶ ಯನಗುಂಟಿಕರ್, ರಾಮು ಕುಸಾಳೆ, ಶಿವುಗೌಡ ಪಾಟೀಲ, ವಿರೇಶ ಬಂದಳ್ಳಿ, ಮೋಹನ ಘಂಟ್ಲಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here