ಹಕ್ಕು ಪತ್ರ ವಿತರಿಸಲು ವಸತಿ ಸಚಿವರಿಗೆ ಎಸ್.ಯು.ಸಿ.ಐ. ಮನವಿ

0
59

ಶಹಾಬಾದ: ನಗರದ ರಾಮಘಡ ಆಶ್ರಯ ಕಾಲೋನಿಯ ಸುಮಾರು ೨೬೭ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ತಾಂತ್ರಿ ದೋಷ ಕಾರಣವಾಗಿದ್ದು, ಅದನ್ನು ಸರಿಪಡಿಸಿ ಹಕ್ಕು ಪತ್ರ ನೀಡಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ನಗರದ ಎಸ್.ಯು.ಸಿ.ಐ. (ಸಿ) ಸ್ಥಳೀಯ ಸಮಿತಿ ನಿಯೋಗದ ವತಿಯಿಂದ ಶನಿವಾರ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನಗರದ ರಾಮಘಡ ಆಶ್ರಯ ಕಾಲೋನಿಯ ಸುಮಾರು ೨೬೭ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಬೇಕೆಂದು ಜಿಲ್ಲಾಧಿಕಾರಿಗಳಿಂದಲೂ ಅನುಮೋದನೆ ದೊರಕಿದೆ.ಆದರೂ ಸುಮಾರು ೮ ತಿಂಗಳಿನಿಂದ ಇಲ್ಲಿಯವರೆಗೆ ಹಕ್ಕು ಪತ್ರ ನೀಡದಿರುವುದರಿಂದ ತೊಂದರೆಗೆ ಸಿಲುಕಿದ್ದಾರೆ. ಇಲ್ಲಿನ ಜನರು ಹಲವು ವರ್ಷಗಳಿಂದ ಕಚೇರಿಗಳಿಗೆ ಅಲೆದಾಡಿದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.

Contact Your\'s Advertisement; 9902492681

ನಗರದ ವಾರ್ಡ ನಂ.೩ ಸರ್ವೆ ನಂ. ೧೧೬/೧ ನಲ್ಲಿ ಇದ್ದ ಆಶ್ರಯ ಕಾಲೋನಿ ರಾಮಗಡದ ಜನತೆ ತಮ್ಮ ನಿವಾಸದ ಹಕ್ಕುಪತ್ರದ ಸಲುವಾಗಿ ಸುಮಾರು ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ. ಸುಮಾರು ದಿನಗಳು ಕಳೆದರೂ ಸಹ ತಾಂತ್ರಿಕ ವ್ಯವಸ್ಥೆಯ ಕಾರಣದಿಂದ ಆಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಹೊರತು ಸಮಸ್ಯೆಗೆ ಪರಿಹಾರ ಹೇಳುತ್ತಿಲ್ಲ. ೨೬೭ ಫಲಾನುಭವಿಗಳ ದಾಖಲೆಗಳನ್ನು ಈಗಾಗಲೇ ಆನ್‌ಲೈನ್‌ನಲ್ಲಿ ಹಾಕಲಾಗಿದೆ.

ಆದರೆ ಅದನ್ನು ಇನ್ನೊಂದು ಫಾರ್ಮೆಟ್‌ನಲ್ಲಿ ಸಲ್ಲಿಸಬೇಕೆಂದು ರಾಜ್ಯದಿಂದ ನಿರ್ದೇಶನ ಬಂದಿದ್ದು ಅದರ ಪ್ರಕಾರ ಆನ್‌ಲೈನ್‌ನಲ್ಲಿ ಹಾಕಲು ಹೋದರೆ ಅದು ಅಪಲೋಡ್ ಆಗುತ್ತಿಲ್ಲ. ಹೊಸ ಏಂಟ್ರಿಯನ್ನು ನಿಲ್ಲಿಸುರುವುದಾಗಿ ತಮ್ಮ ಇಲಾಖೆಯ ಅಧಿಕಾರಿಗಳು ತಿಳಿಸಿರುತ್ತಾರೆ.ಆದ್ದರಿಂದ ಸಚಿವರಾದ ತಾವುಗಳು ಆನ್ ಲೈನ್ ಆದರೂ ಸರಿ ಅಥವಾ ಆಫ್ ಲೈನ್ ನಲ್ಲಾರೂ ಸರಿ, ವಿಶೇಷ ಆಸಕ್ತಿ ವಹಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಪತ್ರ ಸಲ್ಲಿಸಿದರು.

ನಿಯೋಗದಲ್ಲಿ ಎಸ್.ಯು.ಸಿ.ಐ (ಸಿ) ಸ್ಥಳೀಯ ಸದಸ್ಯ ರಾಘವೇಂದ್ರ ಎಂ. ಜಿ. ನೇತೃತ್ವದಲ್ಲಿ ವಸತಿ ಸಚಿವರಾದ ವಿ. ಸೋಮಣ್ಣ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮನವಿ ಪತ್ರವನ್ನು ಸ್ವೀಕರಿಸಿದ ಸಚಿವರು ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಬಸವರಾಜ.ಎಸ್. ರವರಿಗೆ ಕೂಡಲೇ ರಾಮಘಡ ನಿವಾಸಿಗಳ ಹಕ್ಕುಪತ್ರದ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸೂಚಿಸಿದರು. ನಿಯೋಗದಲ್ಲಿ ಆಶ್ರಯ ಕಾಲೋನಿಯ ನಿವಾಸಿಗಳಾದ ಗಿರೇಪ್ಪ, ರಮೇಶ ಗೌಡ, ವಿಜಯಕುಮಾರ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here