ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಸದಾ ಕಾಲ ಬದ್ಧ- ಮತ್ತಿಮಡು

0
66

ಶಹಾಬಾದ: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಸದಾ ಕಾಲ ಬದ್ಧನಾಗಿರುತ್ತೆನೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಅವರು ಲೋಕೋಪಯೋಗಿ ಇಲಾಖೆ ವತಿಯಿಂದ ಆಯೋಜಿಸಲಾದ ೨೦೧೯-೨೦ನೇ ಸಾಲಿನ ನಬಾರ್ಡ ಆರ್‌ಐಡಿಎಫ್-೨೫ ಯೋಜನೆಯಡಿ ನಗರದ ಸರಕಾರಿ ಬಾಲಕ ಪ್ರೌಢಶಾಲೆಯಲ್ಲಿ ನಿರ್ಮಾಣಗೊಂಡ ಶಾಲಾ ಕೋಣೆಗಳನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಈಗಾಗಲೇ ನಗರದ ಮಧ್ಯ ಭಾಗದಲ್ಲಿರುವ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಳೆಯ ಕಟ್ಟಡಗಳು ಬೀಳುವ ಹಂತದಲ್ಲಿದ್ದವು.ಇದರಿಂದ ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿತ್ತು.ಅದನ್ನು ಅರಿತು ಸುಮಾರು ೧.೭೦ ಕೋಟಿ ರೂ. ಅನುದಾನದಲ್ಲಿ ಸುಮಾರು ಹತ್ತು ಕೋಣೆಗಳನ್ನು ನಿರ್ಮಾಣ ಮತ್ತು ಅಲ್ಲದೇ ಸುಸಜ್ಜಿತವಾದ ಶೌಚಾಲಯವನ್ನು ನಿರ್ಮಾಣ ಮಾಡಿಕೊಡಲಾಗಿದೆ.ಶಿಕ್ಷಕರು ಇದರ ಸದುಪಯೋಗಪಡಿಸಿಕೊಂಡು ಈ ಭಾಗದ ಮಕ್ಕಳು ಗುಣಮಟ್ಟದ ಶಿಕ್ಷಣ ನೀಡುವತ್ತ ಶ್ರಮಿಸಬೇಕೆಂದು ಹೇಳಿದರು.

ಈಗಾಗಲೇ ನಗರಸಭೆಯ ಎಸ್‌ಎಫ್‌ಸಿ ಅನುದಾನದಲ್ಲಿ ಸುಮಾರು ೧.೬೨ ಕೋಟಿ ರೂ.ಯಲ್ಲಿ ಕೆಇಬಿಯಿಂದ ನಗರದ ರೇಲ್ವೆ ನಿಲ್ದಾಣದವರೆಗೆ ಫುಟ್‌ಪಾತ್ ಹಾಗೂ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿದ್ದೆನೆ.ಶಾಲೆಯ ಮುಂಭಾಗದಲ್ಲೇ ಫೂಟ್ ಪಾತ್ ಹಾದುಹೋಗಲಿದೆ.ಅಲ್ಲದೇ ಶರಣಬಸವೇಶ್ವರ ದೇವಾಲಯದಲ್ಲಿ ಯಾತ್ರಿಕ ನಿವಾಸ ನಿರ್ಮಾಣಕ್ಕೆ ಸುಮಾರು ೫೦ ಲಕ್ಷ ರೂ.ಅನುದಾನ ನೀಡಲಾಗಿದೆ.ನಗರದ ಹೊರವಲಯದ ಜೇವರ್ಗಿ ರಸ್ತೆಗೆ ಹೊಂದಿಕೊಂಡಿರುವ ದಾದಿಪೀರ ದರ್ಗಾದಿಂದ ಕಡೆ ಹಳ್ಳಿ ಗ್ರಾಮಕ್ಕೆ ಸುಮಾರು ೨ ಕೋಟಿ ಅನುದಾನ ಒದಗಿಸಲಾಗಿದೆ. ಹೀಗೆ ಹತ್ತು ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ತೊನಸನಹಳ್ಳಿ ಗ್ರಾಮಕ್ಕೆ ಹಲವಾರು ದಶಕಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು.ಗ್ರಾಮಕ್ಕೆ ಕಾಗಿಣಾ ನದಿಯಿಂದ ಪೈಪ್‌ಲೈನ್ ಮಾಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.ಒಂದು ವಾರದಲ್ಲಿ ಕೆಲಸ ಮುಗಿಯಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಗಣ್ಯರಾದ ನರೇಂದ್ರ ವರ್ಮಾ, ಲೋಕೋಪಯೋಗಿ ಇಲಾಖೆಯ ಎಇ ಜಗನ್ನಾಥ, ಶಿಕ್ಷಣ ಸಂಯೋಜಕ ಶ್ರೀಧರ್, ಮುಖ್ಯಗುರುಗಳಾದ ಏಮನಾಥ ರಾಠೋಡ,ನಗರಸಭೆಯ ಸದಸ್ಯರಾದ ಡಾ.ಅಹ್ಮದ್ ಪಟೇಲ್,ಸಾಬೇರಾ ಬೇಗಂ,ಪಾರ್ವತಿ ಪವಾರ, ಜಗದೇವ ಸುಬೇದಾರ, ಸದಸ್ಯ ರವಿ ರಾಠೋಡ, ನಿಂಗಣ್ಣ ಹುಳಗೋಳಕರ್,ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ,ಭೀಮಯ್ಯ ಗುತ್ತೆದಾರ,ರಾಜೇಶ ಯನಗುಂಟಿಕರ್,ಶರಣು ಪಗಲಾಪೂರ, ರಾಮು ಕುಸಾಳೆ, ಶಿವುಗೌಡ ಪಾಟೀಲ, ವಿರೇಶ ಬಂದಳ್ಳಿ, ಮೋಹನ ಘಂಟ್ಲಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here