ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಸಮಾಜ ವಿಜ್ಞಾನ ನಿಕಾಯದ ಡೀನರಾದ ಡಾ. ವಿ. ಟಿ ಕಾಂಬಳೆ ಅವರ ಹುಟ್ಟು ಹಬ್ಬವನ್ನು ಶಿಷ್ಯ ವೃಂದದ ವಿದ್ಯಾರ್ಥಿಗಳು ಬಹಳ ವಿಜೃಂಭಣೆಯಿಂದ ಆಚರಿಸಿದರು.
ಡಾ. ವಿ. ಟಿ ಕಾಂಬಳೆ ಅವರು ಶಿಕ್ಷಣ ಕ್ಷೇತ್ರಕ್ಕೆ ಬಹಳ ಒತ್ತು ಕೊಟ್ಟು ಮಾನ್ಯವಾರ್ ದಾದಾ ಸಾಹೇಬ್ ಕಾನ್ಛೀರಾಮ ಎಂಬ ಪದವಿ ಕಾಲೇಜನ್ನು ತೆರೆದು ಅಲ್ಲಿ ನೂರಾರು ಹಿಂದುಳಿದ ಮತ್ತು ಅಲ್ಪಸಂಖ್ಯಾತ ದಲಿತ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಒಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಆಗಿ ವಿಭಾಗಕ್ಕೆ ಮಾತ್ರ ಸೀಮಿತ ಆಗದೆ ಸಮಾಜಿಕ ಕ್ಷೇತ್ರದಲ್ಲಿಯೂ ತಮ್ಮ ಹೆಸರು ಗಳಿಸಿರುವ ಗೌರವ ಡಾ. ವಿ ಟಿ ಕಾಂಬಳೆ ಅವರಿಗೆ ಸಲ್ಲುತ್ತದೆ. ಇವರ ಕೈಯಲ್ಲಿ ಸಂಶೋಧನಾ ಮಾಡಿ ಡಾಕ್ಟರೇಟ್ ಪದವಿ ಪಡೆದಿರುವ ವಿದ್ಯಾರ್ಥಿಗಳು ಇಂದು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಗ್ರಂಥಾಲಯದಲ್ಲಿ ಗ್ರಂಥಪಾಲಕರಾಗಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತೀದ್ದಾರೆ.
ಇದು ಕಲ್ಯಾಣ ನಾಡಿಗೆ ಎಲ್ಲಿಲ್ಲದ ಗೌರವ. ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಅತಿಥಿ ಸಹಾಯಕ ಪ್ರಾಧ್ಯಾಪಕ ಡಾ. ರಾಜಕುಮಾರ ಎಂ. ದಣ್ಣೂರ, ಡಾ. ಅಶೋಕ ಬಾಬು, ಸಂಶೋಧನಾ ವಿದ್ಯಾರ್ಥಿ ಗೌತಮ್ ಕರಿಕಲ್, ರಾಹುಲ್ ಮೋಗಾ, ಡಾ. ವೈಜನಾಥ ದೊಡ್ಡಮನಿ, ಯಶವಂತ, ಲೋಕೇಶ, ಇತರರು ಇದ್ದರು.