- ಓರಿಯಂಟ್ ಸಿಮಂಟ್ ಕಂಪನಿಯವರು ಭೂಸ್ವಾಧೀನ ಕಾಯ್ದೆ ಉಲ್ಲಂಘನೆ ವಿರೋಧಿಸಿ.
- ರೈತರ ಪ್ರತಿ ಎಕರೆಗೆ ೬೦ ಲಕ್ಷ ರೂಪಾಯಿ ನೀಡುವಂತೆ ಒತ್ತಾಯ.
- ಇಟಗಾ-ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ರೈತರ ಪಾದಯಾತ್ರೆ ಆರಂಭ.
ಚಿತ್ತಾಪುರ: ಓರಿಯಂಟ ಸಿಮೆಂಟ ಕಂಪನಿಯವರು ಭೂಸ್ವಾಧೀನ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ರೈತರ ಪ್ರತಿ ಎಕರೆಗೆ ೬೦ ಲಕ್ಷ ರೂಪಾಯಿ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಸಾಯಬಣ್ಣ ಗುಡುಬಾ ಒತ್ತಾಯಿಸಿದ್ದಾರೆ.
ತಾಲೂಕಿನ ಇಟಗಾ ಗ್ರಾಮದ ಓರಿಯಂಟ್ ಸಿಮೆಂಟ್ ಕಂಪನಿಯವರು ಭೂಸ್ವಾಧೀನ ಕಾಯ್ದೆ ಉಲ್ಲಾಂಘನೆ ವಿರುದ್ದ ರೈತರು ಮಂಗಳವಾರ ಹಮ್ಮಿಕೊಂಡ ಇಟಗಾ ಗ್ರಾಮದಿಂದ ಕಲಬುರಗಿ ಜಿಲ್ಲಾಧಿಕಾರಿಗಳವರೆಗೆ ಪಾದಯಾತ್ರೆ ನೇತೃತ್ವವಹಸಿ ಮಾತನಾಡಿದ ಅವರು, ಭೂಸ್ವಾಧೀನ ಕಾಯ್ದೆಯಂತೆ ತಲಾ ಎಕರೆಗೆ ಸುಮಾರು ೬೦ ಲಕ್ಷ ರೂಪಾಯಿ ಮೌಲ್ಯವಿದ್ದರೂ, ಕೇವಲ ೮ ಲಕ್ಷಕ್ಕೂ ಕಡಿಮೆ ಬೆಲೆಯಲ್ಲಿ ಖರೀದಿಸಿ ರೈತರನ್ನು ವಂಚಿಸಲಾಗಿದೆ. ಇದರಿಂದಾಗಿ ತೊಂದರೆ ಅನುಭವಿಸಿದ್ದಾರೆ. ಭೂಸ್ವಾಧೀನ ಪ್ರಕಾರ ಜಮೀನು ಖರೀದಿ ಮಾಡಬೇಕು.
ಇಟಗಾ, ಮೊಗಲಾ, ಹುಡಾ, ದಿಗ್ಗಾಂವ ರೈತರು ಜಮೀನು ಕಳೆದುಕೊಂಡ ರೈತರ ಕುಟುಂಬಸ್ಥರಿಗೆ ಖಾಯಂ ಹುದ್ದೆ ನೀಡಬೇಕು. ಜಮೀನು ಕಳೆದೊಕೊಂಡ ರೈತರ ಮಕ್ಕಳಿಗೆ ಕೆಲಸದಿಂದ ತೆಗೆದು ಜನಕಾರ್ಮಿಕರಿಗೆ ಪುನಃ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಸೇರಿದಂತೆ ಅನೇಕ ರೈತರ ಸಮಸ್ಯೆಗಳು ಈಡೇರಿಸಬೇಕೆಂದು ಒತ್ತಾಯಿಸಿ ಎರಡು ದಿನದ ಪಾದಯಾತ್ರೆ ಕೈಗೊಂಡು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ರೈತ ಮುಖಂಡರಾದ ಶರಣಬಸಪ್ಪ ಮಮ್ಮಶೆಟ್ಟಿ, ನಾಗೇಂದ್ರಪ್ಪ ಡಿಗ್ಗಿ, ಮಹಾದೇವ ಡಿಗ್ಗಿ, ರಾಯಪ್ಪ ಶಹಾಬಾದ, ಮಲ್ಲಣ್ಣಗೌಡ, ಮಲ್ಲಿಕಾರ್ಜುನ ಸಜ್ಜನ್, ಅಯ್ಯಪ್ಪ, ಮಹಾದೇವ ಬೊಮ್ಮನಳ್ಳಿ, ತಿಪ್ಪಣ್ಣ ದಳಪತಿ, ಮರೆಣ್ಣ ಡಿಗ್ಗಿ, ಗೂಳಿನಾಥ ಡಿಗ್ಗಿ, ಗಂಗಾಧರ ಮಳಖೇಡ್,