ಬಾದ್ಯಾಪುರ ಗ್ರಾಮದ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ

0
27

ಸುರಪುರ: ತಾಲೂಕಿನ ಬಾದ್ಯಾಪುರ ಗ್ರಾಮದ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ತೊರೆದು ರಾಜಾ ವೆಂಕಟಪ್ಪ ನಾಯಕ ಮಾಜಿ ಶಾಸಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಆರ್.ವಿ.ನಾಯಕ ಮಾತನಾಡಿ, ಕೇಂದ್ರ ಸರ್ಕಾರವು ರೈತರ ಮತ್ತು ಸಾರ್ವಜನಿಕರ ಒತ್ತಡಕ್ಕೆ ಮಣಿದು ಜಾರಿಗೊಳಿಸಿದ್ದ ಮೂರು ಕೃಷಿ ಕಾನೂನುಗಳನ್ನು ಹಿಂಪೆಡೆದಿದ್ದಾರೆ ಆದರೆ ರಾಜ್ಯದಲ್ಲಿ ಇನ್ನು ಈ ಮೂರು ಕಾನೂನುಗಳು ಜಾರಿಯಲ್ಲಿವೆ ಇದು ರಾಜ್ಯಸರ್ಕಾರವು ರೈತರಿಗೆ ನೀಡಿದ ಕಾಣಿಕೆಯಾಗಿದೆ ಅಲ್ಲದೆ ಈಗಾಗಲೆ ಮೂಂಗಾರು ಮಳೆಯಾಘಿರುವುದರಿಂದ ರೈತ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದು ರೈತನಿಗೆ ಬೀಜ, ಗೊಬ್ಬರದ ದುಬಾರಿಯ ಬಿಸಿ ಮುಟ್ಟಿ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಇದ್ದು ಇದನ್ನು ಸರ್ಕಾರವು ಸಕಾಲದಲ್ಲಿ ರೈತರಿಗೆ ತಲುಪಿಸಲು ವಿಫಲವಾಗಿದೆ ಇವರ ದುರಾಡಲಿತ ಮತ್ತು ರೈತ ವಿರೋಧಿ ನೀತಿಗೆ ಬೇಸತ್ತು ರೈತರು ಮತ್ತು ಸಾರ್ವಜನಿಕರು ಕಾಂಗ್ರೆಸ ಪಕ್ಷದ ಕಡೆಮುಖಮಾಡಿದ್ದಾರೆ ಎಂದರು.

Contact Your\'s Advertisement; 9902492681

ನಮ್ಮ ಕಾರ್ಯಕರ್ತರು ಈ ಸರಕಾರಗಳ ನ್ಯೂನ್ಯತೆಗಳನ್ನು ಜನರಿಗೆ ಮನವರಿಕೆ ಮಾಡಿ ಬೂತಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕು ಹಾಗೂ ಮುಂಬರುವ ದಿನಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬ ಸಂಘದ ತಾಲೂಕು ಘಟಕದ ಖಜಾಂಚಿ ಕೃಷ್ಣಾ ಹಾವಿನ, ಬಸವರಾಜ ಬಸಣ್ಣರ್, ಭೀಮನಗೌಡ ಮಾಲಿಪಾಟೀಲ, ಸೋಮಲಿಂಗಪ್ಪ ಮಗ್ಗದ, ಶರಣಬಸವ ಹಾವಿನ, ಸಿದ್ದಪ್ಪ ಮಾ.ಪಾಟೀಲ, ಭೀಮಣ್ಣ ಬಸನ್ನರ್, ಮಾದೇಶ ಮಗ್ಗದ್, ದತ್ತು ಬಾಡದ್ ಸೇರಿದಂತೆ ಇನ್ನಿತರರು ಸೇರ್ಪಡೆಯಾದವರು,

ಮುಖಂಡರಾದ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಭೀಮರಾಯ ಮೂಲಿಮನಿ, ರವಿಚಂದ್ರ ಸಾಹುಕಾರ, ಬೀರಲಿಂಗ ಬಾದ್ಯಾಪುರ, ಚಂದ್ರಕಾಂತ ಹೆಬ್ಬಾಳ, ಮಾನಪ್ಪ ಕವಾಲ್ದಾರ್, ಭೀಮಣ್ಣ ಕೆಂಗುರಿ, ನಾಗಪ್ಪ ಕನ್ನಳ್ಳಿ, ಕಾಳಪ್ಪ ಕವಾತಿ, ಪರಮಣ್ಣ ಶಾಂತಪುರ, ಅಚ್ಚಪ್ಪ ನಿರಡಗಿ,ಶಿವರಾಯ ಕಾಡ್ಲೂರ, ದೇವಿಂದ್ರಪ್ಪ ಚಿಕನಳ್ಳಿ, ಮಲ್ಲಣ್ಣ ಐಕೂರು, ಜುಮ್ಮಣ್ಣ ಕೆಂಗುರಿ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here