ʻಸನ್ ಸ್ಟೋನ್ʼ ಅನುಕೂಲ, ಈಗ ಬೆಂಗಳೂರಿನ ನಾಲ್ಕು ವಿಶ್ವವಿದ್ಯಾಲಯಗಳಲ್ಲೂ ಲಭ್ಯ

0
9

ಬೆಂಗಳೂರು: ದೇಶಾದ್ಯಂತ 25 ನಗರಗಳ 30ಕ್ಕೂ ಸಂಸ್ಥೆಗಳಲ್ಲಿ ಅಸ್ತಿತ್ವ ಹೊಂದಿರುವ ಭಾರತದ ಪ್ರಮುಖ ಉನ್ನತ ಶಿಕ್ಷಣ ಸೇವಾ ಪೂರೈಕೆದಾರ ಸಂಸ್ಥೆಗಳಲ್ಲಿ ಒಂದಾದ ʻಸನ್ಸ್ಟೋನ್ʼ ಈಗ ಬೆಂಗಳೂರಿನ ನಾಲ್ಕು ಕಾಲೇಜುಗಳಿಗೆ ತನ್ನ ಪ್ರಯೋಜನಗಳನ್ನು ವಿಸ್ತರಿಸಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಅಥವಾ ʻಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿʼ(ಎಐಸಿಟಿಇ)ಯಿಂದ ಮಾನ್ಯತೆ ಪಡೆದ ಅಂತಹ ಕಾಲೇಜುಗಳೆಂದರೆ: ʻಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ʼ; ʻಕೋಶಿಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ʼ; ʻಪಟೇಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಮ್ಯಾನೇಜ್ಮೆಂಟ್ʼ; ಮತ್ತು ʻಇಂಪ್ಯಾಕ್ಟ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ʼ.

ಈ ಸೇರ್ಪಡೆಯೊಂದಿಗೆ, ʻಸನ್ಸ್ಟೋನ್ʼನ ಅನುಕೂಲವು ಈಗ ʻಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ʼ ನೀಡುವ ʻಎಂಬಿಎʼ ಕೋರ್ಸ್; ಕೋಶಿಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನೀಡುವ ʻಎಂಬಿಎʼ, ʻಬಿಬಿಎʼ, ʻಬಿಸಿಎʼ ಮತ್ತು ಬಿ.ಕಾಮ್ ಕೋರ್ಸ್ಗಳು; ಪಟೇಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಮ್ಯಾನೇಜ್ಮೆಂಟ್ ನೀಡುವ ʻಬಿಬಿಎʼ ಮತ್ತು ʻಎಂಬಿಎʼ ಕೋರ್ಸ್ಗಳು; ಹಾಗೂ ʻಇಂಪ್ಯಾಕ್ಟ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ʼ ನೀಡುವ ʻಎಂಬಿಎʼ ಕೋರ್ಸ್ಗಳಿಗೆ ಲಭ್ಯವಿರಲಿದೆ.

Contact Your\'s Advertisement; 9902492681

ʻಸನ್ಸ್ಟೋನ್ʼನ ಅನುಕೂಲಗಳು ಉದ್ಯಮ-ಆಧಾರಿತ ಶಿಕ್ಷಣ ಮತ್ತು ಕೌಶಲ್ಯ ಕೋರ್ಸ್ಗಳಿಗೆ ಪ್ರವೇಶವನ್ನು ಶಕ್ತಗೊಳಿಸುತ್ತವೆ. ಆ ಮೂಲಕ ವಿದ್ಯಾರ್ಥಿಗಳನ್ನು ಕಾಲೇಜು ಮಟ್ಟದಲ್ಲಿ ಉದ್ಯೋಗ-ಸಿದ್ಧರನ್ನಾಗಿ ಮಾಡುತ್ತವೆ. ಈ ಸೇರ್ಪಡೆಯು ʻಸನ್ಸ್ಟೋನ್ʼನ 1000ಕ್ಕೂ ಹೆಚ್ಚು ನೇಮಕಾತಿದಾರರು ಮತ್ತು 2000ಕ್ಕೂ ಅಧಿಕ ಉದ್ಯೋಗಾವಕಾಶಗಳ ಬಲವಾದ ಜಾಲದೊಂದಿಗೆ ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತದೆ. ಆ ಮೂಲಕ ಉನ್ನತ ಕಂಪನಿಗಳಲ್ಲಿ ಉದ್ಯೋಗಾವಕಾಶಗಳ ಸಮೃದ್ಧ ಅವಕಾಶಗಳಿಗೆ ಬಾಗಿಲು ತೆರೆಯುತ್ತದೆ.

ಬೆಂಗಳೂರು, ರಾಜ್ಯದ ಮೂಲೆ ಮೂಲೆಗಳಿಂದ ಉನ್ನತ-ಶಿಕ್ಷಣ ಆಕಾಂಕ್ಷಿಗಳನ್ನು ಸೆಳೆಯುತ್ತದೆ. ಸರ್ಕಾರದ ನಿರಂತರ ಗಮನ ಮತ್ತು ಪ್ರಯತ್ನಗಳ ಫಲವಾಗಿ, ಕರ್ನಾಟಕದ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸಲು ಹಾಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ತನ್ನನ್ನು ತಾನು ಸುಧಾರಿಸಿಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ, ಸರ್ಕಾರವು ತನ್ನ ಯುವ ಜನತೆಗೆ ಉನ್ನತ ಶಿಕ್ಷಣವನ್ನು ಸಕ್ರಿಯಗೊಳಿಸಲು ನವೀನ ಯೋಜನೆಗಳನ್ನು ಪ್ರಕಟಿಸಿದೆ.

ʻಸನ್ಸ್ಟೋನ್ʼನ ಸಹ-ಸಂಸ್ಥಾಪಕ ಮತ್ತು ಸಿಒಒ ಶ್ರೀ ಪಿಯೂಷ್ ನನ್ಗ್ರು ಅವರು ಈ ಪ್ರಕಟಣೆಯ ಬಗ್ಗೆ ಮಾತನಾಡುತ್ತಾ, “ಬೆಂಗಳೂರಿನ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ʻಸನ್ಸ್ಟೋನ್ʼನ ಅನುಕೂಲಗಳನ್ನು ನೀಡಲು ನಾವು ಸಂತಸಗೊಂಡಿದ್ದೇವೆ. ಭಾರತೀಯ ಪಟ್ಟಣಗಳು ಯುವ ಚೈತನ್ಯ ಮತ್ತು ಅಗಾಧ ಸಾಮರ್ಥ್ಯದೊಂದಿಗೆ ಪ್ರಕಾಶಿಸುತ್ತಿವೆ. ಉನ್ನತ ಶಿಕ್ಷಣವನ್ನು ಬಯಸುವ ವಿದ್ಯಾರ್ಥಿಗಳಲ್ಲಿ ಗುಣಮಟ್ಟ ಮತ್ತು ಅವಕಾಶಗಳ ಅಂತರವನ್ನು ಕಡಿಮೆ ಮಾಡುವುದು ಹಾಗೂ ಯುವಕರಿಗೆ ಅವರ ಸಂಪೂರ್ಣ ಸಾಮರ್ಥ್ಯವನ್ನು ಅನಾವರಣಗೊಳಿಸಲು ಅನುವು ಮಾಡಿಕೊಡುವುದು ʻಸನ್ಸ್ಟೋನ್ʼನಲ್ಲಿ ನಮ್ಮ ಗುರಿಯಾಗಿದೆ,ʼʼ ಎಂದು ಹೇಳಿದರು.

ʻಸನ್ಸ್ಟೋನ್ʼನ ಅನುಕೂಲವನ್ನು ಹೊಂದಿರುವ ಕ್ಯಾಂಪಸ್ಗಳಲ್ಲಿ ದಾಖಲಾದಾಗುವ ವಿದ್ಯಾರ್ಥಿಗಳು ಸುಧಾರಿತ ಪ್ರಮಾಣೀಕರಣಗಳನ್ನು ಪಡೆಯುವುದಲ್ಲದೆ, ಉದ್ಯಮ ಸಂಯೋಜಿತ ಇಂಟರ್ನ್ಶಿಪ್ಗಳು ಮತ್ತು ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಹೆಚ್ಚಿನ ಬೇಡಿಕೆಯ ತಂತ್ರಜ್ಞಾನ ಕೌಶಲ್ಯಗಳ ಕಲಿಕೆ ಮತ್ತು ತಮಗಾಗಿ ವೃತ್ತಿಪರ ಪೋರ್ಟ್ ಫೋಲಿಯೊವನ್ನು ನಿರ್ಮಿಸಿಕೊಳ್ಳುವ ಮೂಲಕ ಉದ್ಯಮ-ಆಧಾರಿತ ಪಠ್ಯಕ್ರಮದ ಲಾಭವನ್ನು ಪಡೆದುಕೊಳ್ಳುತ್ತಾರೆ.

ಹೆಚ್ಚು ವ್ಯಾಪಕ ಮತ್ತು ಸಮಗ್ರ ಶಿಕ್ಷಣಕ್ಕಾಗಿ, ಜೀವನ ಕೌಶಲ್ಯಗಳು ಮತ್ತು ʻಸಾಫ್ಟ್ ಸ್ಕಿಲ್ಸ್ʼತರಬೇತಿಯನ್ನು ʻಸನ್ಸ್ಟೋನ್ʼ ಒದಗಿಸುತ್ತದೆ. ಜೊತೆಗೆ, ಆಸಕ್ತಿ ಆಧಾರಿತ ಕ್ಲಬ್ಗಳು, ಕ್ರೀಡಾ ಕೂಟಗಳು, ಸಾಂಸ್ಕೃತಿಕ ಉತ್ಸವಗಳು, ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳಿಗೆ ಪ್ರವೇಶವನ್ನು ನೀಡುತ್ತದೆ. ಸನ್ಸ್ಟೋನ್ನ ವಿದ್ಯಾರ್ಥಿ ಜಾಲದ ಡಿಜಿಟಲ್ ಸಮುದಾಯಕ್ಕೆ ಪ್ರವೇಶ ಮುಂತಾದ ಅನುಕೂಲಗಳನ್ನೂ ವಿದ್ಯಾರ್ಥಿಗಳು ಪಡೆಯುತ್ತಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here