ಶರಣಬಸವ ವಿವಿಯಲ್ಲಿ ಎರಡನೇ ದಿನದ ರಾಷ್ಟ್ರೀಯ ಸಮ್ಮೇಳನ

0
39
  • ಜಾಗತಿಕ ಮಟ್ಟದಲ್ಲಿ ಕ್ಷೀಣಿಸುತ್ತಿರುವ ನೈಸರ್ಗಿಕ ಸಂಪನ್ಮೂಲ: ಉಮೇಶ ಹೊಸೂರು ಕಳವಳ

ಕಲಬುರಗಿ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ ಒಂದು ಕಡೆಯಾದರೆ, ನೈಸರ್ಗಿಕ ಸಂಪನ್ಮೂಲ ಕ್ಷೀಣಿಸುತ್ತಿರುವುದು ಮೊತ್ತೊಂದು ಕಡೆಯಾಗಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಮೂಲಭೂತ ಅಂಶಗಳಾದ ಆಕಾಶ, ಭೂಮಿ, ಗಾಳಿ, ನೀರಿನ ಗುಣಮಟ್ಟದ ಕೊರತೆ ಎದ್ದು ಕಾಣುತ್ತಿದೆ. ಇವುಗಳ ರಕ್ಷಣೆ ನಮ್ಮ ಮೊದಲ ಆದ್ಯತೆ ಆಗಬೇಕೆಂದು ಮುಂಬಯಿ ಎಸಿಸಿ ಲಿಮಿಟೆಡ್‌ನ ಉಪಾಧ್ಯಕ್ಷ ಉಮೇಶ ಹೊಸೂರು ಅವರು ಹೇಳಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಪೂಜ್ಯ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಆಯೋಜಿಸಿದ ಮೂರು ದಿನಗಳ “ಬಹುಶಿಸ್ತೀಯ ಸಂಶೋಧನೆಯಲ್ಲಿ ಇತ್ತೀಚಿನ ಆವಿ?ರಗಳು” ಸಮ್ಮೇಳನದ ಎರಡನೇ ದಿನವಾದ ಶನಿವಾರದಂದು ನಡೆದ ಜಾಗತಿಕ ಮಟ್ಟದಲ್ಲಿ ಕ್ಷೀಣಿಸುತ್ತಿರುವ ನೈಸರ್ಗಿಕ ಸಂಪನ್ಮೂಲಗಳು ಹಾಗೂ ಸವಾಲುಗಳು ಎಂಬ ವಿಷಯ ಕುರಿತು ಮಾತನಾಡಿದ ಅವರು, ಅಮೇರಿಕಾ, ಇಂಡೋನೇಷಿಯಾ ದೇಶಗಳಿಗೆ ಹೋಲಿಸಿದರೆ, ಭಾರತದ ಜನಸಾಂದ್ರತೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. ಪ್ರಸ್ತುತ ಭಾರತದ ಜನಸಂಖ್ಯೆ ೧೪೦ ಕೋಟಿ ಇದೆ. ಜನಸಂಖ್ಯೆ ಹೆಚ್ಚಾದಂತೆ ಬೇಡಿಕೆಯೂ ಹೆಚ್ಚಾಗುತ್ತಾ ಹೋಗಿ, ನೈಸರ್ಗಿಕ ಸಂಪನ್ಮೂಲ ಹಾಗೂ ಕೈಗಾರಿಕೆಗಳ ಉತ್ಪಾದನೆ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇದರಿಂದ ವಸ್ತುವಿನ ಗುಣಮಟ್ಟ ಕಡಿಮೆಯಾಗುತ್ತದೆ. ಪ್ರತಿಯೊಂದು ವಸ್ತುವಿನ ಗುಣಮಟ್ಟ ಕಾಪಾಡಲು ಜನಸಂಖ್ಯೆ ನಿಯಂತ್ರಣ ಅಗತ್ಯವಾಗಿದೆ. ಇದು ನಮ್ಮ-ನಿಮ್ಮೆಲ್ಲರ ಕೈಯಲ್ಲಿಯೇ ಇದೆ ಎಂದು ಹೇಳಿದರು.

Contact Your\'s Advertisement; 9902492681

ಜಾಗತಿಕವಾಗಿ ಅವಶ್ಯಕ ಮೂಲಭೂತ ಅಂಶಗಳಾಗಿರುವ ಆಕಾಶ, ಭೂಮಿ, ನೀರು, ಬೆಂಕಿ, ಗಾಳಿಯ ಸಂರಕ್ಷಣೆ ಇಂದು ಬಹುದೊಡ್ಡ ಸವಾಲಾಗಿದೆ. ಭೂಮಿಯ ರಕ್ಷಣೆಯಿಂದ ಗುಣಮಟ್ಟದ ಆಹಾರ, ನೈಸರ್ಗಿಕ ಸಂಪನ್ಮೂಲ, ಕಚ್ಚಾ ವಸ್ತುಗಳು, ಅನಿಲ, ಲೋಹಗಳು, ಪರಿಸರ ಕಾಪಾಡಬೇಕಾಗಿದೆ ಎಂದರು.

ಭೂಮಿಯ ಮೂರನೇ ಎರಡರಷ್ಟು ಭಾಗ ನೀರು ಆವರಿಸಿಕೊಂಡಿದೆ. ಇಷ್ಟು ಪ್ರಮಾಣದಲ್ಲಿ ನೀರಿದ್ದರೂ ಸ್ವಚ್ಛವಾದ ನೀರಿನ ಕೊರತೆ ಎದುರಿಸುವಂತಾಗಿದೆ. ಭೂಮಿಯ ಮೇಲಿನ ಕಚ್ಚಾ ವಸ್ತುಗಳು, ಕಾರ್ಖಾನೆಗಳ ತ್ಯಾಜ್ಯವೂ ನದಿ ಹಾಗೂ ಸಮುದ್ರದಲ್ಲಿ ಹರಿಬಿಡುತ್ತಿದ್ದು, ಪರಿಸರ ಮಾಲಿನ್ಯವಾಗುತ್ತಿದೆ. ಜನರ, ಭೂಮಿಯ, ಪ್ರಾಣಿ-ಪಕ್ಷಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವಂತಾಗಿದೆ. ನೀರಿಲ್ಲದೆ ಏನೂ ಮಾಡುವಂತಿಲ್ಲ. ಪ್ರತಿಯೊಂದಕ್ಕೂ ನೀರು ಅವಶ್ಯಕ. ಇದರಿಂದ ನೀರಿನ ಸ್ವಚ್ಛತೆ ಕಾಪಾಡುವುದು ಅಗತ್ಯವಾಗಿದೆ ಎಂದರು.

ಪರಿಸರ ಮಾಲಿನ್ಯದಿಂದಾಗಿ ನಾವು ಉಸಿರಾಡುವೂ ಗಾಳಿಯೂ ಕಲುಷಿತಗೊಂಡಿದೆ. ಮರ-ಗಿಡಗಳ ಕಡಿತದಿಂದ, ಅರಣ್ಯ ನಾಶದಿಂದಾಗಿ ಪರಿಶುದ್ಧವಾದ ಗಾಳಿ ಸಿಗದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಪರಿಸರದ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಮುಂದಿನ ಪೀಳಿಗೆ ಉಸಿರಾಡಲೂ ಕಷ್ಟಕರವಾಗುತ್ತದೆ. ಇದರಿಂದ ಪ್ರಸ್ತುತ ದಿನಗಳಲ್ಲಿ ಭೂಮಿ, ಆಕಾಶ, ನೀರು, ಗಾಳಿಯ ಅವಸಾನ ತಪ್ಪಿಸಲು, ಸರಕಾರ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳಾದ ಸೋಲಾರ ಎನರ್ಜಿ, ವಿಂಡ್ ಎನರ್ಜಿ, ಜಿಯೋ ಥರ್ಮಲ್ ಎನರ್ಜಿ, ವಾಟರ್ ಎನರ್ಜಿ, ಬಯೋ ಎನರ್ಜಿಯಂತಹ ಯೋಜನೆಗಳಿಗೆ ಆಧ್ಯತೆ ನೀಡುತ್ತಿದೆ ಎಂದರು.

ಪ್ರಸ್ತುತ ದಿನಗಳಲ್ಲಿ ಭೂಮಿಯ ಮಣ್ಣಿನ ಫಲವತ್ತತೆ ಕಾಪಾಡಲು ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸದೆ ಸಾವಯವ ಕೃಷಿಯತ್ತ ಒಲವು ತೋರಬೇಕು. ಇದರಿಂದ ಗುಣಮಟ್ಟದ ಆಹಾರವೂ ನಮಗೆ ದೊರೆತಂತಾಗಿ, ಆರೋಗ್ಯಕರ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದರು.

ಗೋಷ್ಠಿಯಲ್ಲಿ ಶ್ರೀ ಶರಣಬಸವ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ.ವಿ.ಡಿ.ಮೈತ್ರಿ, ಕುಲಸಚಿವ ಡಾ.ಅನಿಲ್ ಕುಮಾರ ಬಿಡವೆ ಸೇರಿದಂತೆ ಹಲವು ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here