ಕ್ರಿಯಾಶೀಲ ಲೇಖಕನಿಗೆ ಅವಕಾಶ ಅಪರಿಮಿತ: ಶೂದ್ರ ಶ್ರೀನಿವಾಸ್

0
29

ಬೆಂಗಳೂರು: ಯಾವುದೇ ಕಾಲದಲ್ಲೂ ಕ್ರಿಯಾಶೀಲ ಲೇಖಕನಿಗೆ ಬರವಣಿಗೆಗೆ ಅಪರಿಮಿತ ಅವಕಾಶವಿರುತ್ತದೆ ಎಂದು ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್ ಅಭಿಪ್ರಾಯಿಸಿದ್ದಾರೆ.

ಪರಸ್ಪರ ಪ್ರಕಾಶನ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಜಲಮಂಡಳಿ ರಾಮಚಂದ್ರ ಅವರ ಕುಳವನ ಪಡಿಪಾಟಲು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಭುತ್ವವು ಸರ್ವಾಧಿಕಾರಿ ಧೋರಣೆ ತಾಳಿದಷ್ಟೂ ಬರಹಗಾರರ ಅಭಿವ್ಯಕ್ತಿಯೂ ಅಷ್ಟೇ ತೀಕ್ಷ್ಣವಾಗಿರುತ್ತದೆಯೆಂದು ಎಚ್ಚರಿಸಿದರು.

Contact Your\'s Advertisement; 9902492681

ಜಲಮಂಡಳಿ ರಾಮಚಂದ್ರ ಅವರ ಕುಳವಳ ಪಡಿಪಾಟಲು ಆತ್ಮಕತನವು ಅಲೆಮಾರಿ ಸಮುದಾಯದ ಬದುಕಿನ ಕತನವಾಗಿದೆ. ಹಲವು ವೈಶಿಷ್ಟ್ಯತೆಗಳಿಂದ ಕೂಡಿದ ಈ ಆತ್ಮಕತೆಯನ್ನು ರಾಜ್ಯದ ಎಲ್ಲ ಸಮುದಾಯದವರು ಓದಲೇಬೇಕಾದ ಕೃತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಮಾತನಾಡಿ, ಕೊರಮ-ಕೊರಚ ಸಮುದಾಯವು ಎಲ್ಲ ರೀತಿಯ ಅವಕಾಶಗಳಿಂದ ವಂಚಿತವಾಗಿದ್ದು, ಮುಂದಿನ ದಿನಗಳಲ್ಲಿ ಸರಕಾರ ವತಿಯಿಂದ ಆ ಸಮುದಾಯಕ್ಕೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲು ಶ್ರಮಿಸಲಾಗುವುದೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ರಾಂತ‌ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ, ನಾಟಕ‌ ಅಕಾಡೆಮಿ ಅಧ್ತಕ್ಷ ಬೀಮ ಸೇನ್, ನಿವೃತ್ತ ಪ್ರಧಾನ ಅಭಿಯಂತರ ಕೆಂಪರಾಮಯ್ಯ, ಜಲಮಂಡಳಿ ನಿವೃತ್ತ ಸಂಘದ ಅಧ್ಯಕ್ಷ ರುದ್ರೇಗೌಡ, ನಾಟಕಕಾರ ಅಶ್ವತ್ಥ, ಲೇಖಕ ಮಂಜುನಾಥ ದಾಸನಪುರ, ಜಲಮಂಡಳಿ ರಾಮಚಂದ್ರ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here