ದೆಹಲಿ-ಪಂಜಾಬದಂತೆ ರಾಜ್ಯದಲ್ಲಿ ಮಹಿಳೆಯರಿಗೆ ಸವಲತ್ತುಗಳು ಒದಗಿಸಲು ಬದ್ಧ: ಸಿದ್ದು ಪಾಟೀಲ

0
13
  • ಆಮ್ ಆದ್ಮಿ ಪಕ್ಷದತ್ತ ಯುವಕರ ಲಗ್ಗೆ

ಕಲಬುರಗಿ, ಜು. ೦೪- ದೆಹಲಿ ರಾಜ್ಯದಲ್ಲಿ ೧೮ ವರ್ಷಗಳು ಮೇಲ್ಪಟ್ಟ ಯುವತಿಯರಿಗೆ ಹಾಗೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ಪ್ರತಿ ತಿಂಗಳು ಸಾವಿರ ರೂಪಾಯಿ ಭತ್ಯೆ ನೀಡಲಾಗುತ್ತಿದೆ. ದೆಹಲಿ ಹಾಗೂ ಪಂಜಾಬ ರಾಜ್ಯದ ಮಾಡೆಲ್‌ನಂತೆ ರಾಜ್ಯದಲ್ಲಿ ನಾವು ಕೆಲಸ ಮಾಡಲು ಬದ್ಧರಾಗಿದ್ದಿವೆ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಮುಖಂಡ ಸಿದ್ದು ಪಾಟೀಲ ತೆಗನೂರ ಅವರು ಅಭಿಪ್ರಾಯ ಪಟ್ಟರು.

ನಗರದ ರೈಲು ನಿಲ್ದಾಣದ ಹತ್ತಿರದ ಅಂಬಿಕಾ ನಗರದ ಸಭಾಂಗಣದಲ್ಲಿ ನಡೆದ ಆಮ್ ಆದ್ಮಿ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ರಾಜ್ಯದಲ್ಲಿ ಎಲ್ಲಾ ಪಕ್ಷದ ಆಡಳಿತವನ್ನು ನಾವು ಕಂಡಿದ್ದೇವೆ. ಭ್ರಷ್ಟರಿಂದ ಕೂಡಿದ ಪಕ್ಷಗಳಿಗೆ ನೀವು ಮತಹಾಕಿ ರಾಜ್ಯದ ಜನತೆ ಪಶ್ಚಾತಾಪ ಪಡುವಂತಾಗಿದೆ. ಮುಂದಿನ ದಿನಗಳ ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿಯೊಂದು ಮನೆಗೆ ೩೦೦ ವ್ಯಾಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ಪ್ರತಿ ತಿಂಗಳು ಅವರ ಖಾತೆಗೆ ನೇರವಾಗಿ ಸಾವಿರ ರೂಪಾಯಿ ಭತ್ಯೆ ನೀಡಲು ಬದ್ಧವಾಗಿದೆ ಎಂದು ಸಿದ್ದು ಪಾಟೀಲ ತೇಗನೂರ ಅವರು ಹೇಳಿದರು.

Contact Your\'s Advertisement; 9902492681

ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಅಲೆ ಎದ್ದಿದೆ. ಜಿಲ್ಲೆಯಲ್ಲಿ ಪಕ್ಷಕ್ಕೆ ಸಾವಿರಾರು ಯುವಕ- ಯುವತಿಯರು ಸೇರ್ಪಡೆಗೊಳ್ಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಪಕ್ಷದಿಂದ ಪ್ರತಿ ವಾರ್ಡ್ ಮತ್ತು ವಿಧಾನ ಸಭಾ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಹಾಗೂ ನೀಡಲು ನಾವು ದುಡಿಯುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ನಗರಾಧ್ಯಕ್ಷ ಸಜ್ಜಾದ ಅಲಿ ಇನಾಮದಾರ ಅವರು ಹೇಳಿದರು.

ಮುಖಂಡರಾದ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸುಲೇಮಾನ್ ಅಲಿ. ಸಿದ್ದು ಪಾಟೀಲ ತೇಗನೂರ, ಸಜ್ಜಾದ ಅಲಿ ಇನಾಮ್ದಾರ ಅವರಿಂದ ಆಮ್ ಆದ್ಮಿ ಪಕ್ಷಕ್ಕೆ ಸಾವಿರಾರು ಯುವಕ-ಯುವತಿಯರು ಹಾಗೂ ಹಿರಿಯರು ಮಹಿಳೆಯರನ್ನು ಬರಮಾಡಿಕೊಳ್ಳಲಾಯಿತು. ಮೌಸಿನ್,ಅಫ್ರೋಜ್,ಸಚಿನ್ ಕೋಗನೂರ, ಕಿರಣ, ಮಹೆಬೂಬ ಅಲಿ, ಸಂಧ್ಯಾರಾಜ್, ಇಮ್ರಾನ್ ವೇದಮೊಹನ, ಪ್ರದೀಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here