ಒಳ್ಳೆಯ ಓದುಗಾರ ಒಳ್ಳೆಯ ಬರಹಗಾರನಾಗಬಲ್ಲ: ಡಾ. ಸಾದೀಕಾ ನವಾಬ

0
22

ಕಲಬುರಗಿ: ಸಾಹಿತ್ಯಕ್ಕೆ ಓದು ಮತ್ತು ವಿಭಿನ್ನ ವಿಚಾರಧಾರೆ ಅವಶ್ಯಕ. ಒಬ್ಬ ಒಳ್ಳೆಯ ಓದುಗಾರನೇ ಒಳ್ಳೆಯ ಬರಹಗಾರನಾಗಬಲ್ಲ. ಯಾವುದೇ ಭಾಷೆಯ ಬರವಣಿಗೆಯಾದರೂ ಅಷ್ಟೆ. ಓದುವುದರ ಜೊತೆಜೊತೆಗೆ ಆಲಿಸುವುದೂ ಕೂಡ ಅನಿವಾರ್ಯವಾಗಿದೆ. ಉರ್ದು ಭಾಷೆಯ ಸಾಹಿತ್ಯ ಅತಿ ಶ್ರೀಮಂತವಾಗಿದೆ. ಜಗತ್ತಿನ ಪುರಾತನ ಭಾಷೆಗಳಲ್ಲೊಂದಾದ ಉರ್ದು ಅನೇಕ ಸಾಹಿತಿಗಳನ್ನು ಜಗತ್ತಿಗೆ ನೀಡಿದೆ ಎಂದು ಮುಂಬಯಿಯ ಬುರ‍್ಹಾನಿ ಮಹಾವಿದ್ಯಾಲಯದ ಸಹ ಪ್ರಾದ್ಯಾಪಕರಾದ ಡಾ ಸಾದಿಕಾ ನವಾಬ ಇವರು ನುಡಿದರು.

ಇವರು ಸೋಮವಾರ (೪/೭/೨೦೨೨) ರಂದು ಸ್ಥಳೀಯ ಖಾಜಾ ಬಂದೇನವಾಜ ವಿಶ್ವವಿದ್ಯಾಲಯದ ಉರ್ದು ವಿಭಾಗದ ವತಿಯಿಂದ ಏರ್ಪಡಿಸಿದ “ಸಾಹಿತ್ಯ ಸಭೆ”ಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಅವರು ವಿದ್ಯಾರ್ಥಿಗಳಿಗೆ ಕಾದಂಬರಿ ಹಾಗೂ ಸಣ್ಣ ಕತೆಗಳನ್ನು ಹೇಗೆ ಬರೆಯಬೇಕು ಎಂದು ವಿವರಿಸುತ್ತಿದ್ದರು.

Contact Your\'s Advertisement; 9902492681

ಅವರು ಪ್ರೇಮಚಂದರ ಬರವಣಿಗೆಯ ತುಣುಕುಗಳನ್ನು ಉದಾಹರಣೆಯ ಸಹಿತ ವಿವರಿಸಿದರು. ಲೇಖಕನು ರಚನಾತ್ಮಕವಾಗಿ ಬರೆಯವಾಗ ಪ್ರಾಮಾಣಿಕವಾಗಿದ್ದರೆ ಮಾತ್ರ ಬರವಣಿಗೆ ಲವಲವಿಕೆಯಿಂದ ಕೂಡಿರುತ್ತದೆ ಎಂದರು. ಒಳ್ಳೆಯ ಲೇಖಕನಾಗಲು ಆಲಿಸಿವಿದು ಅವಶ್ಯಕ, ವಿಷಯ ವಿಮರ್ಶೆ ಸಾಹಿತಿಯ ಜೀವಾಳ ಎಂದು ಅಭಿಪ್ರಾಯಟ್ಟರು. ಒಂದೇ ವಿಷಯದ ಕುರಿತು ವಿಭಿನ್ನ ದೃಷ್ಟಿಕೋನ ದ ಬಗ್ಗೆ ಸರೋಜಿನಿ ನಾಯ್ಡು ಹಾಗೂ ರಬೀಂದ್ರನಾಥ ಟಾಗೋರರ ಬರವಣಿಗೆಯ ಉದಾಹರಣೆಯನ್ನು ನೀಡಿದರು.

ಉರ್ದು ವಿಭಾಗದ ಮುಖ್ಯಸ್ಥ, ಡಾ ಹಮೀದ ಅಕ್ಬರ್ ಇವರು ಸಭೆಯ ಅಧ್ಯಕ್ಷತೆಯ ಸ್ಥಾನವಹಿಸಿ ಮಾತನಾಡುತ್ತ, ಅವರು ಡಾ ಸಾದೀಕಾ ನವಾಬರ ಸಾಧನಗಳ ಬಗ್ಗೆ ಹರ್ಷವ್ಯಕ್ತ ಪಡಿಸಿದರು. ಅವರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟ್ ಅಂಶಗಳು ಉತ್ತಮ ಬರವಣಿಗೆಗೆ ಬಹಳ ಸಹಾಯಕಾರಿಯಾಗಿವೆ ಎಂದು ನುಡಿದರು.

ಪ್ರಾರಂಭದಲ್ಲಿ ಇಂಗ್ಲೀಷ ವಿಭಾಗದ ವಿದ್ಯಾರ್ಥಿನಿ ಜುಬಿಯಾ ನಾತ ಪ್ರಸ್ತುತಪಡಿಸಿದರೆ, ಉರ್ದು ವಿಭಾಗದ ಸಂಶೊಧನಾ ವಿದ್ಯಾರ್ಥಿನಿ ಅತಿಥಿಯರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸನಾ ಹಾಗೂ ಸಂಗಡಿಗರು ಇಕ್ಬಾಲರ ಕವಿತೆಗಳನ್ನು ಹೇಳಿದರು. ಉರ್ದು ವಿಭಾಗದ ವಿದ್ಯಾರ್ಥಿನಿ ನಾಜಿಯಾ ಬೇಗಮ್ ಅತಿಥಿಯರನ್ನು ಪರಿಚಯಿಸಿದರೆ, ವಿದ್ಯಾರ್ಥಿನಿ ಹುಮೆರಾ ಬೇಗಮ ವಂದಿಸಿದರು. Pವಿದ್ಯಾರ್ಥಿನಿ ತೆಹಸೀನ ಬೇಗಮ ಕಾರ್ಯಕ್ರಮನ್ನು ನಿರೂಪಿಸಿದರು.ವಿದ್ಯಾರ್ಥಿನಿ ವಿಶ್ವವಿದ್ಯಾಲದ ಆವರಣದಲ್ಲಿ ನಡೆದ ಈ ಕಾರ್ಯಕರಮದಲ್ಲಿ ವಿವಿಯ ಸಮೂಹ ಸಂವಹನ ಮತ್ತು ಮಾಧ್ಯಮ, ಇಂಗ್ಲೀಷ, ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ, ವಿಭಾಗದ ಶೈಕ್ಷಣಿಕ ಸಿಬ್ಬಂದಿಯರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here