ಕಾಲಮಿತಿಯಲ್ಲಿ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ನಡೆಸಲು ನಿರ್ಧಾರ

0
20

ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶದ ೭೫ನೇ ವರ್ಷದ ವಜ್ರಮಹೋತ್ಸವ ಅಂಗವಾಗಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಇತಿಹಾಸ ರಚನಾ ಸಮಿತಿ ಒಂದು ವರ್ಷದ ಕಾಲಮಿತಿಯ ಅವಧಿಯೊಳಗೆ ಬಿಟ್ಟುಹೋದ ಇತಿಹಾಸಕ್ಕೆ ಸಂಬಂಧಿಸಿ ಮತ್ತು ಅಖಂಡ ಕರ್ನಾಟಕ ನಂತರದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಮುಖ ಘಟನಾವಳಿಗಳ ವಿಷಯಗಳನ್ನೊಳಗೊಂಡು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳನ್ನು ನಡೆಸಿ ಆಯಾ ಕಾರ್ಯಾಗಾರಗಳಲ್ಲಿ ಮತ್ತು ವಿಚಾರ ಸಂಕಿರಣಗಳಲ್ಲಿ ಮಂಡಣೆಯಾದ ಲೇಖನಗಳನ್ನು ಪರಿಶೀಲಿಸಿ ಇತಿಹಸ ಸಮಿತಿ ವತಿಯಿಂದ ವಿಸ್ತೃತ ವಿಷಯಗಳ ಕೃತಿಗಳನ್ನು ರಚಿಸಿ ಸರಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ.

ಸಮಿತಿ ಈಗಾಗಲೇ ಮಾನ್ಯ ಪ್ರಾದೇಶಿಕ ಆಯುಕ್ತರು ಮತ್ತು ಇತಿಹಾಸ ರಚನಾ ಸಮಿತಿಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕೈಗೊಂಡ ನಿರ್ಣಯದಂತೆ ಕಾಲಮಿತಿಯಲ್ಲಿ ಕಲ್ಯಾಣ ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ, ಪ್ರಮುಖ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಏಳು ಜಿಲ್ಲೆಗಳ ತಾಲ್ಲೂಕಾ ಕೇಂದ್ರಗಳ ಪದವಿ ಇಲ್ಲವೆ ಪದವಿ ಪೂರ್ವ ಕಾಲೇಜುಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂಬಂಧಪಟ್ಟ ಇತಿಹಾಸ, ಸಂಸ್ಕೃತಿ ಮತ್ತು ಅಭಿವೃದ್ಧಿ ವಿಷಯಗಳ ಕುರಿತು ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗುವುದು.

Contact Your\'s Advertisement; 9902492681

ಬೀದರ ಜಿಲ್ಲೆಯ ಪಶು ವೈದ್ಯಕಿಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ವಿಭಾಗಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲು ಈಗಾಗಲೇ ಬೀದರ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಂಡಂತೆ ಜುಲೈ ಕೊನೆಯವಾರ ಇಲ್ಲವೇ ಆಗಸ್ಟ ಮೊದಲನೇ ವಾರದಲ್ಲಿ ಎರಡು ದಿವಸಗಳ ವಿಭಾಗಮಟ್ಟದ ವಿನೂತನ ಮಾದರಿಯ ಕಾರ್ಯಾಗಾರವನ್ನು ನಡೆಸಲಾಗುವುದು.

ಕಾರ್ಯಾಗಾರಕ್ಕೆ ಸಂಬಂಧಿಸಿದಂತೆ ೧೭೨೪ ರಿಂದ ೧೯೪೮ರ ವರೆಗಿನ ಆಡಳಿತ ವ್ಯವಸ್ಥೆ, ಈ ಅವಧಿಯ ಸಾಮಾಜಿಕ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ, ಶೈಕ್ಷಣಿಕ ವ್ಯವಸ್ಥೆ, ಕೃಷಿ ವ್ಯವಸ್ಥೆ, ಮುಲ್ಕಿ ರೂಲ್ ಅನುಷ್ಠಾನ, ಸಾಮಜಿಕ ಚಳುವಳಿಗಳು, ಸ್ಥಳಿಯ ಆಡಳಿತ ವ್ಯವಸ್ಥೆ, ಕೈಗಾರಿಕೆ, ಉದ್ಯೋಗ, ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ, ಸಾಮಾಜಿಕ ನ್ಯಾಯದ ವ್ಯವಸ್ಥೆ, ಕನ್ನಡ ಭಾಷೆಯ ಸ್ಥಿತಿಗತಿ ಮತ್ತು ಕನ್ನಡ ಭಾಷೆಯ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳ ಮತ್ತು ಮಠಗಳ ಪಾತ್ರ, ಕಲ್ಯಾಣ ಕರ್ನಾಟಕದಲ್ಲಿ ಸ್ವತಂತ್ರ ಚಳುವಳಿ, ವಿಮೋಚನಾ ಚಳುವಳಿ, ಬ್ರಿಟೀಷರು ಸ್ವತಂತ್ರ ನೀಡುವಾಗ ಹಾಕಿರುವ ಮೂರು ಅವಾಸ್ತವಿಕ ಷರತ್ತುಗಳ ಪರಿಣಾಮಗಳು, ಪೋಲಿಸ್ ಕಾರ್ಯಾಚರಣೆ, ೧೯೪೮ ರಿಂದ ೧೯೫೬ರ ವರೆಗಿನ ಸ್ವತಂತ್ರ ಭಾರತದಲ್ಲಿನ ಹೈದ್ರಾಬಾದ ರಾಜ್ಯದ ಆಡಳಿತ ಕಲ್ಯಾಣ ಕರ್ನಾಟಕದಲ್ಲಿ ಏಕೀಕರಣ ಚಳುವಳಿ, ಫಜಲ್ ಅಲಿ ವರದಿಯಂತೆ ಭಾಷಾವಾರು ಪ್ರಾಂತ ರಚನೆ ಮತ್ತು ಅಖಂಡ ಕರ್ನಾಟಕ ನಿರ್ಮಾಣ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಫಜಲ ಅಲಿ ವರದಿಯ ಶಿಫಾರಸ್ಸುಗಳು, ಕಲ್ಯಾಣ ಕರ್ನಾಟಕದ ವಿಶೇಷ ಅಭಿವೃದ್ಧಿಗೆ ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ, ಕೃಷ್ಣಾ ಮತ್ತು ಗೋದಾವರಿ ಜಲಾನಯನ ಪ್ರದೇಶದ ನೀರು ಮತ್ತು ಬಚಾವತ್ ಆಯೋಗದ ವರದಿಯ ನಿರ್ದೇಶನಗಳು, ಕಲ್ಯಾಣ ಕರ್ನಾಟಕ ಅಬಿವೃದ್ಧಿಗೆ ನಂಜುಂಡಪ್ಪ ವರದಿಯ ಶಿಫಾರಸ್ಸುಗಳು, ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ವಿಶೇಷ ಸ್ಥಾನಮಾನಕ್ಕೆ ಹಕ್ಕೊತ್ತಾಯಗಳು ಮತ್ತು ೩೭೧ನೆ(ಜೆ) ಕಲಂ ಅನುಷ್ಠಾನ. ಪ್ರಸ್ತುತ ಕಲ್ಯಾಣ ಕರ್ನಟಕದ ಸ್ಥಿತಿಗತಿ ಮತ್ತು ಭವಿಷಯದಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಹಮ್ಮಿಕೊಳ್ಳಬೇಕಾದ ಯೋಜನೆಗಳು.

ಈ ಮಹತ್ವದ ವಿಷಯಗಳ ಬಗ್ಗೆ ಕಲ್ಯಾಣ ಕರ್ನಾಟಕದ ಆಯಾ ಕ್ಷೇತ್ರದ ಪರಿಣಿತರಿಂದ ತಜ್ಞರಿಂದ, ಚಿಂತಕರಿಂದ, ಲೇಖನಗಳನ್ನು ಆಹ್ವಾನಿಸಲಾಗಿದೆ. ಆಯಾ ವಿಷಯಕ್ಕೆ ಸಂಬಂಧಿಸಿದ ಲೇಖನಗಳು ೧೦ ಪುಟಕ್ಕೆ ಮೀರದಂತೆ ಇರಬೇಕು, ಈಗಾಗಲೇ ಜೂನ ೨೫ ಕೊನೆಯ ದಿನಾಂಕ ನಿಗದಿಪಡಿಸಿರುವುದನ್ನು ಮುಂದುವರೆಸಿ ೨೫ನೇ ಜುಲೈ ೨೦೨೨ ಕ್ಕೆ ಕೊನೆಯ ದಿನಾಂಕವಾಗಿ ನಿಗದಿಪಡಿಸ ಲಾಗಿದೆ.

ಸದರಿ ಲೇಖನಗಳನ್ನು ಇ-ಮೇಲ್ ಸಂಖ್ಯೆ laxmandasti371j@gmail.com/ dmajiddaghi@gmail.com ಇಲ್ಲವೇ ವಾಟ್ಸ್ ಅಪ್ ಸಂಖ್ಯೆ +೯೧-೯೩೪೨೬೫೯೭೬೬ಗೆ ಕಳುಹಿಸಲು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯ ಆಸಕ್ತರಿಗೆ ಮುಕ್ತವಾಗಿ ಮತ್ತೊಮ್ಮೆ ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here