ಶಹಾಬಾದ: ಮಹಿಳಾ ಸಬಲೀಕರಣದಲ್ಲಿ ಸಂಪನ್ಮೂಲ ಸಂಸ್ಥೆಯ ಪಾತ್ರ ದೊಡ್ಡದು: ಸಂಗಮ್ಮ ಪಾಟೀಲ್

0
91

ಶಹಾಬಾದ: ಮಹಿಳಾ ಸಬಲೀಕರಣ ಮತ್ತು ಸಮುದಾಯದ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಮುದಾಯಸಂಪನ್ಮೂಲ ಸಂಸ್ಥೆಯ ಪಾತ್ರ ತುಂಬಾ ಮಹತ್ವದ್ದು ಎಂದು ಭಂಕೂರ ಅಂಗನವಾಡಿ ಮೇಲ್ವಿಚಾರಕಿ ಸಂಗಮ್ಮ ಪಾಟೀಲ್ ಹೇಳಿದರು.

ಅವರು ತಾಲೂಕಿನ ಭಂಕೂರ ಗ್ರಾಮದ ಸ್ತ್ರೀಶಕ್ತಿ ಭವನದಲ್ಲಿ ಮೈರಾಡ ಸಿಡಾರ ಗುಲಬರ್ಗಾ, ಕಮಲಾಪುರ, ಇಂದ ಸ್ಥಾಪಿಸಲ್ಪಟ್ಟ ಜೇನುಗೂಡು ಸಮುದಾಯ ನಿರ್ವಹಿತ ಸಂಪನ್ಮೂಲ ಸಂಸ್ಥೆಯ ೩ ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Contact Your\'s Advertisement; 9902492681

ಸಮುದಾಯ ಅಭಿವೃದ್ಧಿಗಾಗಿ ಅದರಲ್ಲೂ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಮೈರಾಡ ಸಂಸ್ಥೆ ಅಡಿಯಲ್ಲಿ ರಚಿಸಲ್ಪಟ್ಟ ಜೇನುಗೂಡು ಸಮುದಾಯ ನಿರ್ವಹಿತ ಸಂಪನ್ಮೂಲ ಸಂಸ್ಥೆ, ಭಂಕೂರ ಅವಿರತವಾಗಿ ಶ್ರಮಿಸುತ್ತಿದೆ. ಮಹಿಳಾ ಸಂಘಗಳಿಗೆ ಕಿರುಸಾಲ ಕೊಡಿಸಿ ಆ ಮೂಲಕ ಆ ಸಂಘಗಳಿಗೆ ಆದಾಯ ಉತ್ಪನ್ನ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿ ಹತ್ತು ಹಲವು ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಈ ಸಂಸ್ಥೆ ಗಟ್ಟಿ ಶಕ್ತಿಯಾಗಿ ನಿಂತಿದೆ. ಅಲ್ಲದೆ ಹಳ್ಳಿ ಬಾಗಗಳಲ್ಲಿ ಮಹಿಳಾ ಸಂಘಗಳ ಸದಸ್ಯರಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಮತ್ತವರ ಕುಟುಂಬ ಸದಸ್ಯರಿಗೆ ಕಾರ್ಪೇಂಟರಿ, ಗೌಂಡಿ,ಡ್ರೈವಿಂಗ್ ತರಬೇತಿಗಳನ್ನು ಕೊಡಿಸುವ ಮೂಲಕ ಕೌಶಲ್ಯಗಳನ್ನು ಹೆಚ್ಚಿಸುವದು ಮತ್ತು ಗ್ರಾಮಗಳಲ್ಲಿ ಆರೋಗ್ಯ ನೈರ್ಮಲ್ಯದಂತಹ ಶಿಭಿರಗಳನ್ನು ಆಯೋಜಿಸಿ ಆರೋಗ್ಯದ ಬಗ್ಗೆ ಕಾಳಜಿಯ ಕೆಲಸವೂ ಮಾಡುತ್ತಿರುವದು ಶ್ಲಾಘನೀಯ ಎಂದು ತಿಳಿಸಿದರು.

ಮಹಿಳಾ ವಕೀಲರಾದ ಭಾರತಿ.ಎಂ. ಪಾಟೀ ಮಾತನಾಡಿ, ಮಹಿಳೆ ಅಬಲೆ ಅಲ್ಲ ಅವಳು ಸಬಲೆ, ಸರ್ವಶಕ್ತಳಾದ ಹೆಣ್ಣು ಇಂದು ಸಮಾಜದ ಎಲ್ಲಾ ರಂಗಗಳಲ್ಲಿ ಆಕೆ ತನ್ನ ಛಾಪನ್ನು ಮೂಡಿಸಿದ್ದಾಳೆ, ಆದರೂ ಆಕೆಗೆ ಸಮಾಜದಲ್ಲಿ ಸಮಾನತೆಯ ಕೊರತೆ ಇದೆ, ಗಂಡ ಬಿಟ್ಟಿರುವ ಎಷ್ಟೋ ಹೆಣ್ನು ಮಕ್ಕಳು ಸಮಾಜದ ದೃಷ್ಟಿಯಲ್ಲಿ ಕೀಳಾಗಿ ಕಾಣಲಾಗುತ್ತಿದೆ, ಆದ್ದರಿಂದ ಅಂತಹ ನೊಂದ ಮಹಿಳೆಯರಿಗಾಗಿ ನಮ್ಮ ಸಂವಿಧಾನ ತುಂಬಾ ಕಾನೂನು ರೂಪಿಸಿದೆ ಎಂದು ಮಹಿಳಾ ಕಾನೂನುಗಳ ಕುರಿತು ತಿಳಿಸಿದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಂಪನ್ಮೂಲ ಸಂಸ್ಥೆಯ ಕಾರ್ಯದರ್ಶಿ ಯಾಸ್ಮೀನ್ ಬೇಗಂ ವಹಿಸಿಕೊಂಡಿದ್ದರು, ಈ ಸಂದರ್ಭದಲ್ಲಿ ಭಂಕೂರ ಗ್ರಾಮ ಪಂಚಾಯತ್ ಸದಸ್ಯೆ ವೀಣಾ ನಾರಾಯಣ, ಭಾರತೀಯ ಸ್ಟೇಟ್ ಬ್ಯಾಂಕ್‌ನ ಅದಿಕಾರಿ ಶ್ವೇತಾ ಗಂಧಕರಿ, ಸಂಘಮಿತ್ರ ಗ್ರಾಮೀಣ ಹಣಕಾಸು ಸಂಸ್ಥೆಯ ಉಪ ವ್ಯವಸ್ಥಾಪಕ ಭೀಮರೆಡ್ಡಿ, ಸಂಘಮಿತ್ರ ಗ್ರಾಮೀಣ ಹಣಕಾಸು ಸಂಸ್ಥೆಯ ಅದಿಕಾರಿಗಳಾದ ಬಸವರಾಜ ನಾಟೀಕಾರ, ಪ್ರವೀಣ್ ಕುಮಾರ, ಸಂಪನ್ಮೂಲ ಸಂಸ್ಥೆಯ ಸಿಬ್ಬಂದಿಗಳಾದ ಪ್ರೇಮಲತಾ ಮುಸಳಿ, ಸುಧಾರಾಣಿ ಎಸ್. ಕದ್ದರಗಿ, ಮಹಾದೇವಿ ಎಸ್. ಹೂಗಾರ, ಅಂಬರೇಶ್ ಎಂ. ಪೂಜಾರಿ, ಭೀiರಾವ್ ರಾವೂರ್, ಪಾರ್ವತಿ ಮಡಿವಾಳ, ರಮೇಶ್, ಮುಂತಾದವರು ಹಾಜರಿದ್ದರು.

ಕು. ರೇಣುಕಾ ವರದಿ ಮಂಡಿಸಿದರು, ಗಂಗೂಬಾಯಿ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here