10ರಂದು ಸುರಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಭೆ

0
66

ಕಲಬುರಗಿ: ನಗರದಲ್ಲಿ ವಾಸಿಸಿರುವ ಸುರಪುರ ತಾಲೂಕಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನಾಲ್ಕನೆ ವಾರ್ಷಿಕ ಮಹಾಸಭೆಯನ್ನು ಜುಲೈ ೧೦ರಂದು ಬೆಳಿಗ್ಗೆ ೧೧ಕ್ಕೆ ರಾಮಮಂದಿರ ಹತ್ತಿರದ ಶರಣ ಹರಳಯ್ಯ ಸಮುದಾಯ ಭವನದಲ್ಲಿ ಕರೆಯಲಾಗಿದೆ ಎಂದು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಕಳೆದ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಧೃಢಿಕರಿಸುವುದು, ವರದಿಗಳ ಮಂಡನೆ, ಪರಿಶೀಲನೆ, ನೂತನ ಆಡಳಿತ ಮಂಡಳಿಗೆ ಅನುಮೋದನೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಪಾಲ್ಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here