ಕಲಬುರಗಿ: ಶ್ರೀನಿವಾಸ ಸರಡಗಿ ಹಾಗೂ ಬೋಳೆವಾಡ ಮುಖ್ಯರಸ್ತೆಯಲ್ಲಿನ ಪೋಲ್ ಒಂದನ್ನು ಒಡೆದು ಹಾಳಾಗಿದ್ದ ಕಾರಣ ಬಸ್ ಮತ್ತು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ ಎಂದು ಯುವ ಕಾಂಗ್ರೆಸ್ ಗ್ರಾಮೀಣ ಘಟಕದ ಸಂಯೋಜಕರಾದ ಶಿವಾನಂದ ಆರ್ ಕಿಳ್ಳಿ ದುರಸ್ತಿಗೆ ಆಗ್ರಹಿಸಿದ್ದಾರೆ.
ಶ್ರೀನಿವಾಸ ಸರಡಗಿ ಹಾಗೂ ಸುತ್ತ ಮುತ್ತಲಿನ ತಾಂಡಗಳ ಹಾಗೂ ಬೋಳೆವಾಡ ಗ್ರಾಮದ ಸಾರ್ವಜನಿಕರಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಂಚರಿಸಲು ತುಂಬಾ ಅನಾನುಕೂಲ ಆಗುತ್ತಿದೆ ಆದ ಕಾರಣ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು ತಮ್ಮ ಗಮನಕ್ಕೆ ತೆಗೆದುಕೊಂಡು ಈ ರಸ್ತೆಯಲ್ಲಿನ ಪೋಲ್ ಅನ್ನು ತೆಗೆಸಿ ಹೊಸ ಪೋಲ್ ಹಾಕಿಸಿ ಸಾರ್ವಜನಿಕರಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.