ರಾಷ್ಟ್ರೀಯ ಶಿಕ್ಷಣ ನೀತಿಗೆ ಅಜ್ಞಾನ ಸೇರ್ಪಡೆ: ಎಐಡಿಎಸ್‌ಒ

0
45

ವಾಡಿ: ಹೊಸದಾಗಿ ರಚಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಗೆ ಅವೈಜ್ಞಾನಿಕ ಅಂಶಗಳನ್ನು ಪಠ್ಯದ ವಿಷಯವನ್ನಾಗಿ ಸೇರ್ಪಡೆ ಮಾಡಲು ಸಕಾರವೇ ನೇಮಿಸಿದ ೨೬ ಸದಸ್ಯರನ್ನೊಳಗೊಂಡ ಸಮಿತಿ ವರದಿ ನೀಡಿದ್ದು, ಅದನ್ನು ಕೈಬಿಡಬೇಕು ಎಂದು ಅಖಿಲ ಭಾರತ ಪ್ರಜಾಸತ್ತಾತ್ಮ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಓ) ನಗರ ಸಮಿತಿ ಅಧ್ಯಕ್ಷ ವೆಂಕಟೇಶ ದೇವದುರ್ಗ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಎನ್‌ಇಪಿ ಶಿಕ್ಷಣ ನೀತಿಯನ್ನೇ ಖಂಡಿಸಿದ್ದಾರೆ. ಅತ್ಯಂತ ಅವೈಜ್ಞಾನಿಕ, ಸತ್ಯಕ್ಕೆ ದೂರವಾದ, ಐತಿಹಾಸಿಕ ಘಟನೆಗಳನ್ನು ತಿರುಚಿರುವ ಹಾಗೂ ಗೊಡ್ಡು ವಿಚಾರಗಳನ್ನು ಹರಿಬಿಡುವ ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ರಾಜ್ಯ ಸರ್ಕಾರ ತುದಿಗಾಲ ಮೇಲೆ ನಿಂತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಲು ಹೊರಟಿದೆ. ಆಘಾತಕಾರಿ ಬೆಳವಣಿಗೆ ಏನೆಂದರೆ ಶಾಲೆಗಳಲ್ಲಿ ಕಲಿಸುವ ಸ್ಥಾಪಿತ ವೈಜ್ಞಾನಿಕ ಅಂಶಗಳನ್ನು ಈ ಸಮಿತಿ ಅಲ್ಲಗೆಳೆದಿದೆ ಎಂದು ಆಪಾದಿಸಿದ್ದಾರೆ.

Contact Your\'s Advertisement; 9902492681

ಫೈಥಾಗರಸ್ ಪ್ರಮೇಯ ಹಾಗೂ ಗುರುತ್ವಾಕರ್ಷಣೆ ಕುರಿತ ನ್ಯೂಟನ್‌ರ ಸೇಬಿನ ಘಟನೆಯನ್ನು ’ನಕಲಿ ಸುದ್ದಿ’ ಎಂದು ಈ ಸಮಿತಿ ಹೇಳಿದ್ದಲ್ಲದೆ, ಇದಕ್ಕೆ ಸಂಬಂದಿಸಿದ ಮೂಲಗಳು ವೇದಿಕ ಗಣಿತದಲ್ಲಿಯೆ ಸಿಗುತ್ತವೆ, ಪ್ರಾಚೀನ ಭಾರತದಲ್ಲಿ ಎಲ್ಲವೂ ಇತ್ತು ಎಂದು ತಿಳಿಸಿದೆ. ಅಂದರೆ, ಪ್ರಪಂಚದ ಬೇರೆ ಬೇರೆ ಭಾಗಗಳಿಂದ ದೊರಕಿರುವ ವಿಜ್ಞಾನ, ಸಮಾಜಶಾಸ್ತ್ರ ಇತರೆ ಅಂಶಗಳು ನಕಲಿ ಎಂದಿದೆ. ಪಠ್ಯದ ಇತಿಹಾಸ ವಿಭಾಗದಲ್ಲಿ ವಸಾಹತುಶಾಹಿ ಆಡಳಿತದ ಕುರಿತ ಪಾಠಗಳನ್ನು ಓದುವ ಬದಲು ವಿದ್ಯಾರ್ಥಿಗಳು, ಶೋಷಿತ ಜನತೆಯನ್ನು ಶಿಕ್ಷಣದಿಂದ ದೂರ ಸಂಪೂರ್ಣ ಉಳಿಸಿದ ಭಾರತದ ಪ್ರಾಚೀನ ಜ್ಞಾನಶಾಸ್ತ್ರವನ್ನು ಓದಬೇಕು ಎಂದು ಸಮಿತಿ ಶಿಪಾರಸ್ಸು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಾಪಿತ ಮತ್ತು ವೈಜ್ಞಾನಿಕ ಐತಿಹಾಸಿಕ ಸತ್ಯಗಳನ್ನು ಈ ವರದಿ ಸಂಪೂರ್ಣ ಮೂಲೆಗುಂಪು ಮಾಡಿದೆ. ಹಳೆಯ ಗೊಡ್ಡು ವಿಚಾರಗಳನ್ನೇ ಸತ್ಯವೆಂದು ಬಿಂಬಿಸುತ್ತಿದೆ. ಪಠ್ಯಗಳ ಮೂಲಕ ವಿದ್ಯಾರ್ಥಿಗಳ ಮಧ್ಯೆ ಹರಿಬಿಡುತ್ತಿದೆ. ಇದರಿಂದ ವಿದ್ಯಾರ್ಥಿಗಳ ಆಲೋಚನಾ ಪ್ರಕ್ರಿಯೆ, ಸತ್ಯಾನ್ವೇಷಣೆಯ ತವಕ ಹಾಗೂ ನಿಜವಾದ ಇತಿಹಾಸ ಅರಿಯುವ ಪ್ರಯತ್ನದಿಂದ ಅವರನ್ನು ಸಂಪೂರ್ಣ ದೂರ ಮಾಡಿ ಅವರ ತಾರ್ಕಿಕ ವೈಜ್ಞಾನಿಕ ಆಲೋಚನೆಯನ್ನು ಮೊಟಕುಗೊಳಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪರಿಣಾಮ ವರದಿಯನ್ನು ರಾಜ್ಯ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಬೇಕು. ಶಿಕ್ಷಣದಲ್ಲಿ ಕೇವಲ ವೈಜ್ಞಾನಿಕ ಮನೋಭಾವ ತಾರ್ಕಿಕ ಚಿಂತನೆ ಬಿತ್ತು ಪಠ್ಯಕ್ಕೆ ಆಧ್ಯತೆ ನೀಡಬೇಕು ಎಂದು ವೆಂಕಟೇಶ ದೇವದುರ್ಗ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here