ಸುರಪುರ:ತಾಲೂಕಿನ ಅಮಲಿಹಾಳ ದಿಂದ ಜೊಗಂಡಬಾವಿ ಹೋಗುವ ರಸ್ತೆ ಕಾಮಗಾರಿ ಕಳಪೆಯಾಗಿದ್ದು ಕೂಡಲೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದ ತಹಸೀಲ್ ಕಚೇರಿ ಮುಂದೆ ಜಮಾಯಿಸಿದ ಅನೇಕ ಮುಖಂಡರು,ಅಮಲಿಹಾಳ ಗ್ರಾಮದಿಂದ ಜೊಗುಂಡಬಾವಿಗೆ ಹೋಗುವ ರಸ್ತೆ ಕಾಮಗಾರಿಗೆ ಸುಮಾರು ೪ ಕೋಟಿ ರೂಪಾಯಿ ಅನುದಾನದಲ್ಲಿ ಕಾಮಗಾರಿ ನಿರ್ಮಿಸಲಾಗಿದೆ.ಆದರೆ ಸಂಪೂರ್ಣ ಕಾಮಗಾರಿ ಕಳಪೆಯಾಗಿದ್ದು ಮೇಲ್ನೊಟಕ್ಕೆ ಕಂಡುಬರುತ್ತಿದೆ.
ಇಡೀ ರಸ್ತೆ ಬರೀ ಕೈಯಿಂದ ಕಿತ್ತು ಹಾಕುವಂತಿದೆ.ಆದ್ದರಿಂದ ಇಂತಹ ಕಳಪೆ ಕಾಮಗಾರಿ ಮಾಡಿ ಸರಕಾರ ಕೋಟ್ಯಾಂತರ ರೂಪಾಯಿಗಳ ಲೂಟಿ ಮಾಡಿರುವ ಗುತ್ತಿಗೆದಾರರ ಪರವಾನಿಗೆ ಕಪ್ಪುಪಟ್ಟಿಗೆ ಸೇರಿಸಿ ಕ್ರಿಮಿನಲ್ ಕೇಸ್ ದಾಖಲಿಸಬೇಕು ಮತ್ತು ಸಂಬಂಧಿಸಿರುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.ಇದಕ್ಕಾಗಿ ಕಾಮಗಾರಿ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದರು.
ನಂತರ ತಹಸೀಲ್ ಕಚೇರಿ ಸಿರಸ್ತೆದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ಮಲ್ಲಪ್ಪ ನಾಯಕ ಕಬಾಡಗೇರ,ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ನಾಯಕ ಕಲ್ಲೋಡಿ,ಮುಖಂಡರಾದ ಗೋಪಾಲ ನಾಯಕ ದೇವರಮನಿ,ಮೌನೇಶ ದಳಪತಿ ಶಖಾಪುರ,ಮಲ್ಲು ಪಾಟೀಲ್ ರುಕ್ಮಾಪುರ,ದೇವು ನಾಯಕ,ರವಿಕುಮಾರ ಬಿಚ್ಚಗತ್ತಿ,ಬಸಪ್ಪ ಹೆಳವರ,ರಂಗನಾಥ ಶಿಬಾರಬಂಡಿ,ದೊಡ್ಡ ಮರೆಪ್ಪ,ರಾಘವೇಂದ್ರ,ತಿಪ್ಪಣ್ಣ ,ಮೌನೇಶ ಹಾಲಗೇರಾ ಸೇರಿದಂತೆ ಅನೇಕರಿದ್ದರು.