ಕಟ್ಟಡ ಕಾರ್ಮಿಕರಿಗೆ ಸುರಕ್ಷತೆ ಸೌಲಭ್ಯ, ವಸತಿ ಯೋಜನೆ ಜಾರಿಗೆ ಆಗ್ರಹಿಸಿ ಮನವಿ

1
26

ಕಲಬುರಗಿ: ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಮಾಡುವುದಕಿಂತ ಮೋದಲು ಕಾರ್ಮಿಕ ಅದಿಕಾರಿಗಳು ಪರಿಶೀಲನೆ ನಡೆಸಿ ಕಾರ್ಮಿಕರಿಗೆ  ಎಲ್ಲಾತರದ ಸುರಕ್ಷತೆ ಇದ್ದರೆ ಮಾತ್ರ ಮನೆ ಕಟ್ಟಲು ಅನುಮೋದನೆ ಮಾಡಿಕೋಡಬೇಕು ಮತ್ತು ಇತರೆ ಕಾರ್ಮಿಕ ನಿರ್ಮಾಣ ಮಂಡಳಿಯಿಂದ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದಿಂದ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಕಾರ್ಮಿಕರು ಯಾವುದೆ ಸುರಕ್ಷತೆ ಇಲ್ಲದರಿವುದರಿಂದ ಸಾವನಪ್ಪುತಿದ್ದಾರೆ. ಕಟ್ಟಡದ ಮನೆಯ ಮಾಲಿಕರು ಮತ್ತು ಗುತ್ತೇಗೆದಾರರ ಬೇಜವಾಬ್ದಾರಿಯಿಂದ ಸಾವವಿನ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಸಂಘದ ಅಧ್ಯಕ್ಷರಾದ ಭೀಮರಾಯ ಎಂ ಕಂದಳ್ಳಿ ಕಳವಳ ವ್ಯಕ್ತಪಡಿಸಿ, ಇಲಾಖೆ ಮನವಿಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಸಂಘದ ವತಿಯಿಂದ ಜಿಲ್ಲೆಯಲ್ಲಿ ಎಲ್ಲಾ ಕಟ್ಟಡ ಕಾಮಗಾರಿಗಳು ಸ್ಥಗಿತಗೋಳಿಸಿ ಉಗ್ರ ಹೋರಾಟ ಮಾಡಬೇಕಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.

Contact Your\'s Advertisement; 9902492681

ಅನೇಕ ಬಡ ಕಾರ್ಮಿಕರು ನೀವೆಶನ ಮತ್ತು ವಸತಿ ಇಲ್ಲದೆ ಮೂಲ ಸೌರ್ಯದಿಂದ ವಂಚಿತರಾಗಿದ್ದಾರೆ. ಕೆಂದ್ರ ಮತ್ತು ರಾಜ್ಯ ಸರಕಾರದಿಂದ ವಿವಿದ ನಿಗಮ ಮಂಡಳಿಗಳು ಕಾಲ ಕಾಲಕ್ಕೆ ಜಾರಿಗೆ ತರುವ ನಿವೇಷನ ಮತ್ತು ವಸತಿ ಯೋಜನೆಗಳನ್ನು ಅನೇಕ ದಶಕಗಳಿಂದ ಜಾರಿಗೆ ತಂದರು ಕಡು ಬಡವರು ಆರ್ಥಿಕ ಶೈಕ್ಷಣಿಕ ಸಾಮಜಿಕ ಮತ್ತು ಉದ್ಯೋಗಿಕವಾಗಿ ಹಿಂದುಳಿದವರಾಗಿರುವದರಿಂದ ಸರಕಾರದ ವಸತಿ ಯೋಜನೆಗಳ ಸಮರ್ಪಕವಾಗಿ ಜಾರಿಗೊಳ್ಳಿಸಬೇಕೆಂದು ಆಗ್ರಹಿಸಿದರು.

ಕಾರ್ಮಿಕರಿಗೆ ಸಂಬಂಧಿಸಿದಂತೆ ಸರಕಾರದ ಸೌಲಭ್ಯಗಳ ಕುರಿತು ಇಲಾಖೆ ಪ್ರಚಾರ ಮಾಡುವ ಮೂಲಕ ಹೆಚ್ಚಿನ ಕಾರ್ಮಿಕರಿಗೆ ಇದರ ಲಾಭ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಪ್ರಚಾರವನ್ನು ಮಾಡುವ ಮೂಲಕ ಜಾಗೃತಿ ಮೂಡಿಸಬೇಕೆಂದು ಸಂಘದ ಉಪಾ ಅಧ್ಯಕ್ಷಾರದ ಶೀವಕುಮಾರ ಎಸ್ ಒತ್ತಾಯಿಸಿದರು.

ಮಹಾಂತೆಶ  ದೋಡ್ಡಮನಿ, ಮರೆಪ್ಪಾ ರತ್ನಡಗಿ, ಶರಣು ಬಳಿಚಕ್ರ, ಚಂದ್ರಕಾಂತ ತುಪ್ಪುದಕಲ್, ದೇವಿಂದ್ರ ಊಳಾಗಡ್ಡಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here