ಯುವ ಸಮುದಾಯ ದುಶ್ಚಟಗಳಿಗೆ ಆಕರ್ಷಿತರಾಗುತ್ತಿರುವುದು ಆತಂಕಕಾರಿ: ಮೆಹರಾಜ ಪಟೇಲ

0
60

ಕಲಬುರಗಿ: ಸಮಾಜದಲ್ಲಿ ದುಶ್ಚಟಗಳ ದಾಸರಾಗಿ ಪ್ರತಿ ಎರಡು ಗಂಟೆ ಹತ್ತು ನಿಮಿಷಕ್ಕೊಬ್ಬರು ಪ್ರಾಣ ಕಳೆದುಕೊಳ್ಳುತ್ತಿದ್ದು ಇದರ ಕುರಿತು ಗಂಭೀರವಾದ ಚಿಂತನೆ ನಡೆಯುವುದು ಅತ್ಯಗತ್ಯವಾಗಿದ್ದು ವಯಸ್ಕರರೂ ಸೇರಿದಂತೆ  ಯುವ ಸಮುದಾಯ ದುಶ್ಚಟಗಳಿಗೆ ಆಕರ್ಷಿತರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆಯೆಂದು ಸಾಮಾಜಿಕ ಹೋರಾಟಗಾರ ಮೆಹರಾಜ ಪಟೇಲ ತಾವರಗೇರಾ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ತಾವರಗೇರಾ ಸಿದ್ದಾರೂಢ ಮಠದಲ್ಲಿ ಶ್ರೀನಿವಾಸ ಸರಡಗಿಯ ಶ್ರೀ ಗುರು ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದ ವತಿಯಿಂದ ಆಯೋಜಿಸಿದ ನಶಮುಕ್ತ ನಾಡು ಜಾಗೃತಿ ಅಭಿಯಾನವನ್ನು ಸಸಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಆಧುನಿಕ ಸಂಸ್ಕೃತಿ ಪಾಶ್ಚಾತ್ಯರ ಪ್ರಭಾವದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಇಂತಹ ಹೊತ್ತಿನಲ್ಲಿಯೇ ದುಶ್ಚಟಗಳು ಎಲ್ಲೆಲ್ಲೂ ವಿಜೃಂಭಿಸುತ್ತಿರುವುದು ಮತ್ತಷ್ಟು ಜನತೆ ಮತ್ತು ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ ಎಂದು ನುಡಿದ ಅವರು ಜೀವಪರ ಚಿಂತನೆ, ಜನಪರ ಆಲೋಚನೆ ಮಾಡುವುದು ಅವಶ್ಯವಾಗಿದ್ದು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯವೆಂದು ನುಡಿದರು.  ಚಟಗಳು ಜಾತಿ, ಧರ್ಮ, ಪ್ರಾಂತ, ಪ್ರದೇಶ ಮೀರಿ ಸರ್ವ ವ್ಯಾಪ್ತಿ ಆವರಿಸಿಕೊಂಡಿದ್ದು ಇದನ್ನು ಬೇರು ಸಮೇತ ಕಿತ್ತೊಗೆಯಬೇಕೆಂದು ಕರೆ ನೀಡಿದರು.

Contact Your\'s Advertisement; 9902492681

ತಾವರಗೇರಾ ಸಿದ್ದಾರೂಢ ಮಠದ ಪೂಜ್ಯ ಶ್ರೀ ಸಿದ್ದಾರೂಢ ಶಿವಯೋಗಿ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ನ್ಯಾಯವಾದಿಗಳಾದ ಅಮೃತಪ್ಪ ಮಲಕಪ್ಪಗೋಳ, ಹಣಮಂತರಾಯ ಅಟ್ಟೂರ ಮಾತನಾಡಿದರು.  ನ್ಯಾಯವಾದಿಗಳಾದ ಜಗನ್ನಾಥ ಪಾಟೀಲ ಅವರಾದ, ಶಿವಕುಮಾರ ಪಸಾರ, ವಿಜಯ ಅಫಜಲಪೂರ, ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಗಿರೀಶ ನವಣಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಶಂಭುಲಿಂಗಯ್ಯ ಮಠಪತಿ ಸ್ವಾಗತಿಸಿದರು, ಕಾರ್ತಿಕ ಸ್ವಾಮಿ ವೇದ ಘೋಷ ನೆರವೇರಿಸಿದರು, ಅರವಿಂದ ಶಾಸ್ತ್ರಿ ಪ್ರಾರ್ಥಿಸಿದರು, ನಾಗಲಿಂಗಯ್ಯ ಮಠಪತಿ ನಿರೂಪಿಸಿದರು.  ಸಮಾರಂಭದಲ್ಲಿ ಶ್ರೀಶೈಲ ಸ್ವಾಮಿ ರಾಜಾಪೂರ, ಸಂತೋಷ ಆಡೆ, ಅಣವೀರಯ್ಯ ಸ್ವಾಮಿ ರಾಜಾಪೂರ, ವಿವೇಕಾನಂದ ಗುಂಡಗುರ್ತಿ, ಗಂಗಾಧರ ಸ್ವಾಮಿ ಅಗ್ಗಿಮಠ, ಸಂಜು ಟೆಂಗೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here